AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೌದು ನಾನು ದತ್ತುಪುತ್ರ, ಏನಿವಾಗ?: ಸೋನಿಯಾ ಪುಸ್ತಕ ಓದಿದರೆ ಕ್ಷೇತ್ರದ ಅಭಿವೃದ್ಧಿ ಕಾಣಲ್ಲ; ಕಾಂಗ್ರೆಸ್ ನಾಯಕರಿಗೆ ಯದುವೀರ್ ಖಡಕ್ ತಿರುಗೇಟು

“ಹೌದು ನಾನು ದತ್ತುಪುತ್ರ, ಏನಿವಾಗ?”: ಸೋನಿಯಾ ಪುಸ್ತಕ ಓದಿದರೆ ಕ್ಷೇತ್ರದ ಅಭಿವೃದ್ಧಿ ಕಾಣಲ್ಲ; ಕಾಂಗ್ರೆಸ್ ನಾಯಕರಿಗೆ ಯದುವೀರ್ ಖಡಕ್ ತಿರುಗೇಟು

ರಾಮ್​, ಮೈಸೂರು
| Edited By: |

Updated on: Nov 17, 2026 | 1:34 PM

Share

ಸೋನಿಯಾ ಗಾಂಧಿ ಆತ್ಮಚರಿತ್ರೆ ಹಾಗೂ ದತ್ತುಪುತ್ರ ಕುರಿತ ಕಾಂಗ್ರೆಸ್ ಟೀಕೆಗಳಿಗೆ ಸಂಸದ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ. ದತ್ತು ಪುತ್ರ ಎನ್ನುವುದು ವಾಸ್ತವ. ಆದರೆ, ಭಾರತೀಯ ಸಂವಿಧಾನದಡಿ ಎಲ್ಲರೂ ಪ್ರಜೆಗಳೇ, ಯಾರಿಗೂ ವಿಶೇಷ ಸ್ಥಾನಮಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಟೀಕೆ ಬಿಟ್ಟು, ರಾಜಕಾರಣದಲ್ಲಿ ವಿಷಯಾಧಾರಿತ ಚರ್ಚೆ ಇರಬೇಕು ಎಂದು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ನಾಯಕರು ಸರಿಯಾದ ಮಾಹಿತಿ ಪಡೆಯಲು ಸುದ್ದಿ ವಾಹಿನಿಗಳನ್ನು ವೀಕ್ಷಿಸಬೇಕು ಎಂದಿದ್ದಾರೆ.

ಮೈಸೂರು, ನ.17:  ಸಂಸದ ಯದುವೀರ್ ಒಡೆಯರ್ ಅವರು ತಮ್ಮ ದತ್ತು ವಂಶದ ಕುರಿತು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ. “ನಾನು ದತ್ತುಪುತ್ರ ಎನ್ನುವುದು ವಾಸ್ತವ. ಆದರೆ, ಭಾರತೀಯ ಸಂವಿಧಾನದ ಅಡಿಯಲ್ಲಿ ಎಲ್ಲರೂ ಪ್ರಜೆಗಳೇ. ಯಾರಿಗೂ ವಿಶೇಷ ಸ್ಥಾನವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜಕೀಯದಲ್ಲಿ ವೈಯಕ್ತಿಕ ಟೀಕೆಗಳಿಗೆ ಮಹತ್ವ ನೀಡಬಾರದು ಎಂದು ಯದುವೀರ್ ಪ್ರತಿಪಾದಿಸಿದ್ದಾರೆ. “ರಾಜ್ಯದ ಜನತೆ ಹಾಗೂ ನಮ್ಮ ಕ್ಷೇತ್ರದ ಜನತೆ ರಾಜಕಾರಣದಲ್ಲಿ ಸುಧಾರಣೆ ನಿರೀಕ್ಷಿಸುತ್ತಿದ್ದಾರೆ. ನಾವೆಲ್ಲರೂ ವಿಚಾರ, ಸಮಸ್ಯೆ, ನೀತಿ ಅಥವಾ ನಿಯಮಗಳ ಆಧಾರದ ಮೇಲೆ ಚರ್ಚಿಸಬೇಕು,” ಎಂದು ಅವರು ಕರೆ ನೀಡಿದ್ದಾರೆ. ವೈಯಕ್ತಿಕ ದಾಳಿಯಿಂದ ಯಾವುದೇ ಲಾಭವಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರು ತಾವು ಸಂಸದರಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್, “ಸೋನಿಯಾ ಗಾಂಧಿ ಅವರ ಪುಸ್ತಕ ಅಥವಾ ಕಾಂಗ್ರೆಸ್ ಪತ್ರಿಕೆಗಳನ್ನು ಓದಿದರೆ ಅವರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಅವರು ಸುದ್ದಿ ವಾಹಿನಿಗಳನ್ನು ವೀಕ್ಷಿಸಬೇಕು,” ಎಂದು ವ್ಯಂಗ್ಯವಾಡಿದರು. ಈ ಮೂಲಕ ಅವರು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಬುದ್ಧಿವಾದ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More