AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೋಪಾನವಾಗಿ ಇಳಿಯೋ ಬಿದ್ಬಿಟ್ಟಿಯಾ, ಅಮ್ಮ ಮತ್ತು ಮರಿ ಕರಡಿಯ ಮರ ಇಳಿಯುವ ಆಟ 

ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಸದಾ   ಪ್ರಾಣಿಗಳ ಮರಿಗಳ ಒಂದಲ್ಲಾ ಒಂದು ತುಂಟಾಟದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ದಟ್ಟ ಕಾಡಿನಲ್ಲಿ  ತಾಯಿ ಮತ್ತು ಮರಿ ಕರಡಿ   ಮರ ಹತ್ತಿ ಇಳಿದು ಆಟವಾಡುವ ದೃಶ್ಯ ಪ್ರಾಣಿ ಪ್ರಿಯರ ಮನ ಗೆದ್ದಿದೆ.

Viral Video: ಜೋಪಾನವಾಗಿ ಇಳಿಯೋ ಬಿದ್ಬಿಟ್ಟಿಯಾ, ಅಮ್ಮ ಮತ್ತು ಮರಿ ಕರಡಿಯ ಮರ ಇಳಿಯುವ ಆಟ 
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 09, 2024 | 3:31 PM

Share

ಹಿಂದಿನ ಕಾಲದಲ್ಲಿ ಹೆಚ್ಚಾಗಿ ಹಳ್ಳಿ ಕಡೆಗಳಲ್ಲಿ ಸಣ್ಣ ವಯಸ್ಸಿನ ಹುಡುಗರೆಲ್ಲಾ ಗುಂಪು ಕಟ್ಟಿಕೊಂಡು ಮರ ಕೋತಿ, ಮರವೇರುವ ಆಟವನ್ನೆಲ್ಲಾ ಆಡ್ತಾ ಇದ್ರು.  ಇಂತಹ ಹಳ್ಳಿ ಆಟಗಳ ಮಜಾನೇ ಬೇರೆ. ಇಂದಿನ ದಿನಗಳಲ್ಲಿ ಇಂತಹ ಆಟಗಳು ಕಣ್ಮರೆಯಾಗುತ್ತಿದೆ. ಅಂತದ್ರಲ್ಲಿ ಇಲ್ಲೆರಡು ಕರಡಿಗಳು ಕಾಡಿನಲ್ಲಿ ಮರವೇರಿ ಮರಕೋತಿ ಆಟವಾಡಿವೆ. ಈ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮರಿ ಕರಡಿಯ ತುಂಟತನಕ್ಕೆ ಪ್ರಾಣಿ ಪ್ರಿಯರು ಮನಸೋತಿದ್ದಾರೆ.

ಈ ವಿಡಿಯೋವನ್ನು ಭಾರತೀಯ ಅರಣ್ಯಧಿಕಾರಿ ಪರ್ವೀನ್ ಕಸ್ವಾನ್ (@ParveenKaswan) ಅವರು ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ “ಕರಡಿಗಳು ಮರ ಹತ್ತಲು ಸಾಧ್ಯವಿಲ್ಲ ಎಂದು ಹೇಳ್ತಾರೆ, ಆದರೆ ಇಲ್ಲಿ ತಾಯಿ ಮತ್ತು ಮರಿ ಕರಡಿ ಮರವೇರಿ ಕುಳಿತಿವೆ;  ನಿನ್ನೆ ಈ ದೃಶ್ಯವನ್ನು ಸೆರೆ ಹಿಡಯಲಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ತಾಯಿ ಕರಡಿ ಹಾಗೂ ಮರಿ ಕರಡಿ ಮರವೇರಿ ಕುಳಿತಿರುವ ದೃಶ್ಯವನ್ನು ಕಾಣಬಹುದು. ನಂತರ ತಾಯಿ ಕರಡಿ ಜೋಪಾನ ಕಣೋ ಬಿದ್ಬಿಟ್ಟೀಯಾ ಎಂದು ಹೇಳುತ್ತಾ ನಿಧಾನಕ್ಕೆ  ಮರದಿಂದ ಕೆಳಗೆ ಇಳಿದಿವೆ. ಬಳಿಕ ಮರಿ ಕರಡಿ ಇನ್ನೂ ಸ್ವಲ್ಪ ಆಟವಾಡ್ತೀನಿ ಅಮ್ಮಾ ಎಂದು ಹೇಳುತ್ತಾ ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಮರವನ್ನು ಹತ್ತಿ ಆಟವಾಡಿದೆ.

ಇದನ್ನೂ ಓದಿ; ಮಹಿಳೆಯ ಮೂಗಿನೊಳಗೆ 100ಕ್ಕೂ ಹೆಚ್ಚು ಜೀವಂತ ಕೀಟಗಳು ಪತ್ತೆ, ಅಚ್ಚರಿಪಟ್ಟ ವೈದ್ಯರು

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 32 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡದುಕೊಂಡಿದ್ದು, ಕರಡಿ ಮರಿಯ ತುಂಟಾಟಕ್ಕೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ