Prajadhvani Yatre: ಹಲವಾರು ಸಲ ರಾಜ್ಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರ ಲೆಕ್ಕಾಚಾರ ಕೇಳಿದರೆ ದಂಗಾಗುತ್ತೀರಿ!

Prajadhvani Yatre: ಹಲವಾರು ಸಲ ರಾಜ್ಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರ ಲೆಕ್ಕಾಚಾರ ಕೇಳಿದರೆ ದಂಗಾಗುತ್ತೀರಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 24, 2023 | 6:37 PM

ಬಿಜೆಪಿ ಆಡಳಿತಾವಧಿಯಲ್ಲಿ ಹಣದುಬ್ಬರ ಪ್ರಮಾಣ ಶೇಕಡ 6 ರಂತೆ ಲೆಕ್ಕಾಚಾರ ಹಾಕಿದರೂ ರೈತರ ಅದಾಯ ಏರಿಕೆ ಆಗಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ತುಮಕೂರು:  ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಭಾಗವಾಗಿ ಇಂದು ತುಮಕೂರಿನಲ್ಲಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ತುಮಕೂರು ಜಿಲ್ಲೆಯ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಬಗೆಯ ಕೊಡುಗೆ ನೀಡಿಲ್ಲವೆಂದು ಹೇಳಿದರು. ಸರ್ಕಾರೀ ಅಂಕಿ-ಅಂಶಗಳನ್ನು ಆಧಾರವಾಗಿಟ್ಟು ಕೊಂಡು ಮಾತಾಡುತ್ತಿರುವುದಾಗಿ ಹೇಳಿದ ಅವರು 2013-14 ಸಾಲಿನಲ್ಲಿ ಕಾಂಗ್ರೆಸ್ (Congress) ಆಧಿಕಾರಕ್ಕೆ ಬಂದಾಗ ಜಿಲ್ಲೆಯ ರೈತರ ವಾರ್ಷಿಕ ತಲಾ ಆದಾಯ (per capita income) ರೂ. 43, 687 ಇತ್ತು ಮತ್ತು 2018 ರಲ್ಲಿ ಆದು ರೂ. 1,74,884 ಆಗಿತ್ತು ಎಂದರು. ಈಗ ಅಂದರೆ 2023 ರಲ್ಲಿ ಅವರ ತಲಾ ಆದಾಯ ರೂ. 1,84,000 ಆಗಿದೆ ಅಂದರೆ ಕಳೆದ 5 ವರ್ಷಗಳಲ್ಲಿ ಕೇವಲ ರೂ. 9,200 ಮಾತ್ರ ಹೆಚ್ಚಾಗಿದೆ. ಈ ಅವಧಿಯಲ್ಲಿ ಹಣದುಬ್ಬರ ಪ್ರಮಾಣ ಶೇಕಡ 6 ರಂತೆ ಲೆಕ್ಕಾಚಾರ ಹಾಕಿದರೂ ರೈತರ ಅದಾಯ ಏರಿಕೆ ಆಗಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ, ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ತುಮಕೂರು ಜನತೆಗೆ ನೀಡಿರುವ ಕೊಡುಗೆ ಇದು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ