ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ತನಿಖೆಗಾಗಿ ಎಸ್ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಪಾಂಗಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಸಂಬಂಧ ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಢ್ ಮೆಡಿಕಲ್ ಬೋರ್ಡ್ ರಚಿಸಿದ್ದಾರೆ. ಎಫ್‌ಎಸ್‌ಎಲ್ ವೈದ್ಯರ ತಂಡವು ಶವ ಪತ್ತೆಯಾದ ಮಣ್ಣಸಂಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಸೌಜನ್ಯ ಕೊಲೆಯಾಗಿದ್ದು ಇದೇ ಜಾಗದಲ್ಲ? ಅಥವಾ ಬೇರೆ ಕಡೆನಾ ಅನ್ನೋದನ್ನು ಪತ್ತೆಹಚ್ಚಲಿದೆ ಎನ್ನಲಾಗಿದೆ.
ಮಂಗಳೂರು, ನವೆಂಬರ್ 17: ಪಾಂಗಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತನಿಖೆ ಸಂಬಂಧ SIT ಮುಖ್ಯಸ್ಥ ಚೇತನ್ ಸಿಂಗ್ ರಾಥೋಢ್ ಮೆಡಿಕಲ್ ಬೋರ್ಡ್ ರಚನೆ ಮಾಡಿದ್ದಾರೆ. FSL ವೈದ್ಯರ ಈ ತಂಡದಲ್ಲಿ ಬೆಂಗಳೂರಿನ ಒಬ್ಬ, ಹಾವೇರಿ, ಬೆಳಗಾವಿಯ ಒಬ್ಬೊಬ್ಬ ವೈದ್ಯರು ಇದ್ದಾರೆ. ಈ ಪೈಕಿ ಓರ್ವ ಮಹಿಳಾ ವೈದ್ಯೆಯಾಗಿದ್ದಾರೆ. ಮೆಡಿಕಲ್ ಬೋರ್ಡ್ ಸೌಜನ್ಯ ಶವ ಸಿಕ್ಕ ನೇತ್ರಾವತಿ ಸ್ನಾನಘಟ್ಟ ಬಳಿ ಇರುವ ಮಣ್ಣಸಂಕದಲ್ಲಿನ ಜಾಗಕ್ಕೆ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದೆ. ಸೌಜನ್ಯ ಕೊಲೆಯಾಗಿದ್ದು ಇದೇ ಜಾಗದಲ್ಲ? ಅಥವಾ ಬೇರೆ ಕಡೆನಾ ಅನ್ನೋದನ್ನು ಪತ್ತೆಹಚ್ಚಲಿದೆ. ಶವಸಿಕ್ಕಾಗಿನ ಫೋಟೋ, ವಿಡಿಯೋ ನೋಡಿ ತನಿಖೆ ನಡೆಸಲಿರುವ ಟೀಂ, ಬಳಿಕ ಎಸ್ಐಟಿಗೆ ವರದಿ ನೀಡಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

