AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ

ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ

ಮದನ್​ ಕುಮಾರ್​
|

Updated on: Nov 13, 2026 | 7:05 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ರಾಜಕೀಯದ ಥೀಮ್​ನಲ್ಲಿ ಟಾಸ್ಕ್ ನೀಡಲಾಗುತ್ತಿದೆ. ಸ್ಪರ್ಧಿಗಳು ಎರಡು ಬಣಗಳಾಗಿ ಆಟ ಆಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿರುವ ಗಾನವಿ ಅವರ ನಡೆ-ನುಡಿ ಬೇರೆ ರೀತಿ ಇದೆ. ಅವರು ಸಾಕಷ್ಟು ಹೈಲೈಟ್ ಆಗುತ್ತಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ರಾಜಕೀಯದ ಥೀಮ್​ನಲ್ಲಿ ಟಾಸ್ಕ್ ನೀಡಲಾಗುತ್ತಿದೆ. ಸ್ಪರ್ಧಿಗಳು ಎರಡು ಬಣಗಳಾಗಿ ಆಟ ಆಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿರುವ ಗಾನವಿ ಅವರ ನಡೆ-ನುಡಿ ಬೇರೆ ರೀತಿ ಇದೆ. ಅವರು ಸಾಕಷ್ಟು ಹೈಲೈಟ್ ಆಗುತ್ತಿದ್ದಾರೆ. ತಾಂಡವ್ ರಾಮ್ ಅವರ ಪಕ್ಷವನ್ನು ಸೇರಲು ಗಾನವಿ ಒಪ್ಪಿಕೊಂಡಿಲ್ಲ. ‘ಕೋಟಿ ಕೊಟ್ಟರೂ ನಿಮ್ಮ ಪಕ್ಷಕ್ಕೆ ಬರಲ್ಲ. ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ’ ಎಂದು ಗಾನವಿ ಅವರು ನೇರವಾಗಿಯೇ ಹೇಳಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿರುವ ನವೆಂಬರ್ 13ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ. ಈ ವಾರ ಗಾನವಿ ಅವರ ಆಟದ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ. ಒಂದು ಟಾಸ್ಕ್ ಮುಗಿದ ಬಳಿಕ ಅವರು ಮೆಮೊರಿ ಲಾಸ್ ಆದವರಂತೆ ನಟಿಸಿದ್ದರು. ಅದನ್ನು ಸೌಂದರ್ಯಾ ಶೆಟ್ಟಿ, ಪ್ರಶಾಂತ್ ಮುಂತಾದವರು ಕಟುವಾಗಿ ಟೀಕಿಸಿದ್ದರು. ಈ ಎಲ್ಲ ವಿಷಯಗಳು ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆಗೆ ಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More