Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಖಾಲಿ ಬಿಯರ್ ಬಾಟಲಿಯಿಂದಲೇ ಲಕ್ಷಾಧಿಪತಿಯಾದ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ತಾನು ಕುಡಿದ ಬಿಸಾಕಿದ ಖಾಲಿ ಬಿಯರ್​ ಬಾಟಲಿಗಳಿಂದಲೇ ಲಕ್ಷಾಧಿಪತಿಯಾಗಿದ್ದಾನೆ. ಇದು ನಿಮಗೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ಸಂಪೂರ್ಣವಾಗಿ ನಿಜ. ಮೊದಲ 6000 ಕ್ಯಾನ್‌ಗಳನ್ನು ಮಾರಾಟ ಮಾಡಿ, $13500 (ರೂ 14 ಲಕ್ಷ) ಗಳಿಸಿದ್ದಾನೆ.

Viral News: ಖಾಲಿ ಬಿಯರ್ ಬಾಟಲಿಯಿಂದಲೇ ಲಕ್ಷಾಧಿಪತಿಯಾದ ವ್ಯಕ್ತಿ
Follow us
ಅಕ್ಷತಾ ವರ್ಕಾಡಿ
|

Updated on: May 10, 2024 | 11:47 AM

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಕುಟುಂಬದ ಆದಾರ ಸ್ತಂಭವಾಗಿದ್ದ ವ್ಯಕ್ತಿಗಳು ಮದ್ಯಪಾನ ಮಾಡುವುದರಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿರುವ ಘಟನೆಗಳನ್ನು ನೀವು ಕಂಡಿರಬಹುದು. ಆದರೆ ಇಲ್ಲೊಂದು ವಿಶೇಷವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು ಇಲ್ಲೊಬ್ಬ ತಾನು ಕುಡಿದ ಬಿಸಾಕಿದ ಖಾಲಿ ಬಿಯರ್​ ಬಾಟಲಿಗಳೇ ಆತನನ್ನು ಲಕ್ಷಾಧಿಪತಿಯನ್ನಾಗಿ ಮಾಡಿದೆ. ಇದು ನಿಮಗೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ಸಂಪೂರ್ಣವಾಗಿ ನಿಜ.

ಬ್ರಿಟನ್ ನಿವಾಸಿ 65 ವರ್ಷದ ನಿಕ್ ವೆಸ್ಟ್ ಅವರು ಕಳೆದ 42 ವರ್ಷಗಳಿಂದ ಬಿಯರ್ ಕ್ಯಾನ್‌ಗಳನ್ನು ಸಂಗ್ರಹಿಸುತ್ತಿದ್ದರು. ಈ ಹವ್ಯಾಸದಿಂದಾಗಿ ಅವರ ಮನೆಯಲ್ಲಿ 10,300 ಡಬ್ಬಗಳು ಜಮಾವಣೆಗೊಂಡಿವೆ. 16 ವರ್ಷ ವಯಸ್ಸಿನವನಾಗಿದ್ದಾಗ ಈ ಪ್ರವೃತ್ತಿ ಪ್ರಾರಂಭವಾಯಿತು ಮತ್ತು ನಾನು ಅಂಚೆಚೀಟಿಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸುವುದನ್ನು ಪ್ರಾರಂಭಿಸಿದ್ದೆ. ಈ ಸಮಯದಲ್ಲಿ, ನಾನು ನನ್ನ ಸ್ನೇಹಿತರೊಂದಿಗೆ ಮದ್ಯದ ಚಟಕ್ಕೆ ಸಿಲುಕಿದೆ ಮತ್ತು ನಾನು ಹೆಚ್ಚು ಬಿಯರ್ ಕುಡಿಯಲು ಪ್ರಾರಂಭಿಸಿದೆ ಎಂದು ವೆಸ್ಟ್ ಹೇಳಿದ್ದಾರೆ.

ಇದನ್ನೂ ಓದಿ; ಮಹಿಳೆಯ ಮೂಗಿನೊಳಗೆ 100ಕ್ಕೂ ಹೆಚ್ಚು ಜೀವಂತ ಕೀಟಗಳು ಪತ್ತೆ, ಅಚ್ಚರಿಪಟ್ಟ ವೈದ್ಯರು

ಆದಾಗ್ಯೂ,ಮದ್ಯದ ಚಟಕ್ಕೆ ಸಿಲುಕಿದ ಆ ಸಮಯದಲ್ಲಿ ನಾನು ಬಿಯರ್ ಕ್ಯಾನ್‌ಗಳನ್ನು ಸಂಗ್ರಹಿಸುತ್ತಿದ್ದೆ. ನನ್ನ ಈ ಹವ್ಯಾಸಗಳಿಂದಾಗಿ ನನ್ನ ಕೋಣೆಯ ತುಂಬೆಲ್ಲಾ ಬಿಯರ್​​ ಬಾಟಲಿಗಳು ತುಂಬಿಕೊಂಡಿದ್ದವು. ಬಳಿಕ ಈ ಬಿಯರ್​ ಬಾಟಲಿಗಳ ಸಂಗ್ರಹಕ್ಕಾಗಿ ಹೊಸ ಮನೆ ಖರೀದಿಸಿದೆ. ಆದರೆ ನಿವೃತ್ತಿಯ ನಂತರ ನಾನು ಹಣದ ಕೊರತೆಯನ್ನು ಎದುರಿಸಲು ಪ್ರಾರಂಭಿಸಿದೆ. ಆದ್ದರಿಂದ ಈ ಬಾಟಲಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಮೊದಲ 6000 ಕ್ಯಾನ್‌ಗಳನ್ನು ಮಾರಾಟ ಮಾಡಿ, $13500 (ರೂ 14 ಲಕ್ಷ) ಗಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಮತ್ತಷ್ಟು  ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ