AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನೋಡ ನೋಡುತ್ತಿದ್ದಂತೆ ಮಹಿಳೆಯ ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ ಆನೆ

ಆನೆಗಳು ಏನು ಮಾಡಿದ್ರು ನೋಡೋಕೆ ಚಂದ. ಸೋಶಿಯಲ್ ಮೀಡಿಯಾದಲ್ಲಿ ಗಜರಾಜನ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಆನೆಯೊಂದು ಮಹಿಳೆಯ ತಲೆಯಲ್ಲಿದ್ದ ಟೋಪಿಯನ್ನು ಎಗರಿಸಿದೆ. ಈ ಮುದ್ದಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಆನೆಯ ತುಂಟಾಟ ಕಂಡು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನೋಡ ನೋಡುತ್ತಿದ್ದಂತೆ ಮಹಿಳೆಯ ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ ಆನೆ
ವೈರಲ್ ವಿಡಿಯೋImage Credit source: Facebook
ಸಾಯಿನಂದಾ
|

Updated on: Feb 19, 2026 | 10:32 AM

Share

ಆನೆಗಳ (elephants) ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ತನ್ನನ್ನು ಆರೈಕೆ ಮಾಡುವ ವ್ಯಕ್ತಿಗಳ ಜೊತೆಗೆ ಪ್ರೀತಿಯಿಂದ ಗುದ್ದಾಡುತ್ತವೆ. ಕೆಲವೊಮ್ಮೆ ಅತ್ಯಂತ ಸಲುಗೆಯಿಂದ ವರ್ತಿಸುತ್ತವೆ. ಇದೀಗ ಇಂತಹದ್ದೇ ತಮಾಷೆಯೆನಿಸುವ ವಿಡಿಯೋ ವೈರಲ್ ಆಗಿದೆ. ಆನೆಯೊಂದು ಮಹಿಳೆಯ (woman) ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ್ದು, ಆಮೇಲೆ ಆಗಿದ್ದು ನೋಡಿದ್ರೆ ನೀವು ಶಾಕ್ ಆಗ್ತೀರಾ. ಗಜರಾಜನ ಈ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಎನಿವೇ ಮನ್ಯವಿ (Anyway Manyawi) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆನೆಯ ತುಂಟಾಟವನ್ನು ನೋಡಬಹುದು. ಆನೆಯೊಂದು ಮಹಿಳೆಯ ಹಿಂಬದಿಯಲ್ಲಿ ನಿಂತುಕೊಂಡ ಆಕೆಯ ತಲೆಯಲ್ಲಿದ್ದ ಟೋಪಿಯನ್ನು ಸೊಂಡಿಲಿನಿಂದ ಮೆಲ್ಲನೆ  ಎಗರಿಸಿದೆ. ಆ ಬಳಿಕ ತಾನು ಏನು ಮಾಡಿಲ್ಲ ಎಂಬಂತೆ ಗಂಭೀರವಾಗಿ ನಿಂತು ಕೊಂಡಿದೆ. ಅಲ್ಲೇ ಇದ್ದವರು ಈ ಗಜರಾಜನ ತುಂಟಾಟ ಕಂಡು ನಕ್ಕಿದ್ದಾರೆ. ತನ್ನ ಟೋಪಿಯನ್ನು ಎಗರಿಸಿದ ಆನೆಯ ಬಳಿ ಮಹಿಳೆಯೂ ಟೋಪಿ ಕೊಡುವಂತೆ ಮನವಿ ಮಾಡಿದ್ದಾಳೆ. ಮಹಿಳೆಯ ಮಾತಿಗೆ ಕರಗಿದ ಆನೆಯೂ ಮೆಲ್ಲನೆ ಟೋಪಿಯನ್ನು ಹಿಂದಿರುಗಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಮೂಕ ಜೀವಿಗಳ ಶುದ್ಧ ಗೆಳೆತನ; ತನ್ನ ಸ್ನೇಹಿತ ಡಾಲಿಯೊಂದಿಗೆ ತುಂಟಾಟಕ್ಕೆ ಇಳಿದ ಆನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಖತರ್ನಾಕ್ ಆನೆ ಎಂದರೆ, ಮತ್ತೊಬ್ಬರು, ತುಂಬಾನೇ ಮುದ್ದಾಗಿದೆ, ಆನೆ ನೋಡಲು ಗಂಭೀರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬುದ್ದಿವಂತ ಗಜರಾಜ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್
ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ