AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿನ ಆಗಮನದ ಹೊಸ್ತಿಲಲ್ಲಿ ಸಮಂತಾ-ರಾಜ್ ಮನೆಯಲ್ಲಿ ಸಂಭ್ರಮದ ಪೂಜೆ

ಒಂಬತ್ತನೇ ತಿಂಗಳ ಗರ್ಭಿಣಿಯಾಗಿರುವ ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿರಿಯರ ಆಶೀರ್ವಾದ ಪಡೆದ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ತಾರೆಯರು ಹಾಗೂ ಅಭಿಮಾನಿಗಳು ಕಾಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಮಗುವಿನ ಆಗಮನದ ಹೊಸ್ತಿಲಲ್ಲಿ ಸಮಂತಾ-ರಾಜ್ ಮನೆಯಲ್ಲಿ ಸಂಭ್ರಮದ ಪೂಜೆ
ರಾಜ್​-ಸಮಂತಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 19, 2026 | 8:06 AM

Share

ಮುಖ್ಯಾಂಶಗಳು

  • ಒಂಬತ್ತನೇ ತಿಂಗಳಲ್ಲಿ ಮಗುವಿನ ನಿರೀಕ್ಷೆಯ ನಡುವೆ ಸಮಂತಾ ವಿಶೇಷ ಪೂಜೆ
  • ಕೆಂಪು ಉಡುಗೆಯಲ್ಲಿ ಹೊಳೆದ ಸಮಂತಾ ಪ್ರೆಗ್ನೆನ್ಸಿ ಗ್ಲೋ ಕಂಡು ಫ್ಯಾನ್ಸ್ ಫಿದಾ
  • ಹಿರಿಯರ ಆಶೀರ್ವಾದ ಪಡೆದ ಜೋಡಿಗೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳ ಶುಭಹಾರೈಕೆ

ನಟಿ ಸಮಂತಾ ರುತ್ ಪ್ರಭು ತಾಯ್ತನದ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಅವರು ಈಗ ಒಂಬತ್ತನೇ ತಿಂಗಳ ಗರ್ಭಿಣಿಯಾಗಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಪುಟ್ಟ ಕಂದಮ್ಮನ ಆಗಮನವಾಗಬಹುದು. ಈ ಸಿಹಿ ಕ್ಷಣಗಳ ನಡುವೆ ಪತಿ ರಾಜ್ ನಿಡಿಮೋರು ಜೊತೆ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆಯ ಫೋಟೋಗಳಲ್ಲಿ ಸಮಂತಾ ಮೊಗದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಪೂಜೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಸಮಂತಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ರಾಜ್ ನಿಡಿಮೋರು ಕೂಡ ಜೊತೆಯಲ್ಲಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಕುಟುಂಬದ ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಸರಳವಾಗಿ ನಡೆದಿದೆ.

ಪೂಜೆಯ ಫೋಟೋಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ. ಸಮಂತಾ ಅವರ ಪ್ರೆಗ್ನೆನ್ಸಿ ಗ್ಲೋ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪತಿ ರಾಜ್ ಜೊತೆ ಸಮಂತಾ ತುಂಬಾ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ.

ಮನೆಯಲ್ಲೇ ಇಬ್ಬರೂ ಜೊತೆಯಾಗಿ ಪೂಜೆ ಸಲ್ಲಿಸುತ್ತಿರುವ ಫೋಟೋಗಳು ಗಮನ ಸೆಳೆಯುತ್ತಿವೆ. ಹಿರಿಯರು ಸಮಂತಾ ಅವರಿಗೆ ಆಶೀರ್ವಾದ ಮಾಡುತ್ತಿರುವ ದೃಶ್ಯವೂ ಇದೆ. ಕುಟುಂಬಸ್ಥರ ಜೊತೆ ಈ ಜೋಡಿ ಖುಷಿಯಿಂದ ಫೋಟೋ ತೆಗೆಸಿಕೊಂಡಿದೆ.

ಇದನ್ನೂ ಓದಿ: ಸಿಂಪಲ್ ಫೋಟೋ ಹಂಚಿಕೊಂಡು ‘ಇದೇ ನನ್ನ ಮೆಟರ್ನಿಟಿ ಫೋಟೋಶೂಟ್’ ಎಂದ ಸಮಂತಾ

ಫೋಟೋ ಹಂಚಿಕೊಂಡ ಸಮಂತಾ ಕೇವಲ ‘ಅಸ್’ ಎಂದು ಬರೆದು ಬಿಳಿ ಹಾರ್ಟ್ ಎಮೋಜಿ ಹಾಕಿದ್ದಾರೆ. ನಟಿ ಲಕ್ಷ್ಮಿ ಮಂಚು ಮತ್ತು ರಾಹುಲ್ ರವೀಂದ್ರನ್ ಸೇರಿದಂತೆ ಹಲವು ತಾರೆಯರು ಶುಭ ಹಾರೈಸಿದ್ದಾರೆ. ಅಭಿಮಾನಿಗಳು ಕೂಡ ಮಗುವಿನ ಆಗಮನಕ್ಕೆ ಕಾತರದಿಂದ ಕಾಯುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:05 am, Thu, 19 November 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More