AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯರ ಎಡವಟ್ಟು ಆರೋಪ: ಹಲ್ಲು ನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆ ಕೋಮಾಕ್ಕೆ

ಕಲಬುರಗಿಯಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದ ನಾಜಿಯಾ ಬೇಗಂ ಅರಿವಳಿಕೆ ಬಳಿಕ ಕೋಮಾಗೆ ಜಾರಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಅತಿಯಾದ ಅರಿವಳಿಕೆ ನೀಡಿದ್ದೇ ಇದಕ್ಕೆ ಕಾರಣ ಎಂದು ಕುಟುಂಬ ಆರೋಪಿಸಿದೆ. ವೈದ್ಯರು ಇದನ್ನು ನಿರಾಕರಿಸಿದ್ದಾರೆ. ಬಡ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ವೈದ್ಯಕೀಯ ನಿರ್ಲಕ್ಷ್ಯದ ವಿರುದ್ಧ ದೂರು ನೀಡಲು ಹಿಂಜರಿಯುತ್ತಿದೆ. ಇದು ರೋಗಿಯ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೈದ್ಯರ ಎಡವಟ್ಟು ಆರೋಪ: ಹಲ್ಲು ನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆ ಕೋಮಾಕ್ಕೆ
ಸಾಂದರ್ಭಿಕ ಚಿತ್ರ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Feb 20, 2026 | 10:12 AM

Share

ಕಲಬುರಗಿ ಫೆ.19: ಹಲ್ಲು ನೋವಿನ ಸಮಸ್ಯೆಯೆಂದು ಆಸ್ಪತ್ರೆಗೆ ಹೋದ ಮಹಿಳೆಯೊಬ್ಬರು ಇಂದು ಸಾವಿನೊಂದಿಗೆ ಹೋರಾಡುತ್ತಿದ್ದಾರೆ. ಅನೆಸ್ತೇಶಿಯಾ (Anesthesia) ಇಂಜೆಕ್ಷನ್ ನೀಡಿದ ಕೆಲವೇ ಸಮಯದಲ್ಲಿ ಮಹಿಳೆ ಕೋಮಾಗೆ ಜಾರಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ನಿವಾಸಿ ನಾಜಿಯಾ ಬೇಗಂ ಅವರು ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಚಿಕಿತ್ಸೆಯ ಭಾಗವಾಗಿ ವೈದ್ಯರು ಅರಿವಳಿಕೆ ಇಂಜೆಕ್ಷನ್ ನೀಡಿದ್ದರು. ಆದರೆ, ಇಂಜೆಕ್ಷನ್ ನೀಡಿದ ಕೆಲವೇ ನಿಮಿಷಗಳಲ್ಲಿ ನಾಜಿಯಾ ಅವರು ಪ್ರಜ್ಞೆ ತಪ್ಪಿ ಕೋಮಾಕ್ಕೆ ಹೋಗಿದ್ದಾರೆ.

ವೈದ್ಯರು ನಾಜಿಯಾ ಅವರಿಗೆ ಅತಿಯಾದ ಪ್ರಮಾಣದ ಅನೆಸ್ತೇಶಿಯಾ ನೀಡಿದ್ದೇ ಈ ಸ್ಥಿತಿಗೆ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ. ಕಳೆದ 40 ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈಗ ಗುಣಮುಖವಾಗುವ ಮೊದಲೇ “ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದು ವೈದ್ಯರು ಸೂಚಿಸುತ್ತಿದ್ದಾರೆ. ಬಡ ಕುಟುಂಬದವರಾದ ನಾಜಿಯಾ ಅವರ ಮನೆಯವರು ಈಗ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ.

ಕುಟುಂಬಸ್ಥರ ಆರೋಪವನ್ನು ಬಸವೇಶ್ವರ ಆಸ್ಪತ್ರೆಯ ವೈದ್ಯರು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. “ಮಹಿಳೆ ಕೋಮಾಗೆ ಹೋಗಲು ಅನೆಸ್ತೇಶಿಯಾ ಕಾರಣವಲ್ಲ, ಇದು ಬೇರೆ ಯಾವುದೋ ವೈದ್ಯಕೀಯ ಕಾರಣದಿಂದ ಸಂಭವಿಸಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅರಿವಳಿಕೆ ನೀಡುವ ಮೊದಲು ರೋಗಿಯ ಇತಿಹಾಸ ಮತ್ತು ಅಲರ್ಜಿಗಳನ್ನು ಪರೀಕ್ಷಿಸಬೇಕಾಗುತ್ತದೆ. ಇನ್ನು ಇಂಜೆಕ್ಷನ್ ನೀಡಿದಾಗ ಮದ್ದಿಗೆ ದೇಹವು ತೀವ್ರ ಪ್ರತಿಕ್ರಿಯೆ ನೀಡುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಕದ ಸರಬರಾಜು ಕಡಿಮೆಯಾಗುವುದು. ಹೃದಯ ಬಡಿತದಲ್ಲಿ ಏರಿಳಿತ ಉಂಟಾಗಿ ರಕ್ತದೊತ್ತಡ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಒಕ್ಕಲಿಗರಿಗೆ ಅವಕಾಶ ಸಿಕ್ಕಿದೆ, ದಲಿತರು, ಅಲ್ಪಸಂಖ್ಯಾತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ

ಇನ್ನು ನಾಜಿಯಾ ಬೇಗಂ ಅವರ ಕುಟುಂಬಸ್ಥರು ವೈದ್ಯರ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ ಅಡಿಯಲ್ಲಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ಆದರೆ, ದೂರು ನೀಡುವ ಮೊದಲು ಆಸ್ಪತ್ರೆಯವರು ನೀಡುತ್ತಿರುವ “ಉಚಿತ ಚಿಕಿತ್ಸೆ”ಯನ್ನು ನಿಲ್ಲಿಸಿದರೆ ಮುಂದೇನು ಎಂಬ ಭಯವೂ ಕುಟುಂಬದವರನ್ನು ಕಾಡುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:38 pm, Thu, 19 February 26

Follow Us
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!