ಮದುವೆ ಎರಡು ವರ್ಷಗಳ ನಂತರ ಅಂದಿದಕ್ಕೆ ಓಂಕಾರಪ್ಪ ಕೋಪಗೊಂಡಿಲಿಲ್ಲ: ದಿಲೀಪ್, ಮೃತಳ ಸಹೋದರ

ಮದುವೆ ಎರಡು ವರ್ಷಗಳ ನಂತರ ಅಂದಿದಕ್ಕೆ ಓಂಕಾರಪ್ಪ ಕೋಪಗೊಂಡಿಲಿಲ್ಲ: ದಿಲೀಪ್, ಮೃತಳ ಸಹೋದರ

ಅರುಣ್​ ಕುಮಾರ್​ ಬೆಳ್ಳಿ
|

Updated on: May 10, 2024 | 4:27 PM

ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದ ಬಳಿಕ ಅವನು ಗೃಹಪ್ರವೇಶ ಸಮಾರಂಭವೊಂದರಲ್ಲಿ ಭಾಗಿಯಾಗಿ ಅಲ್ಲಿ ಮದ್ಯ ಸೇವಿಸಿದ್ದನಂತೆ. ಅಲ್ಲಿಂದಲೇ ಬಾಲಕಿಯನ್ನು ಕರೆಸಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದ್ದು ಹತ್ಯೆಗೈದಿದ್ದಾನೆ ಎಂದು ದಿಲೀಪ್ ಹೇಳುತ್ತಾನೆ.

ಮಡಿಕೇರಿ: ಸೋಮವಾರಪೇಟೆ ಸೂರ್ಲಬ್ಬಿ ಗ್ರಾಮದಲ್ಲಿ (Surlabbi village) ನಡೆದ ಬಾಲಕಿ ಘೋರ ಹತ್ಯೆ (ghastly murder) ರಾಜ್ಯದ ಜನರಲ್ಲಿ ಆಘಾತವನ್ನುಂಟು ಮಾಡಿದೆ. ಬಾಲಕಿಯ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದ ಓಂಕಾರಪ್ಪ ಹೆಸರಿನ ಯುವಕ ಆಕೆಯ ರುಂಡದ ಜೊತೆಗೆ ಪರಾರಿಯಾಗಿದ್ದು, ಅವನನ್ನು ಸೆರೆಹಿಡಿಯಲು ಪೊಲೀಸರು ಜಾಲ ಬೀಸಿದ್ದಾರೆ. ಏತನ್ಮಧ್ಯೆ, ಮೃತ ಯುವತಿಯ ಸಹೋದರ ದಿಲೀಪ್ (Dilip) ಟಿವಿ9 ವರದಿಗಾರನೊಂದಿಗೆ ಮಾತಾಡಿದ್ದು ಕೊಲೆ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ ಎನ್ನುತ್ತಾನೆ. ಆಘಾತದಲ್ಲಿರುವ ಈ ಹುಡುಗ, ಕೇಳಿದ ಪ್ರಶ್ನೆಗಳಿಗೆ ಚುಟುಕು ಉತ್ತರ ಮಾತ್ರ ನೀಡುತ್ತಾನೆ. ನಿಶ್ವಿತಾರ್ಥ ನಿನ್ನೆಯಷ್ಟೇ ನಡೆದಿದ್ದು ಬಾಲಕಿಯ ಪ್ರಾಯ 18 ವರ್ಷ ತುಂಬುವ ಮುನ್ನ ಮದುವೆ ಮಾಡಕೂದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರಂತೆ. ಈ ಕಾರಣಕ್ಕಾಗೇನೂ ಓಂಕಾರಪ್ಪ ಕೋಪಗೊಂಡಿರಲಿಲ್ಲ ಎಂದು ಹೇಳುವ ದಿಲೀಪ್ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದ ಬಳಿಕ ಅವನು ಗೃಹಪ್ರವೇಶ ಸಮಾರಂಭವೊಂದರಲ್ಲಿ ಭಾಗಿಯಾಗಿ ಅಲ್ಲಿ ಮದ್ಯ ಸೇವಿಸಿದ್ದನಂತೆ. ಅಲ್ಲಿಂದಲೇ ಬಾಲಕಿಯನ್ನು ಕರೆಸಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದ್ದು ಹತ್ಯೆಗೈದಿದ್ದಾನೆ ಎಂದು ಹೇಳುತ್ತಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೊಡಗು: ಎಸ್​ಎಸ್​​ಎಲ್​ಸಿಯಲ್ಲಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಕೊಲೆ