AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ, ಕೆಐಎ ಮೇಲ್ಛಾವಣಿ ಸೋರಿಕೆ, ಲಗೇಜ್ ಬೇಗೆ ನುಗ್ಗಿದ ನೀರು!

ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ, ಕೆಐಎ ಮೇಲ್ಛಾವಣಿ ಸೋರಿಕೆ, ಲಗೇಜ್ ಬೇಗೆ ನುಗ್ಗಿದ ನೀರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 10, 2024 | 11:02 AM

ಏರ್ಪೋರ್ಟ್ ಅಥಾರಿಟಿ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ರನ್ ವೇ ಕ್ಲೀಯರನ್ಸ್ ಸಿಗದ ಕಾರಣ ಸುಮಾರು 18 ವಿಮಾನಗಳನ್ನು ಬೇರೆಡೆ ಡೈವರ್ಟ್ ಮಾಡಲಾಗಿದೆ. ಏರ್ಪೋರ್ಟ್ ಗೆ ನೀರು ನುಗ್ಗೋದು ಅಸಾಮಾನ್ಯ ಸಂಗತಿಯೇನಲ್ಲ; ಆದರೆ, ಒಳಬಂದ ನೀರನ್ನು ಫ್ಲಶ್ ಮಾಡುವ ವ್ಯವಸ್ಥೆ ನಿಲ್ದಾಣದಲ್ಲಿ ಇಲ್ಲದೆ ಹೋದರೆ ನೀರು ತಾನಾಗಿಯೇ ಇಂಗುವರೆಗೆ ಕಾಯಬೇಕಾಗುತ್ತದೆ.

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಖ್ಯಾತಿ ದೊಡ್ಡದು. ವಿಶ್ವದ ಅತ್ಯಂತ ಸುಸಜ್ಜಿತ ಏರ್ಪೋರ್ಟ್ ಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಆದರೆ, ನಿನ್ನೆ ದೇವನಹಳ್ಳಿ (Devanahalli) ಸುತ್ತಮುತ್ತ ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಯಿಂದ ಕೆಐಎ ಸ್ಥಿತಿ ಹದಗೆಟ್ಟಿದೆ. ಲಗೇಜ್ ಬೇ ನಲ್ಲಿ (luggage bay) ನೀರು ಹರಿದು ಬಂದ ಕಾರಣ ಸಿಬ್ಬಂದಿಗೆ ಸಮಸ್ಯೆ ಉಂಟಾಗಿದೆ. ನೆಲಮಟ್ಟದಲ್ಲಿ ಹರಿದು ಬಂದ ನೀರನ್ನು ನಿಭಾಯಿಸಲು ಸಿಬ್ಬಂದಿ ಪರದಾಡುತ್ತಿರುವಾಗಲೇ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನಲ್ಲಿ ಮೇಲ್ಛಾವಣಿಯಿಂದ ಮಳೆನೀರು ಸೋರತೊಡಗಿದೆ. ಏರ್ಪೋರ್ಟ್ ಅಥಾರಿಟಿ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ರನ್ ವೇ ಕ್ಲೀಯರನ್ಸ್ ಸಿಗದ ಕಾರಣ ಸುಮಾರು 18 ವಿಮಾನಗಳನ್ನು ಬೇರೆಡೆ ಡೈವರ್ಟ್ ಮಾಡಲಾಗಿದೆ. ಏರ್ಪೋರ್ಟ್ ಗೆ ನೀರು ನುಗ್ಗೋದು ಅಸಾಮಾನ್ಯ ಸಂಗತಿಯೇನಲ್ಲ; ಆದರೆ, ಒಳಬಂದ ನೀರನ್ನು ಫ್ಲಶ್ ಮಾಡುವ ವ್ಯವಸ್ಥೆ ನಿಲ್ದಾಣದಲ್ಲಿ ಇಲ್ಲದೆ ಹೋದರೆ ನೀರು ತಾನಾಗಿಯೇ ಇಂಗುವರೆಗೆ ಕಾಯಬೇಕಾಗುತ್ತದೆ. ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Kempegowda Statue: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ