‘ನಿನ್ನನ್ನು ಹೊಡೆದು ಸಾಯಿಸುತ್ತೇನೆ’: ಸೌಂದರ್ಯಾ ಮೇಲೆ ಗಾನವಿ ಉಗ್ರ ಸ್ವರೂಪ
ಗಾನವಿ ಅವರು ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಎಲ್ಲರ ಜೊತೆಗೂ ಜಗಳ ಮಾಡಿಕೊಂಡಿದ್ದಾರೆ. ಈಗ ಸೌಂದರ್ಯಾ ಶೆಟ್ಟಿ ಮೇಲೆ ಅವರು ತಿರುಗಿ ಬಿದ್ದಿದ್ದಾರೆ. ಮಾತಿನ ಭರದಲ್ಲಿ ವೈಯಕ್ತಿಕ ವಿಷಯಗಳನ್ನು ಎಳೆದು ತರಲಾಗಿದೆ. ಇದರಿಂದಾಗಿ ಗಾನವಿ ಅವರು ಸೌಂದರ್ಯಾ ಶೆಟ್ಟಿ ಮೇಲೆ ಉಗ್ರ ಸ್ವರೂಪ ತಾಳಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈಗ ಉಳಿದುಕೊಂಡಿರುವುದು ಮೂವರು ಮಹಿಳಾ ಸ್ಪರ್ಧಿಗಳು ಮಾತ್ರ. ಆಸಿಯಾ, ಸೌಂದರ್ಯಾ ಶೆಟ್ಟಿ ಮತ್ತು ಗಾನವಿ ಅವರು ಉಳಿದುಕೊಂಡಿದ್ದಾರೆ. ಈ ಮೂವರ ನಡುವೆ ಭಾರಿ ಪೈಪೋಟಿ ಇದೆ. ಟಾಸ್ಕ್ ನಡುವೆ ದೊಡ್ಡ ದೊಡ್ಡ ಜಗಳ ಆಗುತ್ತಿದೆ. ನವೆಂಬರ್ 18ರ ಸಂಚಿಕೆಯಲ್ಲಿ ಸೌಂದರ್ಯಾ ಶೆಟ್ಟಿ ಮತ್ತು ಗಾನವಿ ನಡುವೆ ಮಾತಿನ ಚಕಮಕಿ ನಡೆದಿದೆ. ಸೌಂದರ್ಯಾ ಶೆಟ್ಟಿ ಅವರು ತುಂಬಾ ಖಾರದ ಮಾತುಗಳಿಂದ ಟೀಕಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಗಳ ಇನ್ನಷ್ಟು ಜೋರಾಗುವ ಸಾಧ್ಯತೆ ಇದೆ.
ಗಾನವಿ ಅವರು ಆರಂಭದಿಂದಲೂ ಅನೇಕರ ಜೊತೆ ಮಾತಿಗೆ ಮಾತು ಬೆಳೆಸುತ್ತಿದ್ದಾರೆ. ಬಹುತೇಕ ಎಲ್ಲರ ಜೊತೆಗೂ ಅವರು ಜಗಳ ಮಾಡಿಕೊಂಡಿದ್ದಾರೆ. ಈ ಮೊದಲು ಗಗನ್ ಚಿನ್ನಪ್ಪ ಜೊತೆ ಅವರಿಗೆ ತೀವ್ರ ಮಟ್ಟದಲ್ಲಿ ಜಗಳ ಆಗಿತ್ತು. ಇತ್ತೀಚಿನ ಸಂಚಿಕೆಯಲ್ಲಿ ಜಗದೀಶ್ ಜೊತೆಗೂ ಕಿರಿಕ್ ಮಾಡಿಕೊಂಡಿದ್ದರು. ಈಗ ಅವರು ಸೌಂದರ್ಯಾ ಜೊತೆ ಜಗಳಕ್ಕೆ ಇಳಿದಿದ್ದಾರೆ.
ಬಿಗ್ ಬಾಸ್ ಆಟದಲ್ಲಿ ಈಗ 73 ದಿನಗಳು ಕಳೆದಿವೆ. ವಾರದಿಂದ ವಾರಕ್ಕೆ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತಿದೆ. ಮಂಜ ಅವರು ಎರಡನೇ ಚಾನ್ಸ್ ಪಡೆದು ಬಿಗ್ ಬಾಸ್ ಮನೆಯ ಒಳಗೆ ಬಂದಿದ್ದಾರೆ. ಮಂಜನ ಜೊತೆ ಗಾನವಿ ಅವರು ಹೆಚ್ಚು ಆಪ್ತವಾಗಿದ್ದಾರೆ. ಅದರಿಂದಾಗಿ ಆಟದ ಮೇಲೆ ಕೆಲವೊಮ್ಮೆ ಪರಿಣಾಮ ಬೀರುತ್ತಿದೆ. ಅಲ್ಲದೇ ಜಗಳಕ್ಕೂ ಕಾರಣ ಆಗುತ್ತಿದೆ.
‘ಮೊದಲು ಕನ್ನಡ ಸರಿಯಾಗಿ ಕಲಿ. ಮುಂಬೈಗೆ ಕಳಿಸುತ್ತೇನೆ. ಬೇರೆ ಶೋನಲ್ಲಿ ಹೊಡೆಸಿಕೊಂಡು ಬಂದಿದ್ದೀಯ. ಶೋಗೋಸ್ಕರ ಒಂದು ಸಂಬಂಧ ಬೆಳೆಸಿದ್ದೀಯ’ ಎಂದು ಸೌಂದರ್ಯಾ ಮೇಲೆ ಗಾನವಿ ಕೂಗಾಡಿದರು. ಇದರಿಂದ ಸೌಂದರ್ಯಾ ಕೋಪ ಹೆಚ್ಚಾಯಿತು. ‘8 ವರ್ಷದಿಂದ ಒಂದು ರಿಲೇಷನ್ಶಿಪ್ ಇಟ್ಟುಕೊಂಡು, ಇಲ್ಲಿ ಗುಳುಗುಳು ಮಾಡೋದರ ಬಗ್ಗೆ ನಾನು ಹೇಳಬೇಕಾ’ ಎಂದು ಗಾನವಿಗೆ ಸೌಂದರ್ಯಾ ಅವರು ತಿರುಗೇಟು ನೀಡಿದರು.
ಇದನ್ನೂ ಓದಿ: ‘ಗಾನವಿ ನನ್ನ ತಲೆ ಮೇಲೆ ಕಾಲು ಇಟ್ಟಿದ್ದಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ
ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಯುದ್ಧ ನಡೆಯಿತು. ‘ನನ್ನ ಪರ್ಸನಲ್ ವಿಷಯಕ್ಕೆ ಬಂದರೆ ನಾನು ಸುಮ್ಮನೆ ಇರಲ್ಲ. ನಿನ್ನನ್ನು ಹೊಡೆದು ಸಾಯಿಸುತ್ತೇನೆ’ ಎಂದು ಗಾನವಿ ಅವರು ಉಗ್ರ ಸ್ವರೂಪ ತಾಳಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಆಗಿದೆ. ವಾರಾಂತ್ಯದ ಸಂಚಿಕೆಯಲ್ಲಿ ಈ ಬಗ್ಗೆ ಖಂಡಿತವಾಗಿಯೂ ಚರ್ಚೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




