Viral Video: ಹಲೋ ಎಂಚ ಉಲ್ಲರ್, ಇಂಡೋನೇಷ್ಯಾದಲ್ಲಿ  ತುಳು ಮಾತನಾಡಿದ ಡಾ. ಬ್ರೋ 

ಡಾ. ಬ್ರೋ ನಿನ್ನೆಯಷ್ಟೇ ತಮ್ಮ ಯೂಟ್ಯೂಬ್ ಚಾನೆಲ್ ಅಲ್ಲಿ ಇಂಡೋನೇಷ್ಯಾ ಪ್ರವಾಸದ ವ್ಲೋಗ್ ಒಂದನ್ನು ಹಂಚಿಕೊಂಡಿದ್ದರು.  ಆ ವಿಡಿಯೋದಲ್ಲಿ ಅವರು ವಿದೇಶಿಗರೊಂದಿಗೆ ತುಳು ಭಾಷೆಯಲ್ಲಿ ಮಾತನಾಡಿದ್ದನ್ನು ಕಾಣಬಹುದು.  ತುಳು ಭಾಷೆಯಲ್ಲಿ ಮಾತನಾಡಿದ ಈ ವಿಡಿಯೋ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Viral Video: ಹಲೋ ಎಂಚ ಉಲ್ಲರ್, ಇಂಡೋನೇಷ್ಯಾದಲ್ಲಿ  ತುಳು ಮಾತನಾಡಿದ ಡಾ. ಬ್ರೋ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 10, 2024 | 5:35 PM

ಕನ್ನಡಿಗರ ಅಚ್ಚುಮೆಚ್ಚಿನ ಯುಟ್ಯೂಬರ್‌ಗಳಲ್ಲಿ ಡಾ. ಬ್ರೋ ಖ್ಯಾತಿಯ ಯೂಟ್ಯೂಬರ್‌ ಗಗನ್‌ ಶ್ರೀನಿವಾಸ್‌ ತುಂಬಾನೇ ಜನಪ್ರಿಯರು. ಇವರು ಕನ್ನಡಿಗರ ಅಚ್ಚುಮೆಚ್ಚಿನ ಯೂಟ್ಯೂಬರ್‌ ಅಂತಾನೇ ಹೇಳ್ಬೋದು. ʼನಮಸ್ಕಾರ ದೇವ್ರುʼ ಎಂದು ವಿವಿಧ ದೇಶಗಳನ್ನು ಸುತ್ತಿ  ಅಲ್ಲಿನ  ಅಲ್ಲಿನ ವಿಶೇಷತೆಗಳ ಕುರಿತು ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾಹಿತಿ ನೀಡುವ ಇವರ ಚಾನೆಲ್‌ ಗೆ ಸಾಕಷ್ಟು ವೀಕ್ಷಕರಿದ್ದಾರೆ. ಇದೀಗ ಅವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ  ತಮ್ಮ ಇಂಡೋನೇಷ್ಯಾ ಪ್ರವಾಸದ ವ್ಲೋಗ್‌ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿದೇಶಿಗರೊಂದಿಗೆ ಡಾ. ಬ್ರೋ ತುಳು ಭಾಷೆಯಲ್ಲಿ ಮಾತನಾಡಿರುವಂತಹ ವಿಡಿಯೋ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

ಈ ಕುರಿತ ವಿಡಿಯೋ ತುಣುಕೊಂದನ್ನು ತುಳು ಕಂಟೆಂಟ್‌ ಕ್ರಿಯೇಟರ್‌ ಶರಣ್‌ ಚಿಲಿಂಬಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ (@the_powerhouse_vines) ಯಲ್ಲಿ ಹಂಚಿಕೊಂಡಿದ್ದಾರೆ. ಕೆಲ ಸಮಯಗಳ ಹಿಂದೆ ಡಾ. ಬ್ರೋ ಮಂಗಳೂರಿಗೆ ಭೇಟಿ ನೀಡಿದ್ದಂತಹ ಸಂದರ್ಭದಲ್ಲಿ ಶರಣ್‌ ಚಿಲಿಂಬಿ ಎಂಚ ಉಲ್ಲರ್‌ (ಹೇಗಿದ್ದೀರಿ) ಎಂಬ ತುಳು ಪದವನ್ನು ಕಲಿಸಿಕೊಟ್ಟಿದ್ದರು.  ಇದೀಗ ಇಂಡೋನೇಷ್ಯಾದಲ್ಲಿಯೂ ಡಾ. ಬ್ರೋ How are you ಬದಲಿಗೆ ಎಂಚ ಉಲ್ಲರ್‌ ಎಂದು ತುಳು ಭಾಷೆಯಲ್ಲಿ ಮಾತನಾಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಇಂಡೋನೇಷ್ಯಾದಲ್ಲಿ ಡಾ. ಬ್ರೋ ಗಾಡಿಯಲ್ಲಿ ಹೋಗುತ್ತಿರುವಾಗ ಅಲ್ಲಿನ ಸ್ಥಳೀಯರಿಗೆ ಕೈಬೀಸಿ ಹಲೋ… ಎಂಚ ಉಲ್ಲರ್‌… ಎಂಚ ಉಲ್ಲರ್‌ ಎಂದು  ತುಳುವಿನಲ್ಲಿ  ಮಾತನಾಡಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸಂತೋಷ, ಆರೋಗ್ಯ ವೃದ್ಧಿಗಾಗಿ ಮುಖಕ್ಕೆ ಮಸಿ ಬಳಿದು ಸಂಭ್ರಮಿಸುತ್ತಾರೆ ಇಲ್ಲಿನ ಜನ 

ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ 10 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಡಾ. ಬ್ರೋ ಅವರ ತುಳು ಭಾಷೆಯನ್ನು ಕೇಳಿ ನೆಟ್ಟಿಗರು ಫುಲ್‌ ಖುಷಿಯಾಗಿದ್ದಾರೆ.

ಮತ್ತಷ್ಟು  ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ