ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: 100 ಕ್ವಿಂಟಾಲ್ ಬೆಳೆದು ವಿದೇಶಕ್ಕೆ ರಫ್ತು
ಭೀಕರ ಬರಗಾಲದ ನಡುವೆಯೂ ಕಲಬುರಗಿ ಜಿಲ್ಲೆಯ ಜಂಬಗಾ ಬಿ ಗ್ರಾಮದ ರೈತ ಶ್ರೀಕಾಂತ್ ಎರಡು ಎಕರೆ ಜಮೀನು ಲೀಸ್ ಪಡೆದು, 100 ಕ್ವಿಂಟಾಲ್ಗೂ ಹೆಚ್ಚು ಈರುಳ್ಳಿ ಬೆಳೆದಿದ್ದಾರೆ. ರೇನ್ ಪಂಪ್ ಮೂಲಕ ನೀರಾವರಿ ಮಾಡಿ ಬೆಳೆದ ಬೆಳೆಯನ್ನು ಖಾಸಗಿ ಕಂಪನಿ ಮೂಲಕ ಥೈಲ್ಯಾಂಡ್ಗೆ ರಫ್ತು ಮಾಡಿ, ಕ್ವಿಂಟಾಲ್ಗೆ 5-6 ಸಾವಿರ ರೂ.ನಂತೆ ಲಕ್ಷಾಂತರ ರೂ. ಲಾಭ ಗಳಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಕಲಬುರಗಿ, ನವೆಂಬರ್ 18: ರಾಜ್ಯದಲ್ಲಿ ಈ ವರ್ಷ ಅಸಾಧಾರಣ ಬರಗಾಲ ಎದುರಾಗಿದ್ದು, ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಆದರೆ, ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ಕಲಬುರಗಿ ತಾಲೂಕಿನ ಜಂಬಗಾ ಬಿ ಗ್ರಾಮದ ರೈತ ಶ್ರೀಕಾಂತ್ ಬಂಪರ್ ಬೆಳೆ ಬೆಳೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಕೇವಲ ಎರಡು ಎಕರೆ ಜಮೀನನ್ನು ಲೀಸ್ಗೆ ಪಡೆದು, ನೂರು ಕ್ವಿಂಟಾಲ್ಗೂ ಹೆಚ್ಚು ಈರುಳ್ಳಿ ಬೆಳೆದಿದ್ದಾರೆ. ಅಷ್ಟೇ ಅಲ್ಲದೆ, ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ಕ್ವಿಂಟಾಲ್ಗೆ ಐದರಿಂದ ಆರು ಸಾವಿರ ರೂಪಾಯಿಗಳಂತೆ ತಮ್ಮ ಉತ್ಪನ್ನವನ್ನು ಥೈಲ್ಯಾಂಡ್ಗೆ ರಫ್ತು ಮಾಡಿದ್ದಾರೆ. ಆ ಮೂಲಕ ಕೇವಲ ಆರು-ಏಳು ತಿಂಗಳುಗಳ ಅವಧಿಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

