AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಎಸ್​ಎಸ್​ಎಲ್​ಸಿ ಪಾಸಾದ ಬಾಲಕಿಯ ಹತ್ಯೆ ನಡೆದ ಸ್ಥಳದ ಪರಿಶೀಲನೆ ನಡೆಸಿದ ಎಫ್​ಎಸ್​ಎಲ್ ​ತಂಡ

ಕೊಡಗು: ಎಸ್​ಎಸ್​ಎಲ್​ಸಿ ಪಾಸಾದ ಬಾಲಕಿಯ ಹತ್ಯೆ ನಡೆದ ಸ್ಥಳದ ಪರಿಶೀಲನೆ ನಡೆಸಿದ ಎಫ್​ಎಸ್​ಎಲ್ ​ತಂಡ

ಅರುಣ್​ ಕುಮಾರ್​ ಬೆಳ್ಳಿ
|

Updated on: May 10, 2024 | 12:25 PM

ವಿಷಯ ಗೊತ್ತಾದ ಬಳಿಕ ಕುಪಿತಗೊಂಡ ಓಂಕಾರಪ್ಪ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪಾಶವೀ ಕೃತ್ಯವೆಸಗಿದ್ದಾನೆ. ಕೊಲೆ ನಡೆದ ಸ್ಥಳವನ್ನು ಕೊಡಗು ಹೆಚ್ಚುವರಿ ಎಸ್ ಪಿ ಸುಂದರ್ ರಾಜ್, ಎಫ್ ಎಸ್ ಎಲ್ ತಂಡ ಮತ್ತು ಶ್ವಾನದಳ ಪರಿಶೀಲನೆ ನಡೆಸುತ್ತಿರುವುದು ದೃಶ್ಯಗಳಲ್ಲಿ ನೋಡಬಹುದು.

ಮಡಿಕೇರಿ: ಸಮಾಜದಲ್ಲಿ ನಮ್ಮೊಂದಿಗೆ ಬದುಕುತ್ತಿರುವ ಆದರೆ ಮಾನವಕುಲಕ್ಕೆ ಸೇರಿದವರೆಂದು ಕರೆಸಿಕೊಳ್ಳಲು ಯೋಗ್ಯರಲ್ಲದ ಕೆಲವರಲ್ಲಿ ಅದೆಷ್ಟು ಕ್ರೌರ್ಯ (cruelty), ಪೈಶಾಚಿಕತೆ, ಕಾಮುಕತನ ಮಡುಗಟ್ಟಿದೆ ಅಂತ ನಾವು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದ (Surlabbi village) ನಿವಾಸಿ ಮತ್ತು ನಿನ್ನೆಯಷ್ಟೇ ಹತ್ತನೇ ತರಗತಿ ಪಾಸಾಗಿ ಭವಿಷ್ಯದ ಓದಿನ ಬಗ್ಗೆ ಕನಸು ಹೆಣೆಯುತ್ತಿದ್ದ 16-ವರ್ಷದ ಬಾಲಕಿಯೊಬ್ಬಳನ್ನು (minor girl) ಆಕೆಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಬರ್ಬರವಾಗಿ ಕೊಂದು ಹಾಕಿದ್ದಾನೆ. ಅವನಲ್ಲಿ ಅದೆಷ್ಟು ರೋಷ ಮತ್ತು ಸೇಡಿನ ಭಾವನೆ ಮಡುಗಟ್ಟಿತ್ತು ಅಂದರೆ ಬಾಲಕಿಯ ರುಂಡವನ್ನು ಬೇರ್ಪಡಿಸಿ ಅದರೊಂದಿಗೆ ಪರಾರಿಯಾಗಿದ್ದಾನೆ. ಬಾಲಕಿ ಅಪ್ರಾಪ್ತಳಾಗಿದ್ದರಿಂದ ಮದುವೆ ಮುಂದೂಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಕೆಯ ಪೋಷಕರ ಮನವೊಲಿಸಿದ್ದರು. ವಿಷಯ ಗೊತ್ತಾದ ಬಳಿಕ ಕುಪಿತಗೊಂಡ ಓಂಕಾರಪ್ಪ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪಾಶವೀ ಕೃತ್ಯವೆಸಗಿದ್ದಾನೆ. ಕೊಲೆ ನಡೆದ ಸ್ಥಳವನ್ನು ಕೊಡಗು ಹೆಚ್ಚುವರಿ ಎಸ್ ಪಿ ಸುಂದರ್ ರಾಜ್, ಎಫ್ ಎಸ್ ಎಲ್ ತಂಡ ಮತ್ತು ಶ್ವಾನದಳ ಪರಿಶೀಲನೆ ನಡೆಸುತ್ತಿರುವುದು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೊಡಗು: ಎಸ್​ಎಸ್​​ಎಲ್​ಸಿಯಲ್ಲಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಕೊಲೆ