Viral Video: ಓಂಕಾರದ ಮಹಿಮೆ; ತಾಯಿ ಓಂಕಾರವನ್ನು ಪಠಿಸುತ್ತಿದ್ದಂತೆ ಅಳುವುದನ್ನು ನಿಲ್ಲಿಸಿದ ಮಗು
ಇಲ್ಲೊಬ್ಬರು ತಾಯಿ ಮಗುನಿನ ಅಳು ನಿಲ್ಲಿಸಲು ಓಂಕಾರ ಮಂತ್ರವನ್ನು ಪಠಿಸಿದ್ದು, ಓಂಕಾರ ನಾದವನ್ನು ಕೇಳುತ್ತಿದ್ದಂತೆ ಜೋರಾಗಿ ಅಳುತ್ತಿದ್ದ ಕಂದಮ್ಮ ಅಳು ನಿಲ್ಲಿಸಿ ಶಾಂತ ರೂಪಕ್ಕೆ ತಿರುಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಲ್ಲಿ ವೈರಲ್ ಆಗಿದ್ದು, ಓಂಕಾರದ ಶಕ್ತಿಯನ್ನು ಕಂಡು ನೆಟ್ಟಿಗರು ಪುಳಕಿತರಾಗಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಓಂಕಾರಕ್ಕೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಂದು ವೇದ ಮಂತ್ರವೂ ಓಂಕಾರದಿಂದಲೇ ಆರಂಭವಾಗುತ್ತದೆ. ಓಂಕಾರವನ್ನು ಪಠಿಸುವುದರಿಂದ ಮನಸ್ಸಿನ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಇದು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಸಿಗೆ ಹಿತ ಅನುಭವವನ್ನು ಉಂಟು ಮಾಡುತ್ತದೆ. ಹೀಗೆ ಓಂಕಾರದ ಅತ್ಯದ್ಭುತ ಪ್ರಯೋಜನಗಳ ಬಗ್ಗೆ ವೈಜ್ಞಾನಿಕವಾಗಿಯೂ ಸಾಬಿತಾಗಿದ್ದು, ವಿದೇಶಿಗರು ಮಕ್ಕಳ ಅಳುವನ್ನು ನಿಲ್ಲಿಸಲು ಕೂಡಾ ಓಂಕಾರವನ್ನು ಪಠಿಸುತ್ತಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ತಾಯಿಯೊಬ್ಬರು ಎಷ್ಟೇ ಪ್ರಯತ್ನ ಪಟ್ಟರೂ ಮಗು ಅಳು ನಿಲ್ಲಿಸದಿದ್ದಾಗ, ಕೊನೆಗೆ ಓಂಕಾರವನ್ನು ಪಠಿಸಿದ್ದಾರೆ. ಓಂಕಾರ ನಾದ ಕೇಳುತ್ತಿದ್ದಂತೆ ಮಗು ತಕ್ಷಣ ಅಳುವನ್ನು ನಿಲ್ಲಿಸಿ, ಶಾಂತವಾಗಿದೆ. ಈ ಅಮೋಘ ದೃಶ್ಯವನ್ನು ಕಂಡು ನೆಟ್ಟಿಗರು ಪುಳಕಿತರಾಗಿದ್ದಾರೆ.
ಈ ಕುರಿತ ವಿಡಿಯೋವನ್ನು @hushaar_giraki ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಓಂಕಾರದ ಮಹಿಮೆ ನೋಡಿ, ನಮ್ಮ ಭಾರತ ನಮ್ಮ ಹೆಮ್ಮೆ” ಎಂಬ ಶಿರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
View this post on Instagram
ವೈರಲ್ ವಿಡಿಯೋದಲ್ಲಿ ಪುಟಾಣಿ ಮಗುವೊಂದು ಜೋರಾಗಿ ಅಳುತ್ತಿರುವ ದೃಶ್ಯವನ್ನು ಕಾಣಬಹುದು. ತಾಯಿ ಏನೇ ಮಾಡಿದರೂ ಕೂಡಾ ಮಗು ಅಳುವುದನ್ನು ನಿಲ್ಲಿಸುವುದಿಲ್ಲ, ಆಗ ಆಕೆ ಓಂಕಾರವನ್ನು ಪಠಿಸಲು ಆರಂಭಿಸುತ್ತಾಳೆ. ಓಂಕಾರ ನಾದವನ್ನು ಕೇಳುತ್ತಿದ್ದಂತೆ ತಕ್ಷಣ ಅಳು ನಿಲ್ಲಿಸಿ ಮಗು ಶಾಂತ ರೂಪಕ್ಕೆ ತಿರುಗಿದೆ.
ಇದನ್ನೂ ಓದಿ: ಹೆದ್ದಾರಿ ದಾಟುತ್ತಿದ್ದಾಗ ಹುಲಿಗೆ ಡಿಕ್ಕಿ ಹೊಡೆದ ಟ್ರಕ್, ರಸ್ತೆಯಲ್ಲಿ ನರಳಿ ಹುಲಿ ಸಾವು
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಅತ್ಯದ್ಭುತ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ