AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ನೆನಪಲ್ಲಿ ಚಪ್ಪಲಿ ಧರಿಸುವುದನ್ನೇ ಬಿಟ್ಟ ನಟ ವಿಜಯ್ ಆಂಟನಿ; ಬರಿಗಾಲಲ್ಲೇ ನಡಿಗೆ

ಹಿರಿಯ ಮಗಳು ಮೀರಾ ನಿಧನದ ನಂತರ ನಟ ವಿಜಯ್ ಆಂಟನಿ ಚಪ್ಪಲಿ ಧರಿಸುವುದನ್ನು ಬಿಟ್ಟಿದ್ದಾರೆ. ಮಗಳು ಕೊನೆಯದಾಗಿ ಕಟ್ಟಿದ್ದ ವಾಚ್ ಅನ್ನೇ ಇಂದಿಗೂ ಕಟ್ಟಿಕೊಂಡು ಮಗಳ ನೆನಪಲ್ಲೇ ಬದುಕುತ್ತಿದ್ದಾರೆ ಎಂದು ಪತ್ನಿ ಫಾತಿಮಾ 'ಅಪ್ಪ ಕುಟ್ಟಿ' ಸಿನಿಮಾ ಕಾರ್ಯಕ್ರಮದಲ್ಲಿ ಭಾವುಕರಾಗಿ ಸತ್ಯ ಬಿಚ್ಚಿಟ್ಟಿದ್ದಾರೆ.

ಮಗಳ ನೆನಪಲ್ಲಿ ಚಪ್ಪಲಿ ಧರಿಸುವುದನ್ನೇ ಬಿಟ್ಟ ನಟ ವಿಜಯ್ ಆಂಟನಿ; ಬರಿಗಾಲಲ್ಲೇ ನಡಿಗೆ
ವಿಜಯ್
ರಾಜೇಶ್ ದುಗ್ಗುಮನೆ
|

Updated on:Nov 19, 2026 | 7:12 AM

Share

ಮುಖ್ಯಾಂಶಗಳು

  • ಮಗಳ ನೆನಪಲ್ಲೇ ಬದುಕುತ್ತಿರುವ ತಂದೆಯ ಕರುಣಾಜನಕ ಕಥೆ
  • ಕೋಣೆ ತುಂಬಾ ಇದ್ದ ಮಗಳ ಚಪ್ಪಲಿ ನೋಡಿ ವಿಜಯ್ ತೆಗೆದುಕೊಂಡ ನಿರ್ಧಾರ
  • ಮಗಳು ಕೊನೆಯದಾಗಿ ಕಟ್ಟಿದ್ದ ವಾಚ್‌ಗೆ ವಿಜಯ್ ಆಂಟನಿ ಭಾವನಾತ್ಮಕ ನಮನ

ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ತಮ್ಮ ಹಿರಿಯ ಮಗಳು ಮೀರಾಳನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. 2023ರ ಸೆಪ್ಟೆಂಬರ್‌ನಲ್ಲಿ ಮಗಳು ನಿಧನರಾದ ಬಳಿಕ ಅವರು ಚಪ್ಪಲಿ ಧರಿಸುವುದನ್ನೇ ಬಿಟ್ಟಿದ್ದಾರೆ. ಮೀರಾ ಕೊನೆಯ ಬಾರಿಗೆ ಕಟ್ಟಿದ್ದ ಕೈಗಡಿಯಾರವನ್ನೇ ಇಂದಿಗೂ ಕಟ್ಟಿಕೊಂಡು ಮಗಳ ನೆನಪಲ್ಲೇ ಬದುಕುತ್ತಿದ್ದಾರೆ ಎಂದು ಪತ್ನಿ ಫಾತಿಮಾ ಭಾವುಕರಾಗಿ ಹೇಳಿದ್ದಾರೆ.

ತಂದೆ-ಮಗಳ ಬಾಂಧವ್ಯದ ಕಥೆ ಹೊಂದಿರುವ ‘ಅಪ್ಪ ಕುಟ್ಟಿ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಫಾತಿಮಾ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಮಗಳ ಸಾವಿನ ನಂತರ ತಾವು ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ಸುಮಾರು ಐದು ವರ್ಷಗಳ ನಂತರ ಈಗ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಗೆ ಬಂದಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ಮೀರಾಳಿಗಾಗಿ ಮನೆಯಲ್ಲಿ ಒಂದು ಕೋಣೆ ತುಂಬಾ ಚಪ್ಪಲಿ ಮತ್ತು ಶೂಗಳನ್ನು ತಂದಿಡಲಾಗಿತ್ತು. ಅವುಗಳನ್ನು ನೋಡಿದ ನಂತರ ವಿಜಯ್ ಆಂಟನಿ ಚಪ್ಪಲಿ ಹಾಕುವುದನ್ನು ನಿಲ್ಲಿಸುವ ನಿರ್ಧಾರ ಮಾಡಿದರು. ಈಗ ಕೇವಲ ಕೆಲವು ಕಾರ್ಯಕ್ರಮಗಳಿಗಾಗಿ ಮಾತ್ರ ಅವರು ಶೂ ಧರಿಸುತ್ತಾರೆ. ಅವರ ಬಳಿ ಅನೇಕ ದುಬಾರಿ ವಾಚ್‌ಗಳಿದ್ದರೂ ಅವುಗಳನ್ನು ಬಳಸುತ್ತಿಲ್ಲ. ಬದಲಾಗಿ ಮಗಳನ್ನು ಕೊನೆಯದಾಗಿ ನೋಡಿದಾಗ ಆಕೆಯ ಕೈಯಲ್ಲಿದ್ದ ಸಾಧಾರಣ ವಾಚ್ ಅನ್ನೇ ದಿನವೂ ಕಟ್ಟಿಕೊಳ್ಳುತ್ತಿದ್ದಾರೆ’ ಎಂಬ ವಿಷಯವನ್ನು ಫಾತಿಮಾ ರಿವೀಲ್ ಮಾಡಿದ್ದಾರೆ.

‘ನಾನು ಏಳು ವರ್ಷದವಳಿದ್ದಾಗ ನನ್ನ ತಂದೆ ಕುಟುಂಬವನ್ನು ಬಿಟ್ಟು ಹೋಗಿದ್ದರು. ತಂದೆಯ ಪ್ರೀತಿಯನ್ನು ತಮಗೆ ನೀಡಿದ್ದು ವಿಜಯ್ ಆಂಟನಿ’ ಎಂದು ಫಾತಿಮಾ ಭಾವುಕರಾದರು. ಕಾರ್ಯಕ್ರಮದಲ್ಲಿ ವಿಜಯ್ ಆಂಟನಿ ಅವರ ಕಿರಿಯ ಮಗಳು ಲಾರಾ ಕೂಡ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ ವಿಜಯ್ ಆಂಟನಿ, ಈ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ತಮ್ಮ ತಂದೆಗೆ ಕರೆ ಮಾಡಿ ಮಾತನಾಡಬೇಕು ಅನಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಹೊಸಬರ ಸಸ್ಪೆನ್ಸ್ ಕತೆಗೆ ಮರುಳಾದ ನಟ ನೀನಾಸಂ ಸತೀಶ್

2023ರಲ್ಲಿ ಆಳ್ವಾರ್‌ಪೇಟೆಯ ನಿವಾಸದಲ್ಲಿ 16 ವರ್ಷದ ಮೀರಾ ಆತ್ಮಹತ್ಯೆಗೆ ಶರಣಾಗಿದ್ದರು. ಅಂದಿನಿಂದ ವಿಜಯ್ ಆಂಟನಿ ಅವರ ಫಿಲ್ಮ್ ಕಾರ್ಪೊರೇಷನ್ ನಿರ್ಮಿಸುವ ಎಲ್ಲಾ ಚಿತ್ರಗಳಿಗೂ ಫಾತಿಮಾ ಮತ್ತು ಮೀರಾ ಹೆಸರನ್ನೇ ನಿರ್ಮಾಪಕರಾಗಿ ಹಾಕಲಾಗುತ್ತಿದೆ. ಮಾರನ್ ನಿರ್ದೇಶನದ ‘ಅಪ್ಪ ಕುಟ್ಟಿ’ ಚಿತ್ರದಲ್ಲಿ ಪ್ರೀತಿ ಅಸ್ರಾನಿ ನಾಯಕಿಯಾಗಿದ್ದಾರೆ. ಈ ಸಿನಿಮಾ ಇಂದು (ನವೆಂಬರ್ 19) ಧನುಷ್ ಅವರ ‘ಓಂ: ಚಾಪ್ಟರ್ 1’ ಹಾಗೂ ‘ಆಕಾಶಂಲೋ ಒಕ ತಾರಾ’ ಚಿತ್ರಗಳ ಜೊತೆ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:04 am, Thu, 19 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ