ಮಹಿಳೆಯ ಮೂಗಿನೊಳಗೆ 100ಕ್ಕೂ ಹೆಚ್ಚು ಜೀವಂತ ಕೀಟಗಳು ಪತ್ತೆ, ಅಚ್ಚರಿಪಟ್ಟ ವೈದ್ಯರು

ಚಿಯಾಂಗ್ ಮಾಯ್ ಎಂಬ ಥೈಲ್ಯಾಂಡ್​​ನ 59 ವರ್ಷದ ಮಹಿಳೆ ಮೂಗು ಕಟ್ಟುವಿಕೆಯಿಂದ ಬಳಲುತ್ತಿದ್ದರು. ಇದರಿಂದ ಉಸಿರಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ನಂತರ ಮೂಗಿನಲ್ಲಿ ರಕ್ತಸ್ರಾವ ಹಾಗು ನೋವು ಕೂಡ ಹೆಚ್ಚಾಗಿತ್ತು. ಈ ಕಾರಣಕ್ಕಾಗಿ ಅವರು ನಾಕಾರ್ನ್‌ಪಿಂಗ್ ಆಸ್ಪತ್ರೆಗೆ ಹೋಗಿದ್ದಾರೆ. ಡಾ.ಪಾಟಿಮೋನ್ ತಂಚೈಖಾನ್ ಅವರು ಮಹಿಳೆಯ ಎಕ್ಸ್-ರೇ ನಂತರ ಮೂಗಿನ ಎಂಡೋಸ್ಕೋಪಿ ಮಾಡಿದಾಗ ಅವರಿಗೆ ಒಂದು ಅಚ್ಚರಿ ಕಂಡು ಬಂದಿದೆ.

ಮಹಿಳೆಯ ಮೂಗಿನೊಳಗೆ 100ಕ್ಕೂ ಹೆಚ್ಚು ಜೀವಂತ ಕೀಟಗಳು ಪತ್ತೆ, ಅಚ್ಚರಿಪಟ್ಟ ವೈದ್ಯರು
Follow us
ಅಕ್ಷಯ್​ ಪಲ್ಲಮಜಲು​​
|

Updated on:May 09, 2024 | 3:09 PM

ವೈದ್ಯರನ್ನೇ ಅಚ್ಚರಿಗೊಳಿಸುವ ಘಟನೆಯೊಂದು ಥೈಲ್ಯಾಂಡ್​​​ನಲ್ಲಿ ನಡೆದಿದೆ. 59 ವರ್ಷದ ಮಹಿಳೆಯೊಬ್ಬರು ಕೆಲವು ವಾರಗಳಿಂದ ಮೂಗಿನ ಸಮಸ್ಯೆಯಿಂದ ಬಳಲುತ್ತಿದ್ದರು. ಶೀತ ಇರಬಹುದು ಎಂದು ಅದರ ಬಗ್ಗೆ ಅಷ್ಟೊಂದು ಗಮನ ನೀಡಿರಲಿಲ್ಲ. ಆದರೆ ಇದು ದೊಡ್ಡ ಸಮಸ್ಯೆಯಾಗುತ್ತದೆ ಎಂಬುದು ಅವರ ಗಮನಕ್ಕೂ ಬಂದಿರಲಿಲ್ಲ. ಸ್ವಲ್ಪ ದಿನದ ನಂತರ ಈ ಸಮಸ್ಯೆ ಹೆಚ್ಚಾಯಿತು. ಈ ಬಗ್ಗೆ ತೋರಿಸಲು ಆಸ್ಪತ್ರೆಗೆ ಧಾವಿಸಿದ್ದಾರೆ. ವೈದ್ಯರು ಈ ಬಗ್ಗೆ ಪರೀಕ್ಷೆ ಮಾಡಿದಾಗ ಅಚ್ಚರಿಯ ವಿಚಾರ ತಿಳಿದಿದೆ. ಒಂದು ವೇಳೆ ಆಸ್ಪತ್ರೆಗೆ ಬರಲು ತಡ ಮಾಡುತ್ತಿದ್ದರೆ ಅವರು ಜೀವವೇ ಹೋಗುತ್ತಿತ್ತು. ಅಷ್ಟಕ್ಕೂ ಈ ಮಹಿಳೆಗಾಗಿರುವುದೇನು? ಇಲ್ಲಿದೆ ನೋಡಿ ಸ್ಟೋರಿ.

ಚಿಯಾಂಗ್ ಮಾಯ್ ಎಂಬ ಥೈಲ್ಯಾಂಡ್​​ನ 59 ವರ್ಷದ ಮಹಿಳೆ ಮೂಗು ಕಟ್ಟುವಿಕೆಯಿಂದ ಬಳಲುತ್ತಿದ್ದರು. ಇದರಿಂದ ಉಸಿರಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ನಂತರ ಮೂಗಿನಲ್ಲಿ ರಕ್ತಸ್ರಾವ ಹಾಗು ನೋವು ಕೂಡ ಹೆಚ್ಚಾಗಿತ್ತು. ಈ ಕಾರಣಕ್ಕಾಗಿ ಅವರು ನಾಕಾರ್ನ್‌ಪಿಂಗ್ ಆಸ್ಪತ್ರೆಗೆ ಹೋಗಿದ್ದಾರೆ. ಡಾ.ಪಾಟಿಮೋನ್ ತಂಚೈಖಾನ್ ಅವರು ಮಹಿಳೆಯ ಎಕ್ಸ್-ರೇ ನಂತರ ಮೂಗಿನ ಎಂಡೋಸ್ಕೋಪಿ ಮಾಡಿದಾಗ ಅವರಿಗೆ ಒಂದು ಅಚ್ಚರಿ ಕಂಡು ಬಂದಿದೆ. ಮಹಿಳೆಯ ಮೂಗಿನೊಳಗೆ ನೂರಾರು ಜೀವಂತ ಕೀಟಗಳು ಸುತ್ತುತ್ತಿರುವುದನ್ನು ಪತ್ತೆ ಮಾಡಿದ್ದಾರೆ.

ತಕ್ಷಣ ಮಹಿಳೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು, ಚಿಕಿತ್ಸೆ ಪ್ರಾರಂಭಿಸಲಾಯಿತು ಮತ್ತು ಎಲ್ಲಾ ಜೀವಂತ ಕೀಟಗಳನ್ನು ತೆಗೆದುಹಾಕಲಾಯಿತು. ಇದೀಗ ಈ ಮಹಿಳೆ ಸಾಕಷ್ಟು ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿನಿತ್ಯ ಆತನ ಬರುವಿಕೆಗಾಗಿ ಕಾಯುವ ಶ್ವಾನ: ಇದು ಲೋಕೋ ಪೈಲಟ್ ಮತ್ತು ಬೀದಿನಾಯಿಯ ಸುಂದರ ಸ್ನೇಹ

ಮೂಗಿನಲ್ಲಿ 100ಕ್ಕೂ ಹೆಚ್ಚು ಜೀವಂತ ಕೀಟಗಳು

ಈ ಮಹಿಳೆಯ ಮೂಗಿನಲ್ಲಿ ನೂರಕ್ಕೂ ಹೆಚ್ಚು ಕೀಟಗಳು ಪತ್ತೆಯಾಗಿದೆ. ಒಂದು ವೇಳೆ ಈ ಸಮಸ್ಯೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಮೂಗಿನ ಮೂಲಕ ಕೀಟಗಳು ಮೆದುಳಿಗೆ ಸೇರುತ್ತವೆ. ಇದು ಕೊನೆಗೆ ಪಾರ್ಶ್ವವಾಯುವಿಗೆ ತಳ್ಳಬಹುದು ಹಾಗೂ ಪ್ರಾಣವನ್ನೇ ತೆಗೆಯಬಹುದು ಎಂದು ಹೇಳಿದ್ದಾರೆ. ಇದೀಗ ಮಹಿಳೆ ಸೈನಸೈಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ವಿಚಾರದ ಬಗ್ಗೆ ಆಸ್ಪತ್ರೆಯು ಫೇಸ್​​​ಬುಕ್​​​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ವರದಿಯ ಪ್ರಕಾರ, ಮಹಿಳೆ ವಾಸಿಸುವ ಥೈಲ್ಯಾಂಡ್ ಪ್ರದೇಶದ ಜನರಲ್ಲಿ ಅಲರ್ಜಿಗಳು, ರಿನಿಟಿಸ್ ಮತ್ತು ಇತರ ಉಸಿರಾಟದ ಕಾಯಿಲೆಗಳು ಕಂಡುಬಂದಿವೆ ಎಂದು ವರದಿಯಾಗಿದೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:56 pm, Thu, 9 May 24