ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷ
ಹಾಸನದಲ್ಲಿ ಕಾಡಾನೆ ದಾಳಿಗೆ ಸರಣಿ ಸಾವು ಸಂಭವಿಸುತ್ತಿರುವ ನಡುವೆಯೇ ಬೇಲೂರು ತಾಲೂಕಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ಇದರಿಂದ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರಲ್ಲಿ ತೀವ್ರ ಆತಂಕ ಎದುರಾಗಿದೆ. ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಗಜಪಡೆ ರಸ್ತೆ ದಾಟಿ ಹೋಗಿರುವ ದೃಶ್ಯವನ್ನು ವಾಹನ ಸವಾರರು ಸೆರೆ ಹಿಡಿದ್ದಾರೆ.
ಹಾಸನ, ನವೆಂಬರ್ 17: ಕಾಡಾನೆ ದಾಳಿಗೆ ಹಾಸನದಲ್ಲಿ ಸರಣಿ ಸಾವಿನ ನಡುವೆಯೇ ಬೇಲೂರು ತಾಲೂಕಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಗಜಪಡೆ ರಸ್ತೆ ದಾಟಿ ಹೋಗಿರುವ ದೃಶ್ಯವನ್ನು ವಾಹನ ಸವಾರರು ಸೆರೆ ಹಿಡಿದ್ದಾರೆ. ಬೇಲೂರು ಭಾಗದಲ್ಲಿ60ಕ್ಕೂ ಹೆಚ್ಚು ಕಾಡಾನೆಗಳು ಸಂಚಾರ ನಡೆಸುತ್ತಿದ್ದು, ಮೂರು ದಿನಗಳ ಅಂತದರದಲ್ಲಿ ಇಬ್ಬರ ಸಾವಿನಿಂದ ರೈತರು, ಕಾಫಿ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಅಲರ್ಟ್ ಆಗಿದ್ದು, ಅಗತ್ಯ ಮುಂಜಾಗೃತೆ ವಹಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

