ಪ್ರೀತಿಸಿದ ಹುಡುಗಿ ಜತೆ ಅದ್ಧೂರಿ ಮದುವೆ, 12 ದಿನದ ನಂತರ ಗೊತ್ತಾಯ್ತು ಇದು ಅದಲ್ಲ
ಸೋಶಿಯಲ್ ಮೀಡಿಯಾದಿಂದ ಹುಟ್ಟುವ ಪ್ರೀತಿ ಎಷ್ಟು ಡೇಂಜರ್ ಎಂಬದನ್ನು ಈ ಸ್ಟೋರಿ ನೋಡಿದ್ರೆ ಗೊತ್ತಾಗಬಹುದು. ಮದುವೆಯಾಗಿ 12 ದಿನಕ್ಕೆ ಹುಡುಗನಿಗೆ ಶಾಕ್ ಕಾದ್ದಿತ್ತು. ಪ್ರೀತಿಸಿ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದ 12 ದಿನಕ್ಕೆ ಹುಡುಗಿಯ ಎಲ್ಲ ಸತ್ಯ ಬಯಲಾಗಿದೆ. ಇಲ್ಲಿದೆ ನೋಡಿ ಸ್ಟೋರಿ
ಪ್ರೀತಿಗೆ ಕಣ್ಣಿಲ್ಲ, ಅದು.. ಇದು ಎಂದೆಲ್ಲ ಹೇಳುತ್ತೇವೆ. ಆದರೆ ಪ್ರೀತಿ ಮಾಡುವಾಗ ಇದನ್ನು ಮಾತ್ರ ನೋಡಲೇಬೇಕು. ಇಲ್ಲೊಂದು ವಿಚಿತ್ರ ಸ್ಟೋರಿ ಇದೆ ನೋಡಿ. ಪ್ರೀತಿಸಿದಾಕೆಯನ್ನೇ ಮದುವೆ ಆಗಬೇಕು ಎನ್ನುವುದು ಎಲ್ಲ ಹುಡುಗರ ಕನಸು, ಅದು ನನಸಾದರೆ ಸ್ವರ್ಗ ಸುಖ, ಆದರೆ ಈ ಸ್ಟೋರಿಯಲ್ಲಿ ಪ್ರೀತಿಸಿದಾಕೆಯನ್ನೇ ಮದುವೆಯಾದ, ಆದರೆ ಮದುವೆಯ ನಂತರ ಆತನಿಗೆ ಸುಖ ಅಲ್ಲ ಆಕೆ ಒಂದು ಬಾರಿ ನರಕ ತೋರಿಸಿದ್ದಾಳೆ. ಮದುವೆಯ ನಂತರ ಆಕೆ ಹುಡುಗಿ ಅಲ್ಲ ಹುಡುಗ ಎಂಬ ಶಾಕಿಂಗ್ ಸುದ್ದಿ ಗೊತ್ತಾಗಿದೆ.
ಇಂಡೋನೇಷಿಯಾದ ವ್ಯಕ್ತಿಯೊಬ್ಬ ತಾನು ಪ್ರೀತಿಸಿದಾಕೆಯನ್ನು ಬಹಳ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಆದರೆ ಮದುವೆಯಾಗಿ ಮನೆಗೆ ಕರೆದುಕೊಂಡು ಬರುವಾಗ ಎಲ್ಲ ಸತ್ಯ ಬಯಲಾಗಿದೆ. ಓಡಿಟಿ ಸೆಂಟ್ರಲ್ ವರದಿಯ ಪ್ರಕಾರ, 26 ವರ್ಷದ ವ್ಯಕ್ತಿಯೊಬ್ಬ ಹುಡುಗಿ ಎಂದು ಹುಡುಗನನ್ನು ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ ಇಲ್ಲೊಂದು ಪ್ರಶ್ನೆ ಖಂಡಿತ ನಿಮ್ಮ ತಲೆಗೆ ಬಂದಿರಬಹುದು. ಈ ವ್ಯಕ್ತಿಗೆ ಪ್ರೀತಿಸಿದಾಗ ಅದು ಹುಡುಗಿಯಲ್ಲ ಹುಡುಗ ಎಂದು ಗೊತ್ತಿರಲಿಲ್ವ, ಇಲ್ಲಿಯೇ ಇರುವುದು ಟ್ವಿಸ್ಟ್.
ಈ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ನೋಡಿ ಪ್ರೀತಿ ಮಾಡಿದ್ದು, ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಡೇಟಿಂಗ್ ಮಾಡಿದ ನಂತರ, ಇಬ್ಬರೂ ವೈಯಕ್ತಿಕವಾಗಿ ಭೇಟಿಯಾಗಲು ನಿರ್ಧರಿಸಿದ್ದಾರೆ. ಹುಡುಗಿಯನ್ನು ನೋಡಿದ ತಕ್ಷಣ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದಾನೆ. ಆತ ಸೋತದ್ದು ಆಕೆಯ ಕಣ್ಣಿನ ಸೌಂದರ್ಯಕ್ಕೆ, ಅವಳು ಯಾವಾಗಲೂ ಹಿಜಾಬ್ ಹಾಕುತ್ತಿದ್ದ ಕಾರಣ ಆತನಿಗೆ ಇದು ಗಂಡೋ ಹೆಣ್ಣೋ ಎಂದು ಗೊತ್ತಾಗಿಲ್ಲ.
ಇದನ್ನೂ ಓದಿ: ಸಂತೋಷ, ಆರೋಗ್ಯ ವೃದ್ಧಿಗಾಗಿ ಮುಖಕ್ಕೆ ಮಸಿ ಬಳಿದು ಸಂಭ್ರಮಿಸುತ್ತಾರೆ ಇಲ್ಲಿನ ಜನ
ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಸರನ್ನು ಅದಿಂಡ ಕಂಜ ಅಜ್ಜಾಹ್ರಾ ಎಂದು ಹಾಕಿಕೊಂಡಿದ್ದಾಳೆ. ಇವನನ್ನು ಭೇಟಿ ಮಾಡುವಾಗ ಹಿಜಾಬ್ ಹಾಕಿಕೊಂಡೇ ಇರುತ್ತಿದ್ದಳು ಎಂದು ಹೇಳಲಾಗಿದೆ. ಅವನಿಗೆ ಸ್ಪರ್ಶ ಕೂಡ ಮಾಡಲು ಬಿಡುತ್ತಿರಲಿಲ್ಲ. ಅಷ್ಟೊಂದು ಸಿಕ್ರೇಟ್ ಕಾಪಾಡಿಕೊಳ್ಳುತ್ತಿದ್ದಳು. ಆತನಿಗೆ ಆಕೆಯ ಬಗ್ಗೆ ಒಂದು ಚೂರು ಅನುಮಾನ ಕೂಡ ಬಂದಿಲ್ಲ. ಮದುವೆಯ ನಂತರ ಮನೆಯವರ ಮುಂದೆಯೂ ಹಿಜಾಬ್ ತೆಗೆದಿಲ್ಲ, ಎಲ್ಲರೂ ಆಕೆ ತುಂಬಾ ನಾಚಿಕೆಯ ಹುಡುಗಿ ಎಂದು ಸುಮ್ಮನಿದ್ದರು. ಆದರೆ ಮದುವೆಯಾಗಿ 12 ದಿನವಾದರೂ ಇದೆ ರೀತಿ ಹಿಜಾಬ್ ಹಾಕಿಕೊಂಡಿರುವುದನ್ನು, ಈಕೆಯ ವರ್ತನೆಯಿಂದ ಹುಡುಗ ಅಸಮಾಧನಗೊಂಡಿದ್ದ, ನಂತರ ಆಕೆ ನಡವಳಿಕೆ ಬಗ್ಗೆ ಅನುಮಾನಪಟ್ಟು, ಎಲ್ಲವನ್ನು ತನಿಖೆ ಮಾಡಿದ್ದಾನೆ, ಆಗಾ ಎಲ್ಲ ಸತ್ಯಾಂಶ ಗೊತ್ತಾಗಿದೆ. ಇದೀಗ ತನಗೆ ವಂಚನೆಯಾಗಿದೆ ಎಂದು ಪೊಲೀಸರಿಗೆ ದೂರ ನೀಡಿದ್ದಾನೆ .
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Fri, 10 May 24