ಕಡೂರು ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟ

ಕಡೂರು ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:May 10, 2024 | 3:50 PM

ಚಿಕ್ಕಮಗಳೂರು(Chikmagaluru) ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಅರೇ ನಗ್ನನಾಗಿದ್ದ ಅಬ್ರಾಡ್ ಪ್ರಜೆ, ಬರೀ ಮೈಯಲ್ಲಿ ಸೊಂಟಕ್ಕೆ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ನಗರದಾದ್ಯಂತ ಓಡಾಟ ನಡೆಸಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಪೊಲೀಸರು ಹರಸಾಹಸ ನಡೆಸಿದ್ದು, ಬರೊಬ್ಬರಿ ಅರ್ಧ ಗಂಟೆ ಆತನ ಹಿಂದೆ ಓಡೋಡಿ ಹಿಡಿದಿದ್ದಾರೆ.

ಚಿಕ್ಕಮಗಳೂರು, ಮೇ.10: ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟವಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹೌದು, ಚಿಕ್ಕಮಗಳೂರು(Chikmagaluru) ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಅರೇ ನಗ್ನನಾಗಿದ್ದ ಅಬ್ರಾಡ್ ಪ್ರಜೆ, ಬರೀ ಮೈಯಲ್ಲಿ ಸೊಂಟಕ್ಕೆ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ನಗರದಾದ್ಯಂತ ಓಡಾಟ ನಡೆಸಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಪೊಲೀಸರು ಹರಸಾಹಸ ನಡೆಸಿದ್ದು, ಬರೊಬ್ಬರಿ ಅರ್ಧ ಗಂಟೆ ಆತನ ಹಿಂದೆ ಓಡೋಡಿ ಹಿಡಿದಿದ್ದಾರೆ. ಈ ಮೂಲಕ ಪರ್ಷಿಯನ್ ಪ್ರಜೆ, ಪೊಲೀಸರಿಗೆ ಸರ್ಕಾರಿ ಬಸ್ ನಿಲ್ದಾಣವನ್ನ 3 ಸುತ್ತು ಓಡಿಸಿದ್ದಾನೆ. ಇನ್ನು ಆತ ಪರ್ಷಿಯನ್​ ಭಾಷೆ ಮಾತನಾಡುತ್ತಿದ್ದ. ಈ ಹಿನ್ನಲೆ ಆತನ ಭಾಷೆ ಅರ್ಥವಾಗದೆ, ಹೊಸ ಬಟ್ಟೆಯನ್ನು ಕೊಡಿಸಿ ಮತ್ತು ಊಟ ಮಾಡಿಸಿ ಕಡೂರಿಂದ ಬೆಂಗಳೂರು ರೈಲನ್ನು ಹತ್ತಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 10, 2024 03:50 PM