ತುಮಕೂರು: ನಡು ರಸ್ತೆಯಲ್ಲೇ ಯುವಕರ ವೀಲಿಂಗ್ ಹುಚ್ಚಾಟ; ಅಪಾಯಕಾರಿ ದೃಶ್ಯ ಮೊಬೈಲ್ನಲ್ಲಿ ಸೆರೆ
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈ ವೀಲಿಂಗ್(Wheeling) ಪುಂಡರ ಹಾವಳಿ ಹೆಚ್ಚಾಗಿದೆ. ಇದರಿಂದ ಕೆಲವು ಪಾದಚಾರಿಗಳು ಕೂಡ ಸಾವನ್ನಪ್ಪಿದ್ದಾರೆ. ಆದರೂ ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಕೊರಟಗೆರೆ-ತುಮಕೂರು ಹೆದ್ದಾರಿಯ ಅಜ್ಜಿಹಳ್ಳಿ ಬಳಿ ನಡು ರಸ್ತೆಯಲ್ಲೇ ಯುವಕ‘ರು ವೀಲಿಂಗ್ ಹುಚ್ಚಾಟ ಮೆರೆದಿದ್ದಾರೆ.
ತುಮಕೂರು, ಮಾ.23: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈ ವೀಲಿಂಗ್(Wheeling) ಪುಂಡರ ಹಾವಳಿ ಹೆಚ್ಚಾಗಿದೆ. ಇದರಿಂದ ಕೆಲವು ಪಾದಚಾರಿಗಳು ಕೂಡ ಸಾವನ್ನಪ್ಪಿದ್ದಾರೆ. ಆದರೂ ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಕೊರಟಗೆರೆ-ತುಮಕೂರು ಹೆದ್ದಾರಿಯ ಅಜ್ಜಿಹಳ್ಳಿ ಬಳಿ ನಡು ರಸ್ತೆಯಲ್ಲೇ ಯುವಕ‘ರು ವೀಲಿಂಗ್ ಹುಚ್ಚಾಟ ಮೆರೆದಿದ್ದಾರೆ. ಇದರಿಂದ ಸಹ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಅಪಾಯಕಾರಿ ವೀಲ್ಹಿಂಗ್ ದೃಶ್ಯ ಕಾರಿನಲ್ಲಿ ತೆರಳುತ್ತಿದ್ದವರ ಮೊಬೈಲ್ನಲ್ಲಿ ಸೆರೆಯಾಗಿದ್ದು, ನಡುರಸ್ತೆಯಲ್ಲಿ ಕಿಲೋ ಮೀಟರ್ ಗಟ್ಟಲೇ ಯುವಕರು ವೀಲ್ಹಿಂಗ್ ಮಾಡಿದ್ದಾರೆ. ಈ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Mar 23, 2024 02:19 PM
Latest Videos