AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wheeling Stunt: ವ್ಹೀಲಿಂಗ್ ಸ್ಟಂಟ್ ಮಾಡುತ್ತಿದ್ದ ಪುಂಡರು ಪೊಲೀಸ್ ವಶಕ್ಕೆ, ಮತ್ಯಾವತ್ತೂ ಸಾಹಸಕ್ಕಿಳಿಯದ ಶಿಕ್ಷೆ ಕಾನೂನು ವಿಧಿಸೀತೇ?

Wheeling Stunt: ವ್ಹೀಲಿಂಗ್ ಸ್ಟಂಟ್ ಮಾಡುತ್ತಿದ್ದ ಪುಂಡರು ಪೊಲೀಸ್ ವಶಕ್ಕೆ, ಮತ್ಯಾವತ್ತೂ ಸಾಹಸಕ್ಕಿಳಿಯದ ಶಿಕ್ಷೆ ಕಾನೂನು ವಿಧಿಸೀತೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 07, 2023 | 1:42 PM

ಅವರು ಮತ್ಯಾವತ್ತೂ ವ್ಹೀಲಿಂಗ್ ಹೆಸರಿಗೆ ಹೋಗದಂಥ ಶಿಕ್ಷೆ ಕಾನೂನು ನೀಡಬೇಕು.

ಬೆಂಗಳೂರು: ನಗರದ ಹಲವಾರು ಭಾಗಗಳಲ್ಲಿ ವ್ಹೀಲಿಂಗ್ (Wheeling) ಒಂದು ಪೀಡೆಯಾಗಿ ಪರಿಣಮಿಸಿದೆ. ಅಪಾಯಕಾರಿ ಸ್ಟಂಟ್ ನಲ್ಲಿ ಭಾಗಿಯಾಗುವವರನ್ನು ಪೊಲೀಸರು ಆಗಾಗ ಬಂಧಿಸಿ ಚೆನ್ನಾಗಿ ತದಕುತ್ತಾರಾದರೂ ಪೀಡೆ ತಹಬದಿಗೆ ಬರುತ್ತಿಲ್ಲ. ವ್ಹೀಲಿಂಗ್ ಮಾಡುವ ಪುಂಡರಿಂದ (rogues) ಬೇರೆ ವಾಹನ ಚಾಲಕರಿಗೂ ಆತಂಕ ಎದುರಾಗುತ್ತದೆ. ವಿಡಿಯೋದ ಮೊದಲ ಶಾಟ್ ನಲ್ಲಿ ವ್ಹೀಲಿಂಗ್ ಮಾಡುತ್ತಿರುವ ಮೂರ್ಖನ (idiot) ಹಿಂದೆ ಅವನಷ್ಟೇ ವಿವೇಕಹೀನ ಯುವತಿ ಕೂತಿದ್ದಾಳೆ. ಅವನ ಸಾಹಸದಿಂದ ಅವಳು ರೋಮಾಂಚಿತಳಾಗಿರುವಂತಿದೆ. ಇಬ್ಬರ ತಲೆಗಳ ಮೇಲೂ ಹೆಲ್ಮೆಟ್ ಇಲ್ಲ. ಮತ್ತೊಬ್ಬ ಬ್ಯೂಸಿ ರಸ್ತೆಯಲ್ಲಿ ಸಾಹಸ ಮಾಡುತ್ತಿದ್ದಾನೆ. ಎದರುಗಡೆಯಿಂದ ಬರುತ್ತಿರುವ ವಾಹನಗಳು ಅವನನ್ನು ಕಂಡು ದೂರ ಹೋಗುತ್ತಿವೆ! ಸಂತಸದ ಸಂಗತಿಯೆಂದರೆ ಪೊಲೀಸರು ಇವರನ್ನೆಲ್ಲ ಬಂಧಿಸಿದ್ದಾರೆ. ಪುಂಡರ ಮೇಲೆ ಕೇವಲ ದಂಡ ವಿಧಿಸಿದರೆ ಪಾಠ ಕಲಿಯಲಾರರು. ಅಪ್ಪ ಅಮ್ಮ ದುಡಿತದ ಹಣವನ್ನು ಒಯ್ದು ಕಟ್ಟುತ್ತಾರೆ. ಅವರು ಮತ್ಯಾವತ್ತೂ ವ್ಹೀಲಿಂಗ್ ಹೆಸರಿಗೆ ಹೋಗದಂಥ ಶಿಕ್ಷೆ ಕಾನೂನು ನೀಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ