Video: ಗುಬ್ಬಚ್ಚಿಯೊಂದು ಮತ್ತೊಂದು ಗುಬ್ಬಚ್ಚಿಗೆ ಆಹಾರ ತಿನಿಸುತ್ತಿರುವ ಅಪರೂಪದ ದೃಶ್ಯ ವೈರಲ್
ಸಿಗುವ ಅಲ್ಪಸ್ವಲ್ಪ ಆಹಾರವನ್ನು ಹಂಚಿಕೊಂಡು ತಿನ್ನುತ್ತಿರುವ ಈ ಸುಂದರ ದೃಶ್ಯ ನೆಟ್ಟಿಗರ ಮನಗೆದ್ದಿದೆ. @PANKAJPARASHAR ಎಂಬ ಟ್ವಿಟರ್ ಖಾತೆಯಲ್ಲಿ ಈ ಸುಂದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೇ. 10ರಂದು ಹಂಚಿಕೊಂಡಿರುವ ವಿಡಿಯೋ ಇದೀಗಾಗಲೇ 4ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಗುಬ್ಬಚ್ಚಿಯೊಂದು ತನ್ನ ಕೊಕ್ಕಿನಲ್ಲಿ ಬ್ರೆಡ್ ತುಂಡೊಂದನ್ನು ತೆಗೆದುಕೊಂಡು ಹೋಗಿ ಮತ್ತೊಂದು ಗುಬ್ಬಚ್ಚಿಗೆ ನೀಡುವ ಅಪರೂಪದ ಸುಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಚಿಕ್ಕ ಕೊಕ್ಕಿನಲ್ಲಿ ಕೆಲವು ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಮೇಜಿನ ತುದಿಯಲ್ಲಿ ನಿಂತಿರುವ ಮತ್ತೊಂದು ಗುಬ್ಬಚ್ಚಿಗೆ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಗುಬ್ಬಚ್ಚಿ ಸ್ವಾರ್ಥಿಯಾಗದೆ ತನ್ನ ‘ಸಂಗಾತಿ’ಗೆ ಆಹಾರ ನೀಡುತ್ತಿರುವ ಸುಂದರ ನಡೆ ಈಗ ವೈರಲ್ ಆಗಿದೆ. ಸಿಗುವ ಅಲ್ಪಸ್ವಲ್ಪ ಆಹಾರವನ್ನು ಹಂಚಿಕೊಂಡು ತಿನ್ನುತ್ತಿರುವ ಈ ಸುಂದರ ದೃಶ್ಯ ನೆಟ್ಟಿಗರ ಮನಗೆದ್ದಿದೆ. @PANKAJPARASHAR ಎಂಬ ಟ್ವಿಟರ್ ಖಾತೆಯಲ್ಲಿ ಈ ಸುಂದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೇ. 10ರಂದು ಹಂಚಿಕೊಂಡಿರುವ ವಿಡಿಯೋ ಕೆಲಹೊತ್ತಿನಲ್ಲೇ 4ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಹಾಜರಾಗದಿದ್ದರೆ ಎಸ್ಐಟಿ ಅಧಿಕಾರಿಗಳು ಅವರಿದ್ದಲ್ಲಿಗೆ ಹೋಗಿ ಅರೆಸ್ಟ್ ಮಾಡುತ್ತಾರೆ: ಜಿ ಪರಮೇಶ್ವರ್