ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್
ಬೆನ್ನಲ್ಲೇ ಕೊಪ್ಪಳ ತಾಲೂಕಿನಲ್ಲಿ ವಾಯು ಮತ್ತು ಜಲ ಕಾಯ್ದೆಗಳನ್ನು ಉಲ್ಲಂಘಿಸಿದ್ದ 8 ಕಾರ್ಖಾನೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಚ್ಚುವಂತೆ ಆದೇಶಿಸಿದೆ. ಐಎಲ್‌ಸಿ ಐರನ್, ಪಿಬಿಎಸ್ ಸ್ಟೀಲ್ ಸೇರಿದಂತೆ ಹಲವು ಕಾರ್ಖಾನೆಗಳು ರೈತರಿಗೆ ಹೊಗೆಯ ಸಮಸ್ಯೆಯನ್ನು ಉಂಟುಮಾಡುತ್ತಿದ್ದವು. ಇದು ‘ಟಿವಿ9’ ವರದಿಯ ನೇರ ಫಲಶ್ರುತಿಯಾಗಿದೆ.
ಕೊಪ್ಪಳ, ನವೆಂಬರ್ 19: ಕೊಪ್ಪಳ ತಾಲೂಕಿನಲ್ಲಿ ವಾಯು ಕಾಯ್ದೆ ಹಾಗೂ ಜಲ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದ ಎಂಟು ಕಾರ್ಖಾನೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಬಂದ್ ಮಾಡಲಾಗಿದೆ. ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಮಾಲಿನ್ಯ ಉಂಟುಮಾಡುತ್ತಿದ್ದ ಈ ಕಾರ್ಖಾನೆಗಳ ವಿರುದ್ಧ ರೈತರು ನಿರಂತರವಾಗಿ ದೂರು ನೀಡಿದ್ದರು. ‘ಟಿವಿ9’ ಈ ಬಗ್ಗೆ ವಿಸ್ತೃತ ವರ ಪ್ರಸಾರ ಮಾಡಿದ ಬೆನ್ನಲ್ಲೇ ಮಂಡಳಿ ಕ್ರಮ ಕೈಗೊಂಡಿದೆ.
ಕಾರ್ಖಾನೆಗಳಿಂದ ಹೊರಬರುತ್ತಿದ್ದ ಹೊಗೆಯಿಂದ ಸುತ್ತಮುತ್ತಲಿನ ರೈತರು ರೋಸಿ ಹೋಗಿದ್ದರು. ಪರಿಸರದ ಮೇಲೆ ಮತ್ತು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದ ಈ ನಿಯಮ ಉಲ್ಲಂಘನೆಗಳ ಬಗ್ಗೆ ‘ಟಿವಿ9’ ಬೆಳಕು ಚೆಲ್ಲಿತ್ತು. ಬಂದ್ ಮಾಡಲಾಗಿರುವ ಕಾರ್ಖಾನೆಗಳಲ್ಲಿ ಐಎಲ್‌ಸಿ ಐರನ್ ಪ್ರೈವೇಟ್ ಲಿಮಿಟೆಡ್, ಪಿಬಿಎಸ್ ಸ್ಟೀಲ್ ಯೂನಿಟ್, ಎಎಸ್‌ಕೆ ಸ್ಟೀಲ್ ಫ್ಯಾಕ್ಟರಿ, ತನುಷ್ ಇಸ್ಪಾತ್ ಪ್ರೈವೇಟ್ ಲಿಮಿಟೆಡ್ ಯೂನಿಟ್ 1 ಮತ್ತು ಯೂನಿಟ್ 2, ಬಾಬಾ ಅಖಿಲಾ, ಭದ್ರಾ ಶ್ರೀ ಸ್ಟೀಲ್ ಮತ್ತು ಧ್ರುವ ದೇಶಾ ಮೆಟಾ ಸ್ಟೀಲ್ ಕಾರ್ಖಾನೆಗಳು ಸೇರಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

