
Samantha
ಬಹುಭಾಷಾ ನಟಿ ಸಮಂತಾ ಋತ್ ಪ್ರಭು ಜನಿಸಿದ್ದು ತಮಿಳುನಾಡಿನ ಚೆನ್ನೈನಲ್ಲಿ 1987, ಏಪ್ರಿಲ್ 28ರಂದು. ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಹೊಂದಿರುವ ಸಮಂತಾ, ಕಾಲೇಜು ದಿನಗಳಲ್ಲಿ ಕಾರ್ಯಕ್ರಮ ನಿರೂಪಣೆ, ಮಾಡೆಲಿಂಗ್ ಮಾಡುತ್ತಿದ್ದರು. 2010ರಲ್ಲಿ ‘ಯೇ ಮಾಯ ಚೇಸಾವೆ’ ತೆಲುಗು ಸಿನಿಮಾ ಮೂಲಕ ನಾಯಕಿಯಾದರು. ಬಳಿಕ ಒಂದರ ಹಿಂದೊಂದು ತಮಿಳು, ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಾ ಸಾಗಿದ ಸಮಂತಾ, ತೆಲುಗು, ತಮಿಳಿನ ಹಲವು ಸ್ಟಾರ್ ನಟರಿಗೆ ನಾಯಕಿ ಆಗಿದ್ದಾರೆ. ಇತ್ತೀಚೆಗೆ ಹಿಂದಿ ಸಿನಿಮಾ, ವೆಬ್ ಸರಣಿಗಳಲ್ಲಿಯೂ ನಟಿಸುತ್ತಿದ್ದಾರೆ. 2017ರಲ್ಲಿ ನಟ ಅಕ್ಕಿನೇನಿ ನಾಗ ಚೈತನ್ಯ ಜೊತೆ ವಿವಾಹವಾದ ಸಮಂತಾ 2021ರಲ್ಲಿ ವಿಚ್ಛೇದನ ಪಡೆದುಕೊಂಡರು.
‘ಕರ್ಮ ಎಲ್ಲವನ್ನೂ ಸರಿ ಮಾಡುತ್ತದೆ’; ಸಮಂತಾ ಜೊತೆ ಡೇಟ್ ಮಾಡ್ತಿರೋ ಪತಿಗೆ ತಿವಿದ್ರಾ ರಾಜ್ ಪತ್ನಿ?
ಸಮಂತಾ ಅವರು 'ದಿ ಫ್ಯಾಮಿಲಿ ಮ್ಯಾನ್' ನಿರ್ದೇಶಕ ರಾಜ್ ನಿದಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿವೆ. ರಾಜ್ ಅವರು ಈಗಾಗಲೇ ವಿವಾಹಿತರಾಗಿದ್ದಾರೆ. ಅವರ ಪತ್ನಿ ಶ್ಯಾಮಲಿ ಅವರ ಕರ್ಮದ ಬಗ್ಗೆ ಮಾಡಿದ ನಿಗೂಢ ಪೋಸ್ಟ್ಗಳು ಈ ವದಂತಿಗಳಿಗೆ ಇಂಬು ನೀಡಿದೆ.
- Rajesh Duggumane
- Updated on: Jun 2, 2025
- 7:37 am
ಸಮಂತಾ ಹಾಗೂ ರಾಜ್ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
ಸಮಂತಾ ಮತ್ತು ನಿರ್ದೇಶಕ ರಾಜ್ ನಿಧಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಅವರ ನಡುವಿನ ವಯಸ್ಸಿನ ಅಂತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಮಂತಾ ಇತ್ತೀಚೆಗೆ ರಾಜ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ.
- Rajesh Duggumane
- Updated on: May 16, 2025
- 8:39 am
ಸಮಂತಾ ಹೊಸ ಪ್ರಿಯಕರನ ಪತ್ನಿಯ ಮಧ್ಯ ಪ್ರವೇಶ; ವೈರಲ್ ಫೋಟೋಗೆ ಕುಹಕ
ನಿರ್ದೇಶಕ ರಾಜ್ ನಿಧಿಮೋರು ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಇಬ್ಬರ ಫೋಟೋ ವೈರಲ್ ಆದ ಬೆನ್ನಲ್ಲೇ ರಾಜ್ ಪತ್ನಿ ಶ್ಯಾಮಲಿ ಸೂಚ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರ ಹೆಸರನ್ನೂ ಅವರು ಪ್ರಸ್ತಾಪಿಸಿಲ್ಲವಾದರೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರು ಪೋಸ್ಟ್ ಮಾಡಿದ್ದಾರೆ ಎಂಬ ಗುಮಾನಿ ಮೂಡಿದೆ.
- Madan Kumar
- Updated on: May 15, 2025
- 7:37 pm
500 ಜನರ ಎದುರು ನಡುಗುತ್ತಾ ನಿಂತಿದ್ದ ಸಮಂತಾ ರುತ್ ಪ್ರಭು; ಕಾರಣ ಏನು?
ತಾವು ಹಾಟ್ ಆಗಿ ಕಾಣಬಹುದು ಎಂದು ಸಮಂತಾ ರುತ್ ಪ್ರಭು ಅಂದುಕೊಂಡಿರಲಿಲ್ಲ. ಹಾಗಾಗಿ ಅವರಿಗೆ ಶೂಟಿಂಗ್ ದಿನ ನರ್ವಸ್ ಆಗಿತ್ತು. ಆ ಘಟನೆಯನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ. ‘ಉ ಅಂಟಾವಾ ಮಾವ..’ ಹಾಡಿನ ಶೂಟಿಂಗ್ ದಿನ ಏನಾಗಿತ್ತು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ.
- Madan Kumar
- Updated on: May 11, 2025
- 9:43 am
ರಾಜ್ ನಿಧಿಮೋರು ಜತೆ ಸಮಂತಾ ಲವ್ ಖಚಿತ? ಫೋಟೋಗಳೇ ಹೇಳುತ್ತಿವೆ ಉತ್ತರ
ನಿರ್ದೇಶಕ ರಾಜ್ ನಿಧಿಮೋರು ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಡೇಟಿಂಗ್ ಮಾಡುತ್ತಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಪದೇ ಪದೇ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸಮಂತಾ ಹಂಚಿಕೊಂಡ ಕೆಲವು ಫೋಟೋಗಳಲ್ಲಿ ರಾಜ್ ಕೂಡ ಇದ್ದಾರೆ. ಇದರಿಂದ ಅಭಿಮಾನಿಗಳಿಗೆ ಉತ್ತರ ಸಿಕ್ಕಂತೆ ಆಗಿದೆ.
- Madan Kumar
- Updated on: May 7, 2025
- 9:28 pm
‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ
ಸಮಂತಾ ಅವರು ತಮ್ಮ ನಿರ್ಮಾಣ ಸಂಸ್ಥೆ ತ್ರಲಾಲಾ ಪ್ರೊಡಕ್ಷನ್ಸ್ ಮೂಲಕ 'ಶುಭಂ' ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ಎಲ್ಲಾ ಕಲಾವಿದರಿಗೂ ಸಮಾನ ಸಂಭಾವನೆ ನೀಡುವುದರ ಮೇಲೆ ಒತ್ತು ನೀಡುತ್ತಿದ್ದಾರೆ. ಸ್ಟಾರ್ ನಟ-ನಟಿಯರಿಗೆ ಹೆಚ್ಚಿನ ಸಂಭಾವನೆ ನೀಡುವುದನ್ನು ವಿರೋಧಿಸುವ ಸಮಂತಾ, ಈ ನಿರ್ಧಾರದಿಂದ ಚಿತ್ರರಂಗದಲ್ಲಿ ಒಂದು ಹೊಸ ಆದರ್ಶವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
- Rajesh Duggumane
- Updated on: May 7, 2025
- 7:33 am
ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ; ಅನಾಥ ಮಕ್ಕಳಿಗೆ ಅನ್ನ ಸಂತರ್ಪಣೆ
ಸಮಂತಾ ರುತ್ ಪ್ರಭು ಅವರಿಗಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಅದರ ವಿಡಿಯೋ ವೈರಲ್ ಆಗಿದೆ. ಸಮಂತಾ ಅವರ 38ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇದೇ ದೇವಸ್ಥಾನದಲ್ಲಿ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ತೆನಾಲಿ ಸಂದೀಪ್ ಎಂಬ ಅಭಿಮಾನಿಯು ಆಂಧ್ರ ಪ್ರದೇಶದಲ್ಲಿ ಸಮಂತಾ ಅವರ ದೇವಾಲಯ ನಿರ್ಮಾಣ ಮಾಡಿದ್ದಾರೆ.
- Madan Kumar
- Updated on: Apr 29, 2025
- 8:59 pm
ಸಮಂತಾ ಜನ್ಮದಿನ: ನಟಿಯ ವರ್ಷದ ಗಳಿಕೆ, ಒಟ್ಟೂ ಆಸ್ತಿ ಎಷ್ಟು?
Samantha Birthday: ಸಮಂತಾ ಅವರ 38ನೇ ಜನ್ಮದಿನದಂದು, ಅವರ ಒಟ್ಟು ಆಸ್ತಿ, ವಾರ್ಷಿಕ ಗಳಿಕೆ ಮತ್ತು ಯಶಸ್ವಿ ವೃತ್ತಿ ಜೀವನದ ಬಗ್ಗೆ ತಿಳಿದುಕೊಳ್ಳೋಣ. ಅವರು 101 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ ಮತ್ತು ಪ್ರತಿ ವರ್ಷ ಬ್ರ್ಯಾಂಡ್ ಪ್ರಚಾರದಿಂದ 8 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. 'ಯೇ ಮಾಯ ಚೇಸಾವೆ', 'ಓ ಬೇಬಿ' ಸಿನಿಮಾ, 'ದಿ ಫ್ಯಾಮಿಲಿ ಮ್ಯಾನ್ 2' ರೀತಿಯ ವೆಬ್ ಸರಣಿಗಳನ್ನು ನೀಡಿದ್ದಾರೆ.
- Shreelaxmi H
- Updated on: Apr 28, 2025
- 10:46 am
ಶುಭಂ ಟ್ರೇಲರ್: 9 ಗಂಟೆಗೆ ಬರುವ ಧಾರಾವಾಹಿ ನೋಡಿ ದೆವ್ವ ಆದ ಹೆಂಗಸರ ಕಥೆ
ಸಮಂತಾ ರುತ್ ಪ್ರಭು ಅವರು ‘ಶುಭಂ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಾರರ್-ಕಾಮಿಡಿ ಕಹಾನಿ ಇದೆ. ರಾತ್ರಿ 9 ಗಂಟೆಗೆ ಸೀರಿಯಲ್ ನೋಡುವ ಹೆಂಗಸರೆಲ್ಲ ದೆವ್ವ ಆಗುತ್ತಾರೆ. ಅದರಿಂದ ಗಂಡಸರಿಗೆ ಕಾಟ ಶುರುವಾಗುತ್ತದೆ. ಇಂಥ ಒಂದು ಡಿಫರೆಂಟ್ ಕಥೆಯಿರುವ ‘ಶುಭಂ’ ಸಿನಿಮಾದ ಟ್ರೇಲರ್ ಬಿಡುಗೆಯಾಗಿ ಸದ್ದು ಮಾಡುತ್ತಿದೆ.
- Madan Kumar
- Updated on: Apr 27, 2025
- 1:03 pm
ಹೊಸ ಬಾಯ್ಫ್ರೆಂಡ್ ಜೊತೆ ತಿರುಪತಿಗೆ ಬಂದು ಪೂಜೆ ಸಲ್ಲಿಸಿದ ಸಮಂತಾ
ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಸಮಂತಾ ರುತ್ ಪ್ರಭು ಬಂದಿದ್ದಾರೆ. ಅವರ ಜೊತೆ ರಾಜ್ ನಿಧಿಮೋರು ಕೂಡ ಸಾಥ್ ನೀಡಿದ್ದಾರೆ. ಇಬ್ಬರೂ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಸಮಂತಾ ಮತ್ತು ರಾಜ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಸಾಕಷ್ಟು ದಿನಗಳಿಂದ ಕೇಳಿಬರುತ್ತಿದೆ. ಅದಕ್ಕೆ ಈಗ ಸಾಕ್ಷಿ ಕೂಡ ಸಿಗುತ್ತಿದೆ.
- Madan Kumar
- Updated on: Apr 19, 2025
- 10:48 pm