AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೆದ್ದಾರಿ ದಾಟುತ್ತಿದ್ದಾಗ ಹುಲಿಗೆ  ಡಿಕ್ಕಿ ಹೊಡೆದ ಟ್ರಕ್, ರಸ್ತೆಯಲ್ಲಿ ನರಳಿ ಹುಲಿ ಸಾವು 

ಮಹಾರಾಷ್ಟ್ರದ ನವೆಂಗಾವ್ ನಾಗ್ಜಿರಾ ಅಭಯಾರಣ್ಯದ ಮೂಲಕ ಹಾದು ಹೋಗುವ ಭಂಡಾರಾ-ಗೊಂಡಿಯಾ ಹೆದ್ದಾರಿಯಲ್ಲಿ ವೇಗವಾಗಿ ಬಂದಂತಹ ಟ್ರಕ್ ರಸ್ತೆ ದಾಡುತ್ತಿದ್ದ ಹುಲಿಗೆ ಡಿಕ್ಕಿ ಹೊಡೆದಿದೆ.  ಗಂಭೀರ ಗಾಯಗಳಾದ ಹುಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಮೂಕ ಜೀವಿ ಸಾವನ್ನಪ್ಪಿದೆ. ಈ ಹೃದಯ ವಿದ್ರಾವಕ ಘಟನೆಯ  ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Viral Video: ಹೆದ್ದಾರಿ ದಾಟುತ್ತಿದ್ದಾಗ ಹುಲಿಗೆ  ಡಿಕ್ಕಿ ಹೊಡೆದ ಟ್ರಕ್, ರಸ್ತೆಯಲ್ಲಿ ನರಳಿ ಹುಲಿ ಸಾವು 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:May 22, 2024 | 4:18 PM

Share

ರಾಷ್ಟ್ರೀಯ ಅಭಯಾರಣ್ಯಗಳ ಮೂಲಕ ಹಾದು ಹೋಗುವ ರಸ್ತೆಯಾಗಿರಲಿ, ಅಥವಾ ಇನ್ನಾವುದೇ ಹೆದ್ದಾರಿಗಳಾಗಿರಲಿ, ಅಲ್ಲಿ ಅತ್ಯಂತ ಜಾಗರೂಕವಾಗಿ ನಿಧಾನಕ್ಕೆ ವಾಹನಗಳನ್ನು ಚಲಾಯಿಸುವುದು ತುಂಬಾನೇ ಮುಖ್ಯ. ಏಕೆಂದರೆ ಅಲ್ಲಿ ಕಾಡು ಪ್ರಾಣಿಗಳು ಓಡಾತ್ತಿರುತ್ತವೆ. ಹೀಗೆ  ಅದೆಷ್ಟೋ ಪ್ರಾಣಿಗಳು ರಸ್ತೆ ದಾಡುವ ವೇಳೆ ವೇಗವವಾಗಿ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿವೆ. ಪ್ರಾಣಿಗಳಿಗೆ ತೊಂದರೆಯಾಗದಂತೆ ನಿಧಾನಕ್ಕೆ ವಾಹನಗಳನ್ನು ಚಲಾಯಿಸಿ ಎಂದು ಹೇಳಿದರೂ ಬುದ್ಧಿಗೇಡಿ ಜನರು ಪದೇ ಪದೇ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಇದೀಗ  ಮಹಾರಾಷ್ಟ್ರದ ನವೆಂಗಾವ್ ನಾಗ್ಜಿರಾ ಅಭಯಾರಣ್ಯದ ಮೂಲಕ ಹಾದು ಹೋಗುವ ಭಂಡಾರಾ-ಗೊಂಡಿಯಾ ಹೆದ್ದಾರಿಯಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿದ್ದು, ವೇಗವಾಗಿ ಬಂದಂತಹ ಟ್ರಕ್ ರಸ್ತೆ ದಾಡುತ್ತಿದ್ದ ಹುಲಿಗೆ ಡಿಕ್ಕಿ ಹೊಡೆದಿದೆ.  ಗಂಭೀರ ಗಾಯಗಳಾದ ಹುಲಿ ಸಾವನ್ನಪ್ಪಿದೆ.

ವರದಿಗಳ ಪ್ರಕಾರ ಅಪಘಾತ ಸಂಭವಿಸುತ್ತಿದ್ದಂತೆ,  ಈ ಘಟನೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಯಿತು, ನಂತರ ತೀವ್ರವಾಗಿ ಗಾಯಗೊಂಡ ಹುಲಿಯನ್ನು  ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರಕ್ಕೆ ರವಾನಿಸಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಹುಲಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಈ ಕುರಿತ ವಿಡಿಯೋವನ್ನು ಪ್ರತೀಕ್ ಸಿಂಗ್ (@Prateek34381357) ಎಂಬವರು ತಮ್ಮ ಎಕ್ಸ್ ಖಾತೆಯನ್ನು ಹಂಚಿಕೊಂಡಿದ್ದು, ಹೆದ್ದಾರಿಯಲ್ಲಿ ಅಪಘಾತಕ್ಕೆ ತುತ್ತಾಗಿ ತೀವ್ರವಾಗಿ ಗಾಯಗೊಂಡ ಹುಲಿ ನಡೆಯಲು ಸಾಧ್ಯವಾಗದೆ ತೆವಳುತ್ತಾ ರಸ್ತೆ ದಾಟುವಂತಹ ಹೃದಯವಿದ್ರಾವಕ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕೋಮಾದಲ್ಲಿರುವ ಪ್ರೀತಿಯ ಸ್ನೇಹಿತನನ್ನು ಎಚ್ಚರಗೊಳಿಸಲು ಗೆಳೆಯರ ಮುಗ್ಧ ಸಂಭಾಷಣೆ

ಒಂದು ದಿನದ  ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹುಲಿಯ ಸಾವಿಗೆ ಕಾರಣವಾದ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:30 pm, Wed, 22 May 24