AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾನವಿ ಡ್ರಾಮಾ ನೋಡಿ ಎಲ್ಲರೂ ಶಾಕ್; ಜಗದೀಶ್ ಜೊತೆ ಕಿರಿಕ್ ಮಾಡಿ ಸಂತ್ರಸ್ತೆಯಂತೆ ನಟಿಸಿದ ಸ್ಪರ್ಧಿ

ಬಿಗ್ ಬಾಸ್ ಮನೆಯಲ್ಲಿ ಗಾನವಿ ಅವರು ಜಗದೀಶ್ ಅವರನ್ನು ವಠಾರದ ಆಂಟಿ ಎಂದು ಕರೆದು ಅವಮಾನಿಸಿದ್ದಾರೆ. ಇದಕ್ಕೆ ಜಗದೀಶ್ ಖಡಕ್ ಕೌಂಟರ್ ಕೊಟ್ಟ ಬೆನ್ನಲ್ಲೇ ಗಾನವಿ ತಾವೇ ಸಂತ್ರಸ್ತೆಯಂತೆ ಡ್ರಾಮಾ ಶುರು ಮಾಡಿದ್ದಾರೆ. ಗಾನವಿ ಅವರ ಈ ವರ್ತನೆ ಕಂಡು ಮನೆಮಂದಿ ಶಾಕ್ ಆಗಿದ್ದಾರೆ.

ಗಾನವಿ ಡ್ರಾಮಾ ನೋಡಿ ಎಲ್ಲರೂ ಶಾಕ್; ಜಗದೀಶ್ ಜೊತೆ ಕಿರಿಕ್ ಮಾಡಿ ಸಂತ್ರಸ್ತೆಯಂತೆ ನಟಿಸಿದ ಸ್ಪರ್ಧಿ
ಗಾನವಿ
ರಾಜೇಶ್ ದುಗ್ಗುಮನೆ
|

Updated on: Nov 19, 2026 | 9:00 AM

Share

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಾನವಿ ಅವರ ಆಟ ಮತ್ತು ವರ್ತನೆ ಕಂಡು ಮನೆಮಂದಿ ಶಾಕ್ ಆಗಿದ್ದಾರೆ. ಸಹ ಸ್ಪರ್ಧಿ ಜಗದೀಶ್ ಅವರ ಜೊತೆ ಜಗಳಕ್ಕೆ ಇಳಿದ ಗಾನವಿ, ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ಟೀಕಿಸಿದ್ದಾರೆ. ಮೊದಲು ತಾವೇ ಕಿರಿಕ್ ಶುರು ಮಾಡಿ, ನಂತರ ತಾವೇ ಸಂತ್ರಸ್ತೆ ಎಂಬಂತೆ ಡ್ರಾಮಾ ಮಾಡುತ್ತಿರುವ ಗಾನವಿ ನಡೆಗೆ ಈಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಜಗಳದ ವೇಳೆ ಗಾನವಿ ಅವರು ಜಗದೀಶ್ ಅವರನ್ನು ಉದ್ದೇಶಿಸಿ, ‘ನೀನು ವಠಾರದ ಆಂಟಿಯ ರೀತಿ ಇದ್ದೀಯ. ಮೊದಲು ಗಂಡಸಾಗಿ ಗಂಡಸಿನ ರೀತಿ ಮಾತನಾಡೋದನ್ನು ಕಲಿ’ ಎಂದು ಕೀಳಾಗಿ ಮಾತನಾಡಿದ್ದಾರೆ. ಈ ಹಿಂದೆ ಕೂಡ ಜಗದೀಶ್ ಅವರು ಮನೆಯಲ್ಲಿ ಇಂಥದ್ದೇ ಅವಮಾನ ಅನುಭವಿಸಿದ್ದರು. ಆಗ ಕಿಚ್ಚ ಸುದೀಪ್ ಅವರು ಜಗದೀಶ್ ಬೆಂಬಲಕ್ಕೆ ನಿಂತು, ‘ಅವರಿಗೂ ಮಗಳಿದ್ದಾಳೆ. ಅವರ ಬಗ್ಗೆ ಈ ರೀತಿ ಮಾತನಾಡಿದಾಗ ಅವರ ಮಗಳಿಗೆ ಹೇಗೆ ಅನಿಸಬೇಡ’ ಎಂದು ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು.

ಸುದೀಪ್ ಅವರು ಎಚ್ಚರಿಕೆ ನೀಡಿದ್ದರೂ ಗಾನವಿ ಮತ್ತೆ ಅದೇ ರೀತಿಯ ಪದಗಳನ್ನು ಬಳಸಿ ದೊಡ್ಡ ಚರ್ಚೆಗೆ ಕಾರಣವಾಗಿದ್ದಾರೆ. ಗಾನವಿ ಆಡಿದ ಈ ಮಾತುಗಳಿಂದ ಜಗದೀಶ್ ತೀವ್ರವಾಗಿ ಕೆರಳಿದ್ದಾರೆ. ತಾಳ್ಮೆ ಕಳೆದುಕೊಂಡ ಜಗದೀಶ್, ‘ಮಾನ ಗೆಟ್ಟವಳು ನೀನು’ ಎಂದು ಗಾನವಿಗೆ ಖಡಕ್ ಕೌಂಟರ್ ಕೊಟ್ಟಿದ್ದಾರೆ. ಜಗದೀಶ್ ತಿರುಗೇಟು ನೀಡುತ್ತಿದ್ದಂತೆಯೇ ಗಾನವಿ ವರಸೆ ಬದಲಿಸಿದ್ದಾರೆ.

ಇದನ್ನೂ ಓದಿ:  ‘ಕದ್ರಿ’ ಸಿನಿಮಾದಲ್ಲಿ ಹೀರೋ ಆದ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ

ತಾವು ಆಡಿದ ಕೆಟ್ಟ ಮಾತುಗಳನ್ನು ಮರೆಮಾಚಿದ ಗಾನವಿ, ಜಗದೀಶ್ ಅವರದ್ದೇ ತಪ್ಪು ಎಂಬಂತೆ ಬಿಂಬಿಸಲು ಡ್ರಾಮಾ ಶುರು ಮಾಡಿದ್ದಾರೆ. ‘ಕೆಟ್ಟದಾಗಿ ಮಾತನಾಡಬೇಡ’ ಎಂದು ಜೋರಾಗಿ ಕೂಗಾಡುತ್ತಾ ತಾವೇ ಸಂತ್ರಸ್ತೆಯಂತೆ ನಟಿಸಿದ್ದಾರೆ. ಗಾನವಿ ಅವರ ಈ ಎರಡು ಮುಖದ ಆಟ ನೋಡಿ ಮನೆಯ ಇತರ ಸ್ಪರ್ಧಿಗಳು ದಂಗಾಗಿದ್ದು, ವೀಕೆಂಡ್‌ನಲ್ಲಿ ಸುದೀಪ್ ಈ ವಿಚಾರವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ತೀವ್ರ ಚಳಿ ನಡುವೆಯೂ ರಾತ್ರಿ ಫ್ರೀಡಂ ಪಾರ್ಕಲ್ಲೇ ಉಳಿದ ಆಶಾ ಕಾರ್ಯಕರ್ತೆಯರು
ತೀವ್ರ ಚಳಿ ನಡುವೆಯೂ ರಾತ್ರಿ ಫ್ರೀಡಂ ಪಾರ್ಕಲ್ಲೇ ಉಳಿದ ಆಶಾ ಕಾರ್ಯಕರ್ತೆಯರು
ಬೆಂಗಳೂರಿನಲ್ಲಿ ಎದೆ ಝಲ್ ಎನಿಸುವ ಹಿಟ್ ಆ್ಯಂಡ್ ರನ್
ಬೆಂಗಳೂರಿನಲ್ಲಿ ಎದೆ ಝಲ್ ಎನಿಸುವ ಹಿಟ್ ಆ್ಯಂಡ್ ರನ್
ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್
ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್
ಇಂದು ಯಾವ ರಾಶಿಯವರಿಗೆ ಗುರುಬಲವಿದೆ ನೋಡಿ
ಇಂದು ಯಾವ ರಾಶಿಯವರಿಗೆ ಗುರುಬಲವಿದೆ ನೋಡಿ
ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್