AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾ ಗಾಂಧಿ ಜನ್ಮದಿನಕ್ಕೆ ಪ್ರಧಾನಿ ಮೋದಿ ಗೌರವ ನಮನ, ಕಾಂಗ್ರೆಸ್ ಹೇಳಿದ್ದೇನು?

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನದಂದು ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವೂ ಅವರನ್ನು ಸ್ಮರಿಸಿದ್ದು, ಅವರ ಧೈರ್ಯ, ದೂರದೃಷ್ಟಿ ಮತ್ತು ಭಾರತದ ಸಾರ್ವಭೌಮತೆಗಾಗಿ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದೆ. ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ ರಾಜಕೀಯ ಪಯಣ, ನಿರ್ಣಾಯಕ ಆಡಳಿತ ಮತ್ತು ಭಾರತದ ಇತಿಹಾಸದಲ್ಲಿ ಅವರ ಸ್ಥಾನದ ಬಗ್ಗೆ ಲೇಖನವು ವಿವರಿಸುತ್ತದೆ.

ಇಂದಿರಾ ಗಾಂಧಿ ಜನ್ಮದಿನಕ್ಕೆ ಪ್ರಧಾನಿ ಮೋದಿ ಗೌರವ ನಮನ, ಕಾಂಗ್ರೆಸ್ ಹೇಳಿದ್ದೇನು?
ನರೇಂದ್ರ ಮೋದಿ Image Credit source: PTI
ನಯನಾ ರಾಜೀವ್
|

Updated on: Nov 19, 2026 | 8:54 AM

Share

ನವದೆಹಲಿ, ನವೆಂಬರ್ 19:ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 109ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. ನವೆಂಬರ್ 19ರಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಮೋದಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವೂ ತನ್ನ ಮಾಜಿ ನಾಯಕಿಯನ್ನು ಸ್ಮರಿಸಿಕೊಂಡಿದೆ. ಇಂದಿರಾ ಗಾಂಧಿಯವರ ಧೈರ್ಯ, ದೂರದೃಷ್ಟಿ ಮತ್ತು ಭಾರತದ ಸಾರ್ವಭೌಮತ್ವ ಹಾಗೂ ಸ್ವಾವಲಂಬನೆಗಾಗಿ ಅವರು ನೀಡಿದ ಕೊಡುಗೆಗಳು ಹಲವು ತಲೆಮಾರುಗಳಿಗೆ ಸ್ಫೂರ್ತಿಯಾಗಿವೆ ಎಂದು ಕಾಂಗ್ರೆಸ್ ಹೇಳಿದೆ. ಅವರ ಸೇವೆ ಮತ್ತು ನಾಯಕತ್ವದ ಪರಂಪರೆ ಜನರ ಮನಸ್ಸಿನಲ್ಲಿ ಸದಾ ಉಳಿಯಲಿದೆ ಎಂದು ಪಕ್ಷ ತನ್ನ ಸಂದೇಶದಲ್ಲಿ ತಿಳಿಸಿದೆ.

ಯಾರು ಈ ಇಂದಿರಾ ಗಾಂಧಿ?

ಇಂದಿರಾ ಪ್ರಿಯದರ್ಶಿನಿ ಗಾಂಧಿ ಅವರು 1917ರ ನವೆಂಬರ್ 19ರಂದು ಅಲಹಾಬಾದ್‌ನಲ್ಲಿ ಜನಿಸಿದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುತ್ರಿ. ಫಿರೋಜ್ ಗಾಂಧಿ ಅವರನ್ನು ವಿವಾಹವಾದ ಬಳಿಕ ಇಂದಿರಾ ಗಾಂಧಿ ಎಂದು ಪ್ರಸಿದ್ಧರಾದರು. ಬಾಲ್ಯದಿಂದಲೇ ರಾಜಕೀಯ ವಾತಾವರಣದಲ್ಲಿ ಬೆಳೆದ ಅವರು ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿಯೂ ಭಾಗವಹಿಸಿದ್ದರು. ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರು. 1959ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.

ಭಾರತದ ಮೊದಲ ಮಹಿಳಾ ಪ್ರಧಾನಿ

1966ರ ಜನವರಿ 24ರಂದು ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. 1966ರಿಂದ 1977ರವರೆಗೆ ಸತತವಾಗಿ ಪ್ರಧಾನಿಯಾಗಿದ್ದರು. 1977ರ ಚುನಾವಣೆಯಲ್ಲಿ ಸೋತ ಬಳಿಕ ಅಧಿಕಾರದಿಂದ ಹೊರಬಂದ ಅವರು, 1980ರಲ್ಲಿ ಮತ್ತೆ ಪ್ರಧಾನಿಯಾದರು. 1984ರ ಅಕ್ಟೋಬರ್ 31ರಂದು ಹತ್ಯೆಯಾಗುವವರೆಗೂ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು. ಭಾರತದ ಪ್ರಧಾನಿಯಾಗಿದ್ದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು.

ಇದನ್ನೂ ಓದಿ: ಮತ್ತೆ ಪ್ರಧಾನಿ ಮೋದಿಯನ್ನು ಹೊಗಳಿದ ಟ್ರಂಪ್; ‘ಗಟ್ಟಿ ವ್ಯಕ್ತಿ, ಶ್ರೇಷ್ಟ ನಾಯಕ’ ಎಂದು ಕೊಂಡಾಡಿದ ಅಮೆರಿಕ ಅಧ್ಯಕ್ಷ

ಇಂದಿರಾ ಗಾಂಧಿ ಆಡಳಿತದ ಪ್ರಮುಖ ಘಟನೆಗಳು

1971ರ ಭಾರತ-ಪಾಕಿಸ್ತಾನ ಯುದ್ಧ: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ನಡೆದ 1971ರ ಯುದ್ಧದಲ್ಲಿ ಭಾರತ ಜಯಗಳಿಸಿತು. ಇದರ ಪರಿಣಾಮವಾಗಿ ಪೂರ್ವ ಪಾಕಿಸ್ತಾನ ಪ್ರತ್ಯೇಕಗೊಂಡು ಬಾಂಗ್ಲಾದೇಶ ರಾಷ್ಟ್ರ ಉದಯವಾಯಿತು.

ತುರ್ತು ಪರಿಸ್ಥಿತಿ: 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. 1977ರ ಮಾರ್ಚ್‌ವರೆಗೆ ಜಾರಿಯಲ್ಲಿದ್ದ ಈ ಅವಧಿಯಲ್ಲಿ ನಾಗರಿಕ ಸ್ವಾತಂತ್ರ್ಯಗಳ ಮೇಲೆ ನಿರ್ಬಂಧ, ಪತ್ರಿಕಾ ಸೆನ್ಸಾರ್ ಮತ್ತು ರಾಜಕೀಯ ನಾಯಕರ ಬಂಧನಗಳು ನಡೆದವು. ಇದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿನ ಅತ್ಯಂತ ಚರ್ಚಿತ ಘಟನೆಗಳಲ್ಲಿ ಒಂದಾಗಿದೆ.

ಮೋದಿ ಪೋಸ್ಟ್

ಪೋಖ್ರಾನ್ ಅಣುಪರೀಕ್ಷೆ: 1974ರ ಮೇ 18ರಂದು ರಾಜಸ್ಥಾನದ ಪೋಖ್ರಾನ್‌ನಲ್ಲಿ ಭಾರತ ತನ್ನ ಮೊದಲ ಅಣುಪರೀಕ್ಷೆ ನಡೆಸಿತು. ಈ ಪರೀಕ್ಷೆಯು ಭಾರತದ ಅಣುಶಕ್ತಿ ಕಾರ್ಯಕ್ರಮದಲ್ಲಿ ಮಹತ್ವದ ಮೈಲಿಗಲ್ಲಾಯಿತು.

ಇಂದಿರಾ ಗಾಂಧಿಯವರ ಕುಟುಂಬದ ರಾಜಕೀಯ ಹಿನ್ನೆಲೆ

ಇಂದಿರಾ ಗಾಂಧಿಯವರ ತಂದೆ ಜವಾಹರಲಾಲ್ ನೆಹರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದರು. ಅವರ ಪುತ್ರ ರಾಜೀವ್ ಗಾಂಧಿ ಕೂಡ 1984ರಲ್ಲಿ ಪ್ರಧಾನಿಯಾದರು. ಹೀಗಾಗಿ ನೆಹರು ಕುಟುಂಬದ ಮೂರು ತಲೆಮಾರುಗಳು ಭಾರತದ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿವೆ. 1984ರ ಅಕ್ಟೋಬರ್ 31ರಂದು ತಮ್ಮದೇ ಭದ್ರತಾ ಸಿಬ್ಬಂದಿಯಿಂದ ಇಂದಿರಾ ಗಾಂಧಿ ಹತ್ಯೆಗೀಡಾದರು. ಅವರ ನಿಧನದ ಬಳಿಕ ಪುತ್ರ ರಾಜೀವ್ ಗಾಂಧಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.

ಭಾರತದ ರಾಜಕೀಯ ಇತಿಹಾಸದಲ್ಲಿ ಇಂದಿರಾ ಗಾಂಧಿಯವರ ಆಡಳಿತ, ಪ್ರಮುಖ ನಿರ್ಧಾರಗಳು, ಸಾಧನೆಗಳು ಮತ್ತು ವಿವಾದಗಳು ಇಂದಿಗೂ ಚರ್ಚೆಯ ವಿಷಯವಾಗಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ತೀವ್ರ ಚಳಿ ನಡುವೆಯೂ ರಾತ್ರಿ ಫ್ರೀಡಂ ಪಾರ್ಕಲ್ಲೇ ಉಳಿದ ಆಶಾ ಕಾರ್ಯಕರ್ತೆಯರು
ತೀವ್ರ ಚಳಿ ನಡುವೆಯೂ ರಾತ್ರಿ ಫ್ರೀಡಂ ಪಾರ್ಕಲ್ಲೇ ಉಳಿದ ಆಶಾ ಕಾರ್ಯಕರ್ತೆಯರು
ಬೆಂಗಳೂರಿನಲ್ಲಿ ಎದೆ ಝಲ್ ಎನಿಸುವ ಹಿಟ್ ಆ್ಯಂಡ್ ರನ್
ಬೆಂಗಳೂರಿನಲ್ಲಿ ಎದೆ ಝಲ್ ಎನಿಸುವ ಹಿಟ್ ಆ್ಯಂಡ್ ರನ್
ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್
ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್
ಇಂದು ಯಾವ ರಾಶಿಯವರಿಗೆ ಗುರುಬಲವಿದೆ ನೋಡಿ
ಇಂದು ಯಾವ ರಾಶಿಯವರಿಗೆ ಗುರುಬಲವಿದೆ ನೋಡಿ
ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್