Viral Video: ಕೋಮಾದಲ್ಲಿರುವ ಪ್ರೀತಿಯ ಸ್ನೇಹಿತನನ್ನು ಎಚ್ಚರಗೊಳಿಸಲು ಗೆಳೆಯರ ಮುಗ್ಧ ಸಂಭಾಷಣೆ

ಅಪಾಯಕಾರಿ ಕಟ್ಟಡದಿಂದ ಕೆಳಗೆ ಬಿದ್ದು, ಕಳೆದ ಆರು ವರ್ಷಗಳಿಂದ ಕೋಮಾದಲ್ಲಿರುವ ಆಶ್ರಯ್ ಭಾಟಿಯಾ ಎಂಬ ಬಾಲಕ ಹೇಗಾದರೂ ಕೋಮಾದಿಂದ ಹೊರಬರಬೇಕು ಎಂದು ಆತನ ಸ್ನೇಹಿತರು ಆಗಾಗ್ಗೆ  ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಗೆಳೆಯನ ಜೊತೆಗೆ ಮುಗ್ಧ ಸಂಭಾಷಣೆಯಲ್ಲಿ ತೊಡಗುತ್ತಾರೆ. ಪವಿತ್ರ ಸ್ನೇಹ ಸಂಬಂಧದ ಈ  ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರ ನಿಷ್ಕಲ್ಮಶ ಸ್ನೇಹ ಬಾಂಧವ್ಯಕ್ಕೆ ನೆಟ್ಟಗರು ಮನಸೋತಿದ್ದಾರೆ.  

Viral Video: ಕೋಮಾದಲ್ಲಿರುವ ಪ್ರೀತಿಯ ಸ್ನೇಹಿತನನ್ನು ಎಚ್ಚರಗೊಳಿಸಲು ಗೆಳೆಯರ ಮುಗ್ಧ ಸಂಭಾಷಣೆ
Follow us
ಮಾಲಾಶ್ರೀ ಅಂಚನ್​
| Updated By: ರಮೇಶ್ ಬಿ. ಜವಳಗೇರಾ

Updated on:May 27, 2024 | 7:10 PM

ಸ್ನೇಹ ಎಂಬುದು ಒಂದು ಸುಂದರ ಬಂಧ.  ಈ ಪವಿತ್ರ ಸಂಬಂಧದಲ್ಲಿ ಅಮ್ಮನ ಪ್ರೀತಿ, ಅಪ್ಪನ ಕಾಳಜಿ, ಅಕ್ಕನ ಅಕ್ಕರೆ, ಅಣ್ಣನ ರಕ್ಷೆ, ತಮ್ಮನ ತರ್ಲೆ, ತಂಗಿಯ ತುಂಟತನ ಹೀಗೆ ಎಲ್ಲವನ್ನು ಕಾಣಬಹುದು.   ನಾವು ಕಷ್ಟದಲ್ಲಿದ್ದಾಗ ನಮ್ಮ ಸಹಾಯಕ್ಕೆ ಸಂಬಂಧಿಕರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರಾಣ ಸ್ನೇಹಿತರು ಮಾತ್ರ ಎಂತಹದ್ದೇ  ಕಷ್ಟದಲ್ಲಿ ನಮ್ಮ ಜೊತೆಯಾಗಿ ನಿಲ್ಲುತ್ತಾರೆ. ನಮಗೆ ಧೈರ್ಯ ತುಂಬುತ್ತಾರೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಕೋಮಾದಲ್ಲಿರುವ ಗೆಳೆಯ ನಮ್ಮ ಜೊತೆ ಮಾತನಾಡಲು ಸಾಧ್ಯವಿಲ್ಲ, ಆದರೆ ನಾವು ಅವನ ಜೊತೆಗೆ  ಪ್ರೀತಿಯ ಮಾತುಗಳನ್ನಾಡಿ ಆತನನ್ನು  ಕೋಮಾದಿಂದ ಹೊರಗೆ ಬರುವಂತೆ ಮಾಡುತ್ತೇವೆ ಎಂದು ಸ್ನೇಹಿತರು ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಗೆಳೆಯನ ಜೊತೆಗೆ ಮುಗ್ಧ ಸಂಭಾಷಣೆಯಲ್ಲಿ ತೊಡಗುತ್ತಾರೆ. ಪವಿತ್ರ ಸ್ನೇಹ ಸಂಬಂಧದ ಈ  ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೆಹಲಿಯ ಆಶ್ರಯ್ ಭಾಟಿಯಾ ಎಂಬ ಪುಟ್ಟ ಹುಡುಗ ಅಪಾರ್ಟ್‌ಮೆಂಟ್ ಮಾಲೀಕರ ನಿರ್ಲಕ್ಷ್ಯದ ಕಾರಣದಿಂದ ಓಪನ್‌ ಲಿಫ್ಟ್‌ನಲ್ಲಿ ಚಲಿಸುವಾಗ ಆಯ ತಪ್ಪಿ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಇದರಿಂದ ಆತನ ಮೆದುಳಿಗೆ ಗಂಭೀರ ಗಾಯಗಳಾಗಿದ್ದು, ಕಳೆದ ಆರು ವರ್ಷಗಳಿಂದ ಬಾಲಕ ಕೋಮಾದಲ್ಲಿದ್ದಾನೆ. ಮಾಲೀಕರ ವಿರುದ್ಧ ದೂರನ್ನು ನೀಡಿದರೂ ತಪ್ಪಿತಸ್ಥರ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಜೀವ ಬೆದರಿಕೆಯ ನಡುವೆಯೂ ಆಶ್ರಯ್‌ ಪೋಷಕರು ಏಕಾಂಗಿಯಾಗಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಇತ್ತ ಕಡೆ ಸ್ನೇಹಿತನ್ನು ಕೋಮಾದಿಂದ ಹೊರ ಬರುವಂತೆ ಮಾಡಲು ಆಶ್ರಯ್‌ ಸ್ನೇಹಿತರು ಆತನ ಆರೈಕೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಹಲವರಿಗೆ ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು @lawwalaladka_ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಪ್ರೀತಿಯ ಗೆಳೆಯ ಕೋಮಾದಿಂದ ಹೊರ ಬರುವಂತೆ ಮಾಡಲು ಸ್ನೇಹಿತರು ಆತನ ಜೊತೆಗೆ ಮುಗ್ಧ ಸಂಭಾಷನೆಯನ್ನು ನಡೆಸುವಂತಹ ದೃಶ್ಯವನ್ನು ಕಾಣಬಹುದು.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:56 am, Wed, 22 May 24