AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 19 November: ಇಂದು ಈ ರಾಶಿಯವರಿಗೆ ಸಂಗಾತಿಯಿಂದ ಅತಿಯಾದ ನೋವು

ಶಾಲಿ ವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಗುರುವಾರದಂದು ದ್ವೇಷಭಾವ, ಕುಟುಂಬದ ಪ್ರೀತಿ, ಸಮಯದ ನಿರೀಕ್ಷೆ, ವಸ್ತುಗಳ ನಷ್ಟ, ಧಾರ್ಮಿಕ ಆಚರಣೆ, ಸ್ವಾರ್ಥದ ಆಲೋಚನೆ, ಸ್ಥಾನಕ್ಕಾಗಿ ಕಿತ್ತಾಟ ಇವೆಲ್ಲ ಇಂದಿನ ವಿಶೇಷ‌.

Horoscope Today 19 November: ಇಂದು ಈ ರಾಶಿಯವರಿಗೆ ಸಂಗಾತಿಯಿಂದ ಅತಿಯಾದ ನೋವು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Nov 19, 2026 | 1:06 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಧ್ರುವ, ಕರಣ : ತೈತಿಲ, ಸೂರ್ಯೋದಯ – 06 – 21 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:31 – 14:57, ಯಮಗಂಡ ಕಾಲ 07:21 – 07:47, ಗುಳಿಕ ಕಾಲ 09:13 – 10:39.

ಮೇಷ ರಾಶಿ: ಆರ್ಥಿಕ ಸಂಕಟವನ್ನು ಸ್ನೇಹಿತರ ಸಹಾಯವನ್ನು ಪಡೆದು ಸರಿಮಾಡಿಕೊಳ್ಳುವಿರಿ. ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತ್ತದೆಂಬ ಭಯ. ಬೇಕಾದುದನ್ನು ಹಣ ಕೊಟ್ಟೇ ಪಡೆಯುವಿರಿ. ನಿಮ್ಮ ನಿಮ್ಮವರ ವಿವಾಹದ ಬಗ್ಗೆ ಮಾತುನಾಡಲು ಹೋಗಲಿದ್ದೀರಿ. ಕುಟುಂಬದಲ್ಲಿ ಪ್ರೀತಿ, ಮಮತೆ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ದೇಹದ ದಣಿವು. ನಿಮ್ಮ ದಾಖಲೆಗಳನ್ನು ಬಹಳ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುವುದು.

ವೃಷಭ ರಾಶಿ: ನಿಮ್ಮ ಹಣದ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ಮನೆಯಲ್ಲಿ ಸಣ್ಣ ವಿಚಾರಕ್ಕೆ ನೀವು ವಿವಾದ ಮಾಡಿಕೊಳ್ಳುವಿರಿ. ನಿಮ್ಮ ನೆಮ್ಮದಿಯನ್ನು ಸಂಗಾತಿಯು ಭಂಗ ಮಾಡಬಹುದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಸ್ಪಷ್ಟತೆ ಇರದು. ವಂಚನೆಯಲ್ಲಿ ಗೊತ್ತಾಗದಂತೆ ಸಿಕ್ಕಿಕೊಳ್ಳುವಿರಿ. ಕುಟುಂಬದಲ್ಲಿ ಸ್ವಲ್ಪ ಅಂತರ ಇರಬಹುದು. ಆರೋಗ್ಯದಲ್ಲಿ ಕಣ್ಣಿನ ಬಗ್ಗೆ ಎಚ್ಚರಿಕೆ ಬೇಕು. ನಿಮಗೆ ಕೃತಜ್ಞತೆ ಇರಲಿ. ಎಲ್ಲದರಲ್ಲಿಯೂ ಉತ್ತಮವಾದುದನ್ನೇ ಆರಿಸಿಕೊಳ್ಳುವಿರಿ.

ಮಿಥುನ ರಾಶಿ: ಅನಿರೀಕ್ಷಿತವಾಗಿ ಧನವ್ಯಯವಾಗಿದ್ದು ಆತಂಕವು ಆಗಲಿದೆ. ರಾಜಕೀಯದಿಂದ ನೀವು ಪ್ರೇರಣೆ ಪಡೆಯುವಿರಿ. ಮನಸ್ಸಿನ ಜಾಡ್ಯಕ್ಕೆ ನಿರಂತರ ಪ್ರೇರಣೆ ಅಗತ್ಯ. ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ಪ್ರಭಾವೀ ಜನರ ಭೇಟಿಯಿಂದ ಅನೇಕ ಲಾಭವನ್ನು ಮಾಡಿಕೊಳ್ಳುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಸಣ್ಣ ಕೊಡುಗೆ ನೀಡುವಿರಿ.

ಕರ್ಕಾಟಕ ರಾಶಿ: ಮನಸ್ಸಿಗೆ ಯೋಗ್ಯರಾದವರ ಜೊತೆ ಮಾತ್ರ ಬಿಚ್ಚುಮನಸ್ಸಿನಿಂದ ಇರುವಿರಿ. ವ್ಯಾಪಾರದಲ್ಲಿ ಲಾಭವನ್ನು ಕಂಡು ಏನಾದರೂ ಯೋಜನೆಯನ್ನು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಪ್ರಶಂಸೆಯಿಂದ ಸಣ್ಣ ಅಹಂಕಾರವು ಬರಬಹುದು. ಕುಟುಂಬದಲ್ಲಿ ಸಂತೋಷದ ಮಾತುಕತೆ. ಪೂರ್ವಯೋಜಿತ ಕಾರ್ಯಕ್ಕೂ ನೀವು ಸಮಯವನ್ನು ಹೊಂದಿಸಿಕೊಳ್ಳಲಾಗದು. ನಿಮಗೆ ಎಲ್ಲವನ್ನೂ ಪ್ರತಿಭಟಿಸುವ ಮನೋಭಾವ ಬರುವುದು.

ಸಿಂಹ ರಾಶಿ: ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ದಾನವೇ ನಿಮಗೆ ಕುತ್ತನ್ನು ತರುವ ಸಾಧ್ಯತೆ ಇದೆ. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಅದನ್ನು ತಡೆದರೆ ದಿನ ಸುಗಮ. ಪ್ರೀತಿಯನ್ನು ನೀವು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ. ಬೇಗ ಮುಗಿಯುವ ಕೆಲಸವನ್ನು ಮೊದಲು ಮಾಡಿ.

ಕನ್ಯಾ ರಾಶಿ: ಕೆಲಸದಲ್ಲಿ ಎರಡು, ಮೂರು ಕಾರ್ಯಗಳು ಒಂದೇ ಸಮಯದಲ್ಲಿ ಬರಬಹುದು, ಆದರೆ ನೀವು ನಿಭಾಯಿಸಬಲ್ಲಿರಿ. ಯಾರದೋ ಹಂಗಿನಿಂದ ದೂರವಿರಲು ಬಯಸುವಿರಿ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ದೇವರ ಮೇಲೆ ನಂಬಿಕೆ ಇಟ್ಟ ಕಾರಣ ನಿಮ್ಮ ಮನೋರಥವು ಪೂರ್ತಿಯಾಗಿದ್ದು ನಿಮಗೆ ಅತಿಶಯ ಸಂತೋಷವಾಗಲಿದೆ. ಹಣದಲ್ಲಿ ಜಾಗರೂಕತೆ ಅಗತ್ಯ. ಕುಟುಂಬದಲ್ಲಿ ಸಂವಾದ ಹೆಚ್ಚಿಸಬೇಕು. ಆರೋಗ್ಯದಲ್ಲಿ ಮಾನಸಿಕ ಒತ್ತಡ ಸ್ವಲ್ಪ ಇರಬಹುದು.

ತುಲಾ ರಾಶಿ: ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಸಹೋದ್ಯೋಗಿಗಳು ಸುಮ್ಮನೇ ಕಿರಿಕಿರಿ ಮಾಡುವರು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಯಾರ ಮೇಲೂ ದ್ವೇಷ ಬೇಡ. ಸಿಟ್ಟು ಬಂದರೆ ತೋರಿಸಿ, ಯಥಾಸ್ಥಿತಿಯಲ್ಲಿ‌ ಇರಿ. ಸಂಬಂಧಗಳಲ್ಲಿ ಅತಿಯಾದ ವಿಶ್ಲೇಷಣೆ ಮಾಡಬೇಡಿ; ಅದು ದೂರವನ್ನು ಸೃಷ್ಟಿಸಬಹುದು. ಆರೋಗ್ಯದಲ್ಲಿ ಚರ್ಮ ಸಂಬಂಧಿತ ಸಮಸ್ಯೆ.

ವೃಶ್ಚಿಕ ರಾಶಿ: ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಕುಟುಂಬದ ಗುಟ್ಟನ್ನು ಬಿಟ್ಟುಕೊಡಬಾರದು. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಮಹಾತ್ಮರ ಸೇವೆಗೆ ಅನಿರೀಕ್ಷಿತ ಅವಕಾಶವು ಸಿಗಲಿದೆ. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಪ್ರಯತ್ನಶೀಲರಾಗುವುದು ಉತ್ತಮ. ವಿದೇಶದಲ್ಲಿರುವ ಮಕ್ಕಳ ಆರೋಗ್ಯದಲ್ಲಿ ತೊಂದರೆ.

ಧನು ರಾಶಿ: ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಕೆಲವು ವಿಚಾರಕ್ಕೆ ಬುದ್ಧಿಯು ಸೂಚಿಸದೇ ಇರಬಹುದು. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಇಲ್ಲ ಎನಿಸಬಹುದು. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಮೋಸದ ಕರೆಗಳಿಂದ ವಂಚನೆಯ ಜಾಲಕ್ಕೆ ಸಿಕ್ಕಿಕೊಳ್ಳಬಹುದು. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳು ತಿರಸ್ಕರಿಸಬಹುದು. ‌

ಮಕರ ರಾಶಿ: ಪ್ರಯಾಣವು ಅಹಿತವೆನಿಸಬಹುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮನ್ನು ಗುರುತಿಸುವರು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮುಗಿಸುವಿರಿ. ಅನುಭವಿಸಬೇಕಾದ್ದನ್ನು ಅನುಭವಿಸಿಯೇ ತೀರಬೇಕು. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ಕುಟುಂಬದಲ್ಲಿ ಸಹಕಾರ ದೊರೆತರೂ ಸ್ವಲ್ಪ ಬುದ್ಧಿವಾದದ ಸಂವಾದ ಅಗತ್ಯ. ತಾಳ್ಮೆಯಲ್ಲಿ ಇಂದು ನೀವು ಉತ್ತೀರ್ಣರಾಗುವುದು ಕಷ್ಟ.

ಕುಂಭ ರಾಶಿ: ಆರ್ಥಿಕ‌ ಸಂಕಷ್ಟವನ್ನು ಎದುರಿಸುತ್ತಿದ್ದು ಸ್ಥಿರಾಸ್ತಿಯನ್ನು ಮಾರಾಟ ಮಾಡಲೂ ನಿಮಗೆ ಕಷ್ಟವಾದೀತು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಹೆಜ್ಜೆ ಇಡಬಹುದು. ಇಂದು ಏನಾದರೂ ಆಗುತ್ತದೆ ಎಂಬ ಅಪಾಯವು ಇರಲಿದೆ. ನಿಮ್ಮದೇ ವಚನವನ್ನು ಮುರಿಯಬೇಕಾದೀತು. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿದ್ದರೂ ಮಾರ್ಗದಲ್ಲಿ ಗೊಂದಲವೂ ಇರುವುದು.‌ ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ.

ಮೀನ ರಾಶಿ: ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಬಂಧುಗಳ ಆರೋಗ್ಯದ ಆರೈಕೆಯಲ್ಲಿ ನೀವು ತೊಡಗುವಿರಿ. ಅವಾಚ್ಯ ಮಾತುಗಳಿಂದ ನಿಂದನೆಗೆ ಒಳಗಾಗಬಹುದು.‌ ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳಲು ಭಯವಾಗಬಹುದು. ಹೊಸತನ್ನು ಕಲಿಯಲು ಹಿಂದೇಟು ಹಾಕುವುದಿಲ್ಲ. ನಿಮಗೆ ಸಿಕ್ಮಿದ್ದನ್ನು ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ.

-ಲೋಹಿತ್ ಹೆಬ್ಬಾರ್-8762924271 (what’s app only)

Published On - 1:05 am, Thu, 19 November 26

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ