Karnataka Budget 2023: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ, ಜನಸಾಮಾನ್ಯರ ನಿರೀಕ್ಷೆಗಳೇನು?
ಬೆಂಗಳೂರು ನಿವಾಸಿಯಾಗಿರುವ ಒಬ್ಬ ವ್ಯಕ್ತಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ, ಈ ದಿಶೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ.
ಬೆಂಗಳೂರು: ಬಜೆಟ್ ಅಂದಾಕ್ಷಣ ಪ್ರತಿಯೊಬ್ಬರ ಕಿವಿಗಳು ಚುರುಕಾಗುತ್ತವೆ, ಯಾಕೆಂದರೆ ಸಮಾಜದ ಎಲ್ಲ ವರ್ಗಗಳ ಜನ ಏನೇನೆಲ್ಲ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸುತ್ತಿರುವ ರಾಜ್ಯ ಬಜೆಟ್ ನಲ್ಲಿ (State Budget) ಜನ ಇಟ್ಟುಕೊಂಡಿರುವ ನಿರೀಕ್ಷೆಗಳೇನು ಅಂತ ಕೆಲವರನ್ನು ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಮಾತಾಡಿಸಿ ಕೇಳಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಸಪ್ಪ ಹೆಸರಿನ ರೈತ, ಈ ಬಾರಿ ಮುಂಗಾರು (monsoon) ಕೈಕೊಡುವ ಲಕ್ಷಣಗಳು ಸ್ಪಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಸೂಕ್ತ ಪರಿಹಾರಗಳನ್ನು ಒದಗಿಸಬೇಕು ಅನ್ನುತ್ತಾರೆ. ಬೆಂಗಳೂರು ನಿವಾಸಿಯಾಗಿರುವ ಒಬ್ಬ ವ್ಯಕ್ತಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ, ಈ ದಿಶೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಮಳೆನೀರು ಸರಾಗವಾಗಿ ಹರಿದು ಹೋಗುವುದಕ್ಕೆ ರಾಜಾಕಾಲುವೆಗಳನ್ನು ಸರಿಪಡಿಸಬೇಕು ಎಂದು ಹೇಳುತ್ತಾರೆ. ಪುಷ್ಟಲತಾ ಹೆಸರಿನ ಮಹಿಳೆಯೊಬ್ಬರು, ಶಕ್ತಿ ಮತ್ತು ಯುವ ನಿಧಿ ಯೋಜನೆಗಳು ಬೇಕಿರಲಿಲ್ಲ ಎನ್ನುತ್ತಾರೆ. ಉಚಿತ ಬಸ್ ಪ್ರಯಾಣದ ಸವಲತ್ತಿನಿಂದಾಗಿ ಮಹಿಳೆಯರು ಸುಖಾಸುಮ್ಮನೆ ಪ್ರಯಾಣಿಸುತ್ತಿರುವುದರಿಂದ ಶಾಲಾ ಕಾಲೇಜಿಗಳಿಗೆ ಹೋಗುವ ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಹೇಳುತ್ತಾರೆ. ರಾಜ್ಯ ಮತ್ತು ನಗರಕ್ಕೆ ಒಳ್ಳೆಯದಾಗುವ ಬಜೆಟ್ ಸಿದ್ದರಾಮಯ್ಯ ಮಂಡಿಸಲಿ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ