Viral Video: ಸಂತೋಷ, ಆರೋಗ್ಯ ವೃದ್ಧಿಗಾಗಿ ಮುಖಕ್ಕೆ ಮಸಿ ಬಳಿದು ಸಂಭ್ರಮಿಸುತ್ತಾರೆ ಇಲ್ಲಿನ ಜನ
ನಮ್ಮಲ್ಲಿ ಏನೋ ಕೆಟ್ಟ ಕೆಲಸ ಮಾಡಿದ್ರೆ ಅಥವಾ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ರೆ ಜನರು ಅಂತಹವರ ಮುಖಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಸಿ ಬಳಿದು ಶಿಕ್ಷಿಸುವಂತಹ ಕ್ರಮ ಇದೆ. ಆದ್ರೆ ಚೀನಾದಲ್ಲಿ ಮಾತ್ರ ಮುಖಕ್ಕೆ ಮಸಿ ಬಳಿದು ಸಂಭ್ರಮಿಸುವಂತಹ ವಿಚಿತ್ರ ಆಚರಣೆಯೊಂದು ರೂಢಿಯಲ್ಲಿದೆ. ಈ ವಿಶಿಷ್ಟ ಆಚರಣೆಯ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತದೆ.
ಪ್ರಪಂಚವು ವಿಚಿತ್ರವಾದ ಆಚರಣೆಗಳು ಮತ್ತು ಸಂಪ್ರದಾಯಗಳಿಂದ ತುಂಬಿವೆ. ವಿಶ್ವದ ಹಲವು ದೇಶಗಳಲ್ಲಿ ನಾನಾ ಸಂಪ್ರದಾಯಗಳು, ರೀತಿ ರಿವಾಜು, ನಂಬಿಕೆಗಳು ಆಚರಣೆಯಲ್ಲಿವೆ. ಇಂದಿಗೂ ಈ ಆಧುನಿಕ ತಾಂತ್ರಿಕ ಜಗತ್ತಿನಲ್ಲಿ ತಮ್ಮ ಹಳೆಯ ಸಂಪ್ರದಾಯಗಳಲ್ಲಿ ಬದುಕುವ ಜನರಿದ್ದಾರೆ. ಅಂತಹದ್ದೇ ವಿಚಿತ್ರ ಆಚರಣೆಯೊಂದನ್ನು ಚೀನಾದಲ್ಲಿ ಆಚರಿಸಲಾಗುತ್ತದೆ. ಹೌದು ಇಲ್ಲಿ ಜನರು ಒಬ್ಬರಿಗೊಬ್ಬರು ಮುಖಕ್ಕೆ ಮಸಿ ಬಳಿಯುವ ಮೂಲಕ ಈ ವಿಶಿಷ್ಟ ಹಬ್ಬವನ್ನು ಆಚರಿಸುತ್ತಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ನೈಋತ್ಯ ಚೀನಾದ ಯನ್ನಾನ್ ಪ್ರಾಂತ್ಯದ ಮೊಜಿಯಾಂಗ್ ಎಂಬ ಪ್ರದೇಶದಲ್ಲಿ ಮುಖಕ್ಕೆ ಮಸಿ ಬಳಿಯುವ ವಿಶಿಷ್ಟ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಇಲ್ಲಿನ ಜನಾಂಗದವರ ಸಾಂಪ್ರದಾಯಿಕ ಹಬ್ಬವಾಗಿದ್ದು, ಸುಮಾರು ಸಾವಿರ ವರ್ಷಗಳ ಹಿಂದಿನ ಈ ಸಂಪ್ರದಾಯವನ್ನು ಇಲ್ಲಿನ ಜನರು ಇಂದಿಗೂ ಆಚರಿಸುತ್ತಾ ಬರುತ್ತಿದ್ದಾರೆ. ದುಷ್ಟ ಶಕ್ತಿಗಳನ್ನು ಹೋಗಲಾಡಿಸಲು, ವಿಪತ್ತುಗಳು ಅಥವಾ ಯಾವುದೇ ಆಪತ್ತುಗಳು ಬರಬಾರದೆಂದು ಹಾಗೂ ಸಂತೋಷ, ಆರೋಗ್ಯ ವೃದ್ಧಿಸಲು ಮುಖಕ್ಕೆ ಮಸಿ ಬಳಿದು ಈ ವಿಶಿಷ್ಟ ಆಚರಣೆಯನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ.
Black Face Festival in Mojiang, Yunnan.
This unique tradition has a history of more than 1000 years. It is said that black ash can drive away bad luck.
[📹 mychinatrip]pic.twitter.com/4gWMQu0VTI
— Massimo (@Rainmaker1973) May 9, 2024
ಈ ಕುರಿತ ವಿಡಿಯೋವೊಂದನ್ನು @Rainmaker1973 ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಜನರು ಒಬ್ಬರಿಗೊಬ್ಬರು ಮುಖಕ್ಕೆ ಮಸಿ ಬಳಿದು, ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಖಾಲಿ ಬಿಯರ್ ಬಾಟಲಿಯಿಂದಲೇ ಲಕ್ಷಾಧಿಪತಿಯಾದ ವ್ಯಕ್ತಿ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಎಂತಹ ವಿಚಿತ್ರ ಆಚರಣೆಯಲ್ಲವೇ ಎಂದು ನೆಟ್ಟಿಗರು ಈ ಸಾಂಪ್ರದಾಯಿಕ ಹಬ್ಬವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ