ಕಾರು ಅಪಘಾತ; ಗಾಯಗೊಂಡ ಸ್ಥಿತಿಯಲ್ಲೇ ಸೆಲ್ಫಿಗೆ ಪೋಸ್ ನೀಡಿದ ಯುವತಿಯರು
ನ್ಯೂಯಾರ್ಕ್ ಪೋಸ್ಟ್ ಪ್ರಕಾರ , ಇಬ್ಬರು ಯುವತಿಯರು ಶನಿವಾರ ಮೆಕ್ಸಿಕನ್ ನಗರದ ಕ್ಯುರ್ನಾವಾಕಾದಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಆಂಬ್ಯುಲೆನ್ಸ್ ಬರುವವರೆಗೆ ಕಾಯುತ್ತಿದ್ದ ಈ ಯುವತಿಯರು ಫುಟ್ ಪಾತ್ನಲ್ಲಿ ಕುಳಿತು ಒಟ್ಟಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
ಮೆಕ್ಸಿಕೋದಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಇಬ್ಬರು ಯುವತಿಯರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್ ಬರುವವರೆಗೆ ರಸ್ತೆಯಲ್ಲೇ ಕುಳಿತು ಕಾಯುತ್ತಿದ್ದ ಈ ಯುವತಿರು ಗಾಯಗೊಂಡ ಸ್ಥಿತಿಯಲ್ಲೇ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಅಪಘಾತದ ಮಧ್ಯೆ ಈ ಯವತಿಯರ ಅವತಾರ ಕಂಡು ನೆರೆದಿದ್ದವರು ತಬ್ಬಿಬ್ಬಾಗಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ , ಇಬ್ಬರು ಮಹಿಳೆಯರು ಶನಿವಾರ ಮೆಕ್ಸಿಕನ್ ನಗರದ ಕ್ಯುರ್ನಾವಾಕಾದ ಬೀದಿಗಳಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದಾಗ ಐವರು ಮಹಿಳೆಯರು ಕಾರಿನಲ್ಲಿದ್ದರು. ಆದರೆ ಗಾಯಗೊಂಡಿದ್ದ ಇಬ್ಬರು ಯುವತಿಯರು ಫುಟ್ ಪಾತ್ನಲ್ಲಿ ಕುಳಿತು ಒಟ್ಟಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಆಂಬ್ಯುಲೆನ್ಸ್ ಬರುವವರೆಗೆ ಕಾಯುತ್ತಿದ್ದ ಮಹಿಳೆಯರು ಸೆಲ್ಫಿ ತೆಗೆದುಕೊಂಡರು.
ಇದನ್ನೂ ಓದಿ: ಕೋಮಾದಲ್ಲಿರುವ ಪ್ರೀತಿಯ ಸ್ನೇಹಿತನನ್ನು ಎಚ್ಚರಗೊಳಿಸಲು ಗೆಳೆಯರ ಮುಗ್ಧ ಸಂಭಾಷಣೆ
ಈ ಮಧ್ಯೆ, ಅವರ ಕಾರು ರಸ್ತೆಯ ಮಧ್ಯದಲ್ಲಿ ಅದರ ಛಾವಣಿಯ ಮೇಲೆ ಉರುಳಿದ್ದು ಅದರ ಕಿಟಕಿಗಳನ್ನು ಒಡೆದು ಹಾಕಲಾಗಿದೆ. ಅವರೆಲ್ಲರೂ ಮದ್ಯದ ಅಮಲಿನಲ್ಲಿದ್ದ ಶಂಕೆ ವ್ಯಕ್ತವಾಗಿದೆ. ಅಂತಿಮವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಕಾರು ಅಪಘಾತದ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಮೆಕ್ಸಿಕನ್ ಅಧಿಕಾರಿಗಳು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ