AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳವಣಿಗೆ ಸಹಿಸದೇ ದುಷ್ಟಶಕ್ತಿಗಳ ಷಡ್ಯಂತ್ರ: ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ

ಬೆಳವಣಿಗೆ ಸಹಿಸದೇ ದುಷ್ಟಶಕ್ತಿಗಳ ಷಡ್ಯಂತ್ರ: ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ

ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Nov 18, 2026 | 10:55 PM

Share

ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ‘ಸಿದ್ದಸಿರಿ ಕೋ-ಆಪರೇಟಿವ್ ಬ್ಯಾಂಕ್’ ಕುರಿತು ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ. ಬ್ಯಾಂಕ್‌ನ ಬಡ ಠೇವಣಿದಾರರ 1065 ಕೋಟಿ ರೂ. ಹಣವನ್ನು ಚಿಂಚೋಳಿಯ ಎಥೆನಾಲ್ ಘಟಕಕ್ಕೆ ಸುರಿಯಲಾಗಿದೆ. ಬ್ಯಾಂಕ್​​ನಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಇದೀಗ ಎಲ್ಲಾ ಆರೋಪಗಳಿಗೆ ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್,ಶಿವಯೋಗಿ ಸಿದ್ಧರಾಮೇಶ್ವರರನ್ನ ಸ್ಮರಿಸಿ ಸ್ಪಷ್ಟನೆ ನೀಡಿದ್ದಾರೆ.

ವಿಜಯಪುರ, (ನವೆಂಬರ್ 18): ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ‘ಸಿದ್ದಸಿರಿ ಕೋ-ಆಪರೇಟಿವ್ ಬ್ಯಾಂಕ್’ ಕುರಿತು ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ. ಬ್ಯಾಂಕ್‌ನ ಬಡ ಠೇವಣಿದಾರರ 1065 ಕೋಟಿ ರೂ. ಹಣವನ್ನು ಚಿಂಚೋಳಿಯ ಎಥೆನಾಲ್ ಘಟಕಕ್ಕೆ ಸುರಿಯಲಾಗಿದೆ. ಬ್ಯಾಂಕ್​​ನಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಇದೀಗ ಎಲ್ಲಾ ಆರೋಪಗಳಿಗೆ ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್,ಶಿವಯೋಗಿ ಸಿದ್ಧರಾಮೇಶ್ವರರನ್ನ ಸ್ಮರಿಸಿ ಸ್ಪಷ್ಟನೆ ನೀಡಿದ್ದಾರೆ.

ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಹಣಕಾಸಿನ ವಿಚಾರವಾಗಿ ಬಂದ ಆರೋಪಗಳಿಗೆ ವಿಡಿಯೋ ಮೂಲಕ ಬ್ಯಾಂಕಿನ ಠೇವಣಿದಾರರು, ಗ್ರಾಹಕರಿಗೆ ಸ್ಪಷ್ಟನೆ ನೀಡಿರುವ ಯತ್ನಾಳ್, ಸಿದ್ಧಸಿರಿ ಸುಭದ್ರವಾಗಿದೆ. ಒಂದು ವಾರದಿಂದ ಕೆಲ‌ ದುಷ್ಟಶಕ್ತಿಗಳು ಸಿದ್ಧಸಿರಿ ಸೌಹಾರ್ದರ ವಿರುದ್ಧ ಷಡ್ಯಂತ್ರ ಮಾಡುತ್ತಿವೆ. ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಿದ್ಧಸಿರಿ ತನ್ನ ಕಾರ್ಯವಾಪ್ತಿ ಹೆಚ್ಚಿಸಿಕೊಂಡಿದೆ. 6 ಸಾವಿರ ಕೋಟಿ ಠೇವಣಿ ಸಂಗ್ರಹಿಸಿ ಶೇರುದಾರರು, ಠೇವಣಿದಾರರ ವಿಶ್ವಾಸ ಗಳಿಸಿದೆ. ಸಿದ್ಧಸಿರಿಯನ್ನ ರಾಜ್ಯದಲ್ಲಿ ನಂ1 ಆಗಿ ತಂದು ನಿಲ್ಲಿಸಿದ್ದೇವೆ. ನಿಮ್ಮ ಆಶೀರ್ವಾದ, ಸಿದ್ಧಸಿರಿ ಸಿಬ್ಬಂದಿಗಳ ಶ್ರಮದಿಂದ ಯಾವುದೇ ಗೊಂದಲಗಳಿಲ್ಲ. ಯಾವುದೇ ಅವ್ಯವಹಾರ ನಡೆದಿಲ್ಲ, ಅಭದ್ರಿತ ಸಾಲಗಳನ್ನ ನೀಡಿಲ್ಲ ಎಂದಿದ್ದಾರೆ.

ಎಲ್ಲದಕ್ಕೂ ಸೂಕ್ತ ಭದ್ರತೆ ತೆಗೆದುಕೊಂಡಿದ್ದೇವೆ. 2 ಸಾವಿರ ಕೋಟಿಯಷ್ಟು ಸ್ಥಿರಾಸ್ತಿಯನ್ನ ಮಾಡಿದ್ದೇವೆ. ಸುರಕ್ಷಿತ ಆಸ್ತಿಗಳನ್ನ ಇಟ್ಟುಕೊಂಡೆ ಸಾಲವನ್ನ ಕೊಟ್ಟಿದ್ದೇವೆ. ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ, ನಿಮ್ಮ ಪ್ರೀತಿಯೊಂದಿಗೆ ಭವಿಷ್ಯದಲ್ಲಿ ನಮ್ಮ‌ ಜೊತೆಗಿರಿ. ಯಾವುದೇ ತೊಂದರೆ ಆಗೋದಿಲ್ಲ ಎಂದು ತಮ್ಮ ಬ್ಯಾಂಕಿನ ಗ್ರಹಕರಿಗೆ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 18, 2026 10:54 PM

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ಅಶೋಕ ಯಡಳ್ಳಿಯವರು ಮೂಲತಃ ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮದವರು. ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದು ಇವರ ಕೆಲಸದ ಮಾಹಿತಿಯಾಗಿದೆ. ಪ್ರಾಥಮಿಕ ಶಿಕ್ಷಣ ನಂತರ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡವೇ ಇವರ ವಿದ್ಯಾ ಕ್ಷೇತ್ರವಾಗಿದೆ . ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ್ದಾರೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ, ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದಾರೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ, ಆಸಕ್ತಿ ಇವರಗಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ.

Read More