AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 62 ವರ್ಷದ ವ್ಯಕ್ತಿಯನ್ನು ಮದುವೆಯಾದ 23ರ ಯುವತಿ

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಇಂಡೋನೇಷ್ಯಾದ ಬಂಕಾ ದ್ವೀಪದಲ್ಲಿ ವಾಸಿಸುತ್ತಿರುವ ಯುವತಿ ತನಗಿಂತ 38 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಅಚ್ಚರಿಯ ವಿಷಯವೆಂದರೆ ಈ ಯುವತಿ ಬಾಲ್ಯದಲ್ಲಿ ತನ್ನ ಪತಿಯ ಮೊದಲ ಮದುವೆಗೆ ಹಾಜರಾಗಿದ್ದಳು.

Viral News: 62 ವರ್ಷದ ವ್ಯಕ್ತಿಯನ್ನು ಮದುವೆಯಾದ 23ರ ಯುವತಿ
ಅಕ್ಷತಾ ವರ್ಕಾಡಿ
|

Updated on: May 22, 2024 | 3:19 PM

Share

ಇಂಡೋನೇಷ್ಯಾದ ಜೋಡಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. 23 ವರ್ಷದ ಯುವತಿಯೊಬ್ಬಳು 62 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಅಚ್ಚರಿಯ ವಿಷಯವೆಂದರೆ ಈ ಹುಡುಗಿ ತನ್ನ ಬಾಲ್ಯದಲ್ಲಿ ಆ ವ್ಯಕ್ತಿಯ ಮೊದಲ ಮದುವೆಗೆ ಹಾಜರಾಗಿದ್ದಳು. ತನ್ನ ಪತಿ ಸೈಫ್ ಅಲಿ ಖಾನ್ ಅವರ ಮೊದಲ ಮದುವೆಯ ಸಮಯದಲ್ಲಿ ತನಗೆ ಕೇವಲ 11 ವರ್ಷ ವಯಸ್ಸಾಗಿತ್ತು ಮತ್ತು ಈ ಮದುವೆಯಲ್ಲಿ ತಾನು ಕೂಡ ಭಾಗಿಯಾಗಿದ್ದೆ ಎಂದು ಯುವತಿ ಕರೀನಾ ಹೇಳಿದ್ದಾಳೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಇಂಡೋನೇಷ್ಯಾದ ಬಂಕಾ ದ್ವೀಪದಲ್ಲಿ ವಾಸಿಸುತ್ತಿರುವ ಮಹಿಳೆ ತನಗಿಂತ 38 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇತ್ತೀಚೆಗೆ, ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಆಕೆ ತನ್ನ ಗಂಡನ ಮೊದಲ ಮದುವೆಗೆ ಅತಿಥಿಯಾಗಿ ಬಂದಿದ್ದೆ ಮತ್ತು ಆ ಸಮಯದಲ್ಲಿ ತನಗೆ ಕೇವಲ 11 ವರ್ಷ ವಯಸ್ಸಾಗಿತ್ತು ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಕೋಮಾದಲ್ಲಿರುವ ಪ್ರೀತಿಯ ಸ್ನೇಹಿತನನ್ನು ಎಚ್ಚರಗೊಳಿಸಲು ಗೆಳೆಯರ ಮುಗ್ಧ ಸಂಭಾಷಣೆ

ನಾನು ಈಗ ಅವರ ಮೂರನೇ ಹೆಂಡತಿಯಾಗಿದ್ದೇನೆ. 62 ವರ್ಷದ ಪತಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಇಂಡೋನೇಷ್ಯಾದಲ್ಲಿ ಇಂತಹ ಮದುವೆ ಇದು ಮೊದಲೇನಲ್ಲಾ, ಇಂತಹ ಹಲವು ಪ್ರಕರಣಗಳು ನಡೆಯುತ್ತಾ ಇರುತ್ತವೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ