AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ 3BHK ಮನೆ ಹುಡುಕಿ ಕೊಡಿ, ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ’: ಬೆಂಗಳೂರಿನಲ್ಲಿ ಮನೆ ಹುಡುಕಾಟದಿಂದ ಬೇಸತ್ತ ಯುವಕ

ಬೆಂಗಳೂರಿನಲ್ಲಿ ಮನೆ ಹುಡುಕಾಟ ಎಷ್ಟು ಕಷ್ಟ ಎಂಬುದನ್ನು Reddit ಪೋಸ್ಟ್ ತೋರಿಸಿದೆ. ಕೋರಮಂಗಲ, HSR ಲೇಔಟ್‌ನಲ್ಲಿ 3BHK ಮನೆ ಹುಡುಕುತ್ತಿರುವ ವ್ಯಕ್ತಿಯೊಬ್ಬರು ಸಹಾಯ ಮಾಡುವವರಿಗೆ ಅರ್ಧ ತಿಂಗಳ ಬಾಡಿಗೆ ನೀಡುವ ಆಫರ್ ನೀಡಿದ್ದಾರೆ. ₹45,000 ಬಜೆಟ್‌ನೊಂದಿಗೆ ಬಾಡಿಗೆದಾರರು ಉತ್ತಮ ಮನೆಗಳನ್ನು ಹುಡುಕಲು ನಿರಾಶೆಗೊಂಡಿದ್ದಾರೆ. ಹೆಚ್ಚಿನ ಬಾಡಿಗೆ, ಕಡಿಮೆ ಲಭ್ಯತೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.

'ನನಗೆ 3BHK ಮನೆ ಹುಡುಕಿ ಕೊಡಿ, ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ': ಬೆಂಗಳೂರಿನಲ್ಲಿ ಮನೆ ಹುಡುಕಾಟದಿಂದ ಬೇಸತ್ತ ಯುವಕ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Mar 20, 2026 | 12:48 PM

Share

ಬೆಂಗಳೂರು, ಮಾ.20: ಬೆಂಗಳೂರಿನಲ್ಲಿ ಮನೆ ಹುಡುಕುವುದು ಒಂದು ದೊಡ್ಡ ತಲೆ ನೋವು. ಪ್ರತಿದಿನ ಈ ಬಗ್ಗೆ ಒಂದಾದರೂ ಪೋಸ್ಟ್​​ ವೈರಲ್​​ ಆಗುತ್ತ ಇರುತ್ತದೆ. ಇದೀಗ ಮತ್ತೊಂದು ನಿರಾಸೆ ಪೋಸ್ಟ್ವೊಂದು​​​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ಬಗ್ಗೆ ರೆಡ್ಡಿಟ್​​ನಲ್ಲಿ ಯುವಕನೊಬ್ಬ ಹಂಚಿಕೊಂಡಿದ್ದಾನೆ. ಕೋರಮಂಗಲ ಅಥವಾ HSR ಲೇಔಟ್‌ನಂತಹ ಪ್ರದೇಶಗಳಲ್ಲಿ 3BHK ಫ್ಲಾಟ್ ಪಡೆಯಲು ಸಹಾಯ ಮಾಡುವವರಿಗೆ ಅರ್ಧ ತಿಂಗಳ ಬಾಡಿಗೆಯನ್ನು ನೀಡುತ್ತೇನೆ ಎಂದು ಪೋಸ್ಟ್​​​ವೊಂದನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್​​ನಲ್ಲಿ “ನನಗೆ 3bhk ಮನೆ ಹುಡುಕಿ, ನಾನು ನಿಮಗೆ ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ! ನೀವು ಯಾರೇ ಆಗಿರಲಿ, ಬಾಡಿಗೆಗೆ 2.5/3bhk ಒಳ್ಳೆಯ ಮನೆಯನ್ನು ಹೊಂದಿರುವ ಯಾರಾದರೂ ನಿಮಗೆ ತಿಳಿದಿದ್ದರೆ ಮತ್ತು ನಾನು ಆ ಆಸ್ತಿಯನ್ನು ತೆಗೆದುಕೊಂಡರೆ, ನಾನು ನಿಮಗೆ ಅರ್ಧ ತಿಂಗಳ ಬಾಡಿಗೆಯನ್ನು ಕೊಡುತ್ತೇನೆ. ಒಳ್ಳೆಯ ಮನೆಗಳನ್ನು ಹುಡುಕುತ್ತಾ ನಾನು ತುಂಬಾ ನಿರಾಶೆಗೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವೈರಲ್​ ಪೋಸ್ಟ್​:

Bengaluru 3bhk Rent Crisis (1)

Bengaluru 3bhk Rent Crisis (1)

ಕೋರಮಂಗಲ, ಎಚ್‌ಎಸ್‌ಆರ್, ಕೂಡ್ಲು ಗೇಟ್ ಅಥವಾ ಹಲಸೂರಿನಲ್ಲಿ 45,000 ರೂ. ಗರಿಷ್ಠ ಬಜೆಟ್‌ನೊಂದಿಗೆ ಮನೆಗಳನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಏಪ್ರಿಲ್ 1 ರೊಳಗೆ ಈ ಹೊಸ ಮನೆಗೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಲು ಮುಖಾಮುಖಿಯಾಗಿ ಸಿಗಬಹುದು ಅಥವಾ ಈ ಮನೆಯನ್ನು ನೋಡಲು ನನ್ನ ಜತೆಗೆ ಬರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆಟಾ ಉದ್ಯೋಗಿ ಇಂದು ಆಟೋ ಚಾಲಕ?: ವೈರಲ್​​ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ

ಇನ್ನು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿದೆ. ಒಬ್ಬರು 50 ಸಾವಿರ ರೂ.ಗೆ 2BHK ಮನೆ ಸಿಗಬಹುದು. ನನ್ನ ಸ್ವಂತ ಕಟ್ಟಡದಲ್ಲಿ 35 ಸಾವಿರ ರೂ.ಗೆ 2BHK ನೀಡುತ್ತಿದ್ದೇನೆ. ದೊಡ್ಡ ಅಪಾರ್ಟ್ಮೆಂಟ್ ಸಮುದಾಯದ ಬದಲು ಸ್ವತಂತ್ರ ಮನೆಯಲ್ಲಿ ವಾಸಿಸಲು ಪ್ರಯತ್ನಿಸಿ ಎಂದು ಹೇಳಿದ್ದಾರೆ. ನೀವು ಹೇಳಿದ ಪ್ರದೇಶಗಳಲ್ಲಿ ತಿಂಗಳಿಗೆ 50k ಗಿಂತ ಕಡಿಮೆ ಬೆಲೆಗೆ 3bhk?! ಒಂದು ವೇಳೆ ಸಿಕ್ಕರೇ ನನಗೆ ಹೇಳಿ. ನಾನು ಅದೇ ಪ್ರದೇಶಗಳಲ್ಲಿ 3bhk ಗೆ ಬರಲು ನೋಡುತ್ತಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಕುಡ್ಲು ಗೇಟ್‌ ಬಳಿ ಇಷ್ಟು ಕಡಿಮೆ, 3 ಬಿಹೆಚ್​​​ಕೆ ಮನೆ ಸಿಗುವುದು ಕಷ್ಟ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us