ಸೂರ್ಯ-ಬುಧ ಸಂಚಾರ: ಇಂದಿನಿಂದ ಒಂದು ತಿಂಗಳು ಈ 2 ರಾಶಿಯವರಿಗೆ ಭರ್ಜರಿ ಅದೃಷ್ಟ, 4 ರಾಶಿಗಳಿಗೆ ಎಚ್ಚರಿಕೆ
ನವೆಂಬರ್ 17 ರಿಂದ ಸೂರ್ಯ ವೃಶ್ಚಿಕದಲ್ಲಿ ಸಂಚರಿಸಲಿದ್ದು, ಡಿಸೆಂಬರ್ 3 ರವರೆಗೆ ಬುಧ ತುಲಾದಲ್ಲಿ ಇರಲಿದ್ದಾನೆ. ಈ ಗ್ರಹ ಸಂಚಾರದಿಂದ 12 ರಾಶಿಗಳ ಮೇಲೆ ಆಗುವ ಪರಿಣಾಮಗಳನ್ನು ವಿವರಿಸಲಾಗಿದೆ. ಕನ್ಯಾ ಮತ್ತು ಮಕರ ರಾಶಿಗೆ ಶುಭವಾಗಿದ್ದು, ಮಿಥುನ, ಕುಂಭ ಇತ್ಯಾದಿ ರಾಶಿಗಳಿಗೆ ಮಿಶ್ರಫಲವಿದೆ. ಮೇಷ, ಸಿಂಹ ಇತ್ಯಾದಿ ರಾಶಿಗಳಿಗೆ ಅಶುಭ ಫಲವಿದೆ. ಅಶುಭ ಫಲವಿರುವವರಿಗೆ ಪರಿಹಾರಗಳನ್ನೂ ಸೂಚಿಸಲಾಗಿದೆ.

ಸೂರ್ಯನು ಸುಮಾರು ನವೆಂಬರ್ 17ರಿಂದ ಒಂದು ತಿಂಗಳ ಕಾಲ ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಬುಧನು ತುಲಾದಲ್ಲಿರುವ ಪ್ರಭಾವವೂ ಸೇರುತ್ತದೆ. ಡಿಸೆಂಬರ್ 3 ರವರೆಗೆ ಬುಧನು ತುಲಾದಲ್ಲಿ ಇರುವನು. ಎರಡೂ ಗ್ರಹರೂ ಸಾಮಾನ್ಯವಾಗಿ ಒಟ್ಟಿಗೆ ಸಂಚಾರ ಮಾಡುತ್ತವೆ. ರವಿಯೂ ನೀಚ ಸ್ಥಾನದಿಂದ ಹೊರಬಂದು ಬಲಿಷ್ಠನಾಗುವನು. ಈ ಎರಡು ಗ್ರಹರ ಫಲಗಳು ಹೀಗಿವೆ.
ಕನ್ಯಾ, ಮಕರ ರಾಶಿಯವರಿಗೆ ಶುಭ.
ಕನ್ಯಾ: ಸೂರ್ಯ ಮೂರನೆಯಲ್ಲಿ, ಬುಧ ಎರಡನೆಯಲ್ಲಿ. ಧೈರ್ಯ, ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಧನಾಗಮನ ಮತ್ತು ಮಾತಿನಿಂದ ಲಾಭವಿದೆ. ಒಡಹುಟ್ಟಿದವರ ಸಹಕಾರ ದೊರೆಯುತ್ತದೆ.
ಮಕರ: ಸೂರ್ಯ ಹನ್ನೊಂದರಲ್ಲಿ, ಬುಧ ಹತ್ತರಲ್ಲಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ, ಆದಾಯ ವೃದ್ಧಿ, ಹಿರಿಯರಿಂದ ಮನ್ನಣೆ ಸಿಗುತ್ತದೆ.
ಮಿಥುನ, ಕುಂಭ, ವೃಷಭ, ಕರ್ಕಾಟಕ, ಧನು, ಮೀನ ರಾಶಿಗಳಿಗೆ ಮಿಶ್ರಫಲ ಮಿಥುನ: ಸೂರ್ಯ ಆರರಲ್ಲಿ ಶುಭ, ಬುಧ ಐದರಲ್ಲಿ ಅಶುಭ. ಶತ್ರುಗಳ ಮೇಲೆ ಜಯ ಮತ್ತು ಆರೋಗ್ಯ ಸುಧಾರಣೆ ಇದೆ. ಆದರೆ ಮಕ್ಕಳ ವಿಷಯದಲ್ಲಿ ಮತ್ತು ವಿದ್ಯಾಭ್ಯಾಸದಲ್ಲಿ ಚಿಂತೆ ಇರಬಹುದು.
ಕುಂಭ: ಸೂರ್ಯ ಹತ್ತರಲ್ಲಿ ಶುಭ, ಬುಧ ಒಂಬತ್ತರಲ್ಲಿ ಅಶುಭ. ವೃತ್ತಿಯಲ್ಲಿ ಉನ್ನತಿ ಇದೆ, ಆದರೆ ಭಾಗ್ಯದಲ್ಲಿ ಅಡೆತಡೆ ಮತ್ತು ಪ್ರಯಾಣದಲ್ಲಿ ವಿಳಂಬ ಸಾಧ್ಯ.
ವೃಷಭ: ಸೂರ್ಯ ಏಳರಲ್ಲಿ ಅಶುಭ, ಬುಧ ಆರರಲ್ಲಿ ಶುಭ. ದಾಂಪತ್ಯ ಮತ್ತು ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು. ಆದರೆ ಸಾಲ, ಶತ್ರುಬಾಧೆಗಳಿಂದ ಮುಕ್ತಿ ಸಿಗುತ್ತದೆ.
ಕರ್ಕಾಟಕ: ಸೂರ್ಯ ಐದರಲ್ಲಿ ಅಶುಭ, ಬುಧ ನಾಲ್ಕರಲ್ಲಿ ಶುಭ. ಮಕ್ಕಳ ಬಗ್ಗೆ ಮತ್ತು ಮನಸ್ಸಿನ ಅಶಾಂತಿ ಇರುತ್ತದೆ. ಮನೆ, ವಾಹನ ಹಾಗೂ ಸುಖ ಸೌಕರ್ಯ ಲಾಭವಿದೆ.
ಧನು: ಸೂರ್ಯ ಹನ್ನೆರಡರಲ್ಲಿ ಅಶುಭ, ಬುಧ ಹನ್ನೊಂದರಲ್ಲಿ ಶುಭ. ಖರ್ಚು ಹೆಚ್ಚಾಗುತ್ತದೆ, ನಿದ್ರಾಭಂಗ ಸಾಧ್ಯ. ಆದರೂ ಆದಾಯ ಮತ್ತು ಸ್ನೇಹಿತರ ಸಹಕಾರದಿಂದ ಸಮತೋಲನ ಇರುತ್ತದೆ.
ಮೀನ: ಸೂರ್ಯ ಒಂಬತ್ತರಲ್ಲಿ ಅಶುಭ, ಬುಧ ಎಂಟರಲ್ಲಿ ಶುಭ. ತಂದೆ ಅಥವಾ ಹಿರಿಯರ ವಿಷಯದಲ್ಲಿ ಜಾಗ್ರತೆ ಬೇಕು. ಅನಿರೀಕ್ಷಿತ ಧನಲಾಭದ ಸೂಚನೆ ಇದೆ.
ಇದನ್ನೂ ಓದಿ: ಜಾತಕದಲ್ಲಿ ಶುಕ್ರ ದೋಷವಿದೆಯೇ? ಈ ಲಕ್ಷಣಗಳಿದ್ದರೆ ಎಚ್ಚರ, ಇಲ್ಲಿದೆ ಸರಳ ಪರಿಹಾರ!
ಮೇಷ, ಸಿಂಹ, ತುಲಾ, ವೃಶ್ಚಿಕ ಅಶುಭ.
ಮೇಷ: ಸೂರ್ಯ ಎಂಟರಲ್ಲಿ, ಬುಧ ಏಳರಲ್ಲಿ. ಆರೋಗ್ಯದಲ್ಲಿ ಏರುಪೇರು, ಉಷ್ಣದ ತೊಂದರೆ ಬರಬಹುದು. ವ್ಯವಹಾರದಲ್ಲಿ ಆತುರ ಬೇಡ.
ಸಿಂಹ: ಸೂರ್ಯ ನಾಲ್ಕರಲ್ಲಿ, ಬುಧ ಮೂರರಲ್ಲಿ. ಮನೆಯಲ್ಲಿ ಅಶಾಂತಿ, ತಾಯಿಯ ಆರೋಗ್ಯದ ಬಗ್ಗೆ ಗಮನ ಬೇಕು. ಮಾತಿನಲ್ಲಿ ಸಂಯಮ ಅಗತ್ಯ.
ತುಲಾ: ಸೂರ್ಯ ಎರಡರಲ್ಲಿ, ಬುಧ ಒಂದರಲ್ಲಿ. ಕುಟುಂಬದಲ್ಲಿ ಮಾತಿನ ಜಗಳ, ಧನ ನಷ್ಟ, ಕಣ್ಣು ಅಥವಾ ಮುಖದ ತೊಂದರೆ ಸಾಧ್ಯ.
ವೃಶ್ಚಿಕ : ಸೂರ್ಯ ಒಂದರಲ್ಲಿ, ಬುಧ ಹನ್ನೆರಡರಲ್ಲಿ. ದೇಹಾಯಾಸ, ಖರ್ಚು ಹೆಚ್ಚು, ಆತ್ಮವಿಶ್ವಾಸದ ಕೊರತೆ ಕಾಣಬಹುದು.
ಅಶುಭ ಮತ್ತು ಮಿಶ್ರಫಲ ರಾಶಿಯವರು ಪ್ರತಿದಿನ ಪ್ರಾತಃಕಾಲದಲ್ಲಿ ಆದಿತ್ಯ ಹೃದಯ ಅಥವಾ ಪಾರಾಯಣ ಮಾಡುವುದು ಬುಧವಾರ ವಿಷ್ಣು ಸಹಸ್ರನಾಮ ಪಾರಾಯಣ, ಹಸಿರು ಹೆಸರುಕಾಳು ದಾನ ಶುಭ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




