ವಾರಾಂತ್ಯಕ್ಕೆ ಜೀ5ನಲ್ಲಿ ನೋಡಿ ‘ರಾಕ್ಷಸ’; ಉತ್ತರ ಕರ್ನಾಟಕದ ಕಥೆಯಲ್ಲಿ ಕ್ರೈಮ್ ಥ್ರಿಲ್ಲರ್ ಸರಣಿ
ಜೀ5 ನಲ್ಲಿ ವಿಜಯ್ ರಾಘವೇಂದ್ರ ನಟನೆಯ 'ರಾಕ್ಷಸ' ವೆಬ್ ಸರಣಿ ಬಿಡುಗಡೆಯಾಗಿದೆ. ಇದು ಉತ್ತರ ಕರ್ನಾಟಕ ಭಾಷೆ, ಶೈಲಿ ಮತ್ತು ನಟರನ್ನು ಒಳಗೊಂಡಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಹೆಣೆದ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆಯು ವೀಕ್ಷಕರಿಗೆ ಥ್ರಿಲ್ ನೀಡಲಿದೆ. ವಿಜಯ್ ರಾಘವೇಂದ್ರರ ಮೊದಲ ವೆಬ್ ಸರಣಿ ಇದಾಗಿದ್ದು, ಮಯೂರಿ, ಅವಿನಾಶ್ ಸೇರಿದಂತೆ 89 ಕಲಾವಿದರು ನಟಿಸಿದ್ದಾರೆ.

ಒಟಿಟಿ ವ್ಯಾಪ್ತಿ ತುಂಬಾನೇ ಹಿರಿದಾಗಿದೆ. ಸಾಕಷ್ಟು ಸಿನಿಮಾಗಳು, ಸರಣಿಗಳು ರಿಲೀಸ್ ಆಗುತ್ತಿವೆ. ಪರಭಾಷೆಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿ ವೆಬ್ ಸರಣಿಗಳ ಸಂಖ್ಯೆ ಕಡಿಮೆ. ಆದರೆ, ಜೀ5 ಹಲವು ವೆಬ್ ಸೀರಿಸ್ಗಳನ್ನು ಕನ್ನಡಿಗರ ಮಡಿಲಿಗೆ ಹಾಕುತ್ತಾ ಇದೆ. ಈಗ ಉತ್ತರ ಕರ್ನಾಟಕ ಭಾಷೆಯಲ್ಲಿ ಸಿದ್ಧವಾದ ವೆಬ್ ಸೀರಿಸ್ನ ವೀಕ್ಷಕರ ಮುಂದಿಡುತ್ತಿದೆ. ವೀಕೆಂಡ್ನಲ್ಲಿ ಈ ಸರಣಿ ವೀಕ್ಷಣೆಗೆ ಒಂದೊಳ್ಳೆಯ ಆಯ್ಕೆ ಆಗಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ.
ವಿಜಯ್ ರಾಘವೇಂದ್ರ ಅವರು ಬಾಲ ಕಲಾವಿದನಾಗಿ, ಹೀರೋ ಆಗಿ ಮಿಂಚಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಈವರೆಗೆ ಯಾವುದೇ ವೆಬ್ ಸರಣಿ ಮಾಡಿರಲಿಲ್ಲ. ‘ರಾಕ್ಷಸ’ ಅವರ ಮೊದಲ ವೆಬ್ ಸರಣಿ ಆಗಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಈ ಸರಣಿ ಸಾಕಷ್ಟು ಥ್ರಿಲ್ ನೀಡುವ ನಿರೀಕ್ಷೆ ಇದೆ.
ಈ ವೆಬ್ ಸರಣಿಯನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಅವರು ಉತ್ತರ ಕರ್ನಾಟಕ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟ್ರೇಲರ್ ನೋಡಿದವರಿಗೆ ವಿಜಯ್ ರಾಘವೇಂದ್ರ ಹಾಗೂ ಮಯೂರಿ ಪಾತ್ರಕ್ಕೆ ಸರಿಯಾದ ಆಯ್ಕೆ ಎಂದು ಅನಿಸಿದೆ.
ಜೀ5 ಬಿಸ್ನೆಸ್ ಹೆಡ್ ದೀಪಕ್ ದೀಪಕ್ ಶ್ರೀರಾಮುಲು ಈ ಸರಣಿ ಬಗ್ಗೆ ಮಾಹಿತಿ ನೀಡಿದ್ದಾರೆ, ‘ವೆಬ್ ಸರಣಿ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ಪ್ರೊಡಕ್ಷನ್, ಪಿಆರ್ ಕೆ, ಕೆಆರ್ಜಿ ಹಾಗೂ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು. ಈ ಸರಣಿಯಲ್ಲಿ 22ರಿಂದ 25 ನಿಮಿಷದ ಏಳು ಎಪಿಸೋಡ್ ಇರಲಿವೆ ಎಂದಿದ್ದಾರೆ.
ಇದನ್ನೂ ಓದಿ: ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ
ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ‘89 ಪಾತ್ರಗಳು ಈ ಸಿರೀಸ್ ಅಲ್ಲಿ ಇವೆ. ಅವರೆಲ್ಲವೂ ಉತ್ತರ ಕರ್ನಾಟಕ ಭಾಗದವರು. ಉತ್ತರ ಕರ್ನಾಟಕದ ಶೈಲಿಯಲ್ಲೇ ಸರಣಿ ಇದೆ ಎಂಬುದೇ ವಿಶೇಷ’ ಎಂದರು ಅವರು. ರಾಕ್ಷಸ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೊದಲ ವೆಬ್ ಸಿರೀಸ್. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಒಳಗೊಂಡಿರುವ ಸರಣಿಯಲ್ಲಿ ವಿಜಯ ರಾಘವೇಂದ್ರ,ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕ್ಷಸ ವೆಬ್ ಸೀರಿಸ್‌ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




