ಹೆಮ್ಮೆಯಿಂದ ತಾಳಿ ಧರಿಸಿ ಓಡಾಡುತ್ತಿರುವ ನಟಿ ಸಮಂತಾ ರುತ್ ಪ್ರಭು
2ನೇ ಮದುವೆ ಆಗಿರುವ ಸಮಂತಾ ರುತ್ ಪ್ರಭು ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ ರಾಜ್ ನಿಡಿಮೋರು ಜೊತೆ ಅವರು ಪ್ರಯಾಣ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸಮಂತಾ ಅವರ ಕತ್ತಿನಲ್ಲಿ ಇರುವ ಮಂಗಳಸೂತ್ರ ಹೈಲೈಟ್ ಆಗಿದೆ. ವಿಡಿಯೋಗೆ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಈಗ ತುಂಬಾ ಖುಷಿಯಾಗಿದ್ದಾರೆ. ಇತ್ತೀಚೆಗೆ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಯಿತು. ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೊತೆ ಸಮಂತಾ ಅವರು ಕಳೆದ ವರ್ಷ ಡಿಸೆಂಬರ್ 1ರಂದು ಎರಡನೇ ಮದುವೆ ಆದರು. ಮದುವೆ ನಂತರ ಅವರ ಮುಖದಲ್ಲಿ ನಗು ಅರಳಿದೆ. ಪತಿ ರಾಜ್ ನಿಡಿಮೋರು ಜೊತೆ ಸಮಂತಾ ರುತ್ ಪ್ರಭು ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಅವರ ಕತ್ತಿನಲ್ಲಿ ಕಾಣಿಸಿದ ಮಂಗಳಸೂತ್ರ (Mangalsutra) ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಅನೇಕರು ಮದುವೆ ಆಗಿದ್ದರೂ ಮಂಗಳಸೂತ್ರ ಧರಿಸುವುದಿಲ್ಲ. ಆದರೆ ಸಮಂತಾ ಅವರು ಬಹಳ ಹೆಮ್ಮೆಯಿಂದ ತಾಳಿ ಧರಿಸಿದ್ದಾರೆ. ಬಹಳ ಸ್ಪಷ್ಟವಾಗಿ ಮಂಗಳಸೂತ್ರ ಕಾಣಿಸುವ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿದ್ದಾರೆ. ಇದನ್ನು ಫ್ಯಾನ್ಸ್ ಗಮನಿಸಿದ್ದಾರೆ. ಅಲ್ಲದೇ, ಸಮಂತಾ ಖುಷಿಯಾಗಿ ಕಾಲ ಕಳೆಯುತ್ತಿರುವುದನ್ನು ನೋಡಿ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ.
ರಾಜ್ ನಿಡಿಮೋರು ಅವರಿಗೆ ಕೂಡ ಇದು ಎರಡನೇ ಮದುವೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಅವರು ಈಗ ಸಮಂತಾ ಜೊತೆ ವೈವಾಹಿಕ ಜೀವನ ಆರಂಭಿಸಿದ್ದಾರೆ. ಸಮಂತಾ ಅವರು ಈ ಮೊದಲು ನಾಗ ಚೈತನ್ಯ ಜೊತೆ ಮದುವೆ ಆಗಿದ್ದರು. ಪರಸ್ಪರ ಪ್ರೀತಿಸಿ ಮದುವೆ ಆದ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ವಿಚ್ಛೇದನದಲ್ಲಿ ಆ ವಿವಾಹ ಅಂತ್ಯವಾಯ್ತು.
View this post on Instagram
‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರು ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದರು. ಆಗ ಅವರಿಬ್ಬರ ನಡುವೆ ಪ್ರೀತಿ ಚಿಗುರಿತು. ಆರಂಭದ ದಿನಗಳಲ್ಲಿ ಈ ಬಗ್ಗೆ ಅವರು ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಜಗಜ್ಜಾಹೀರು ಮಾಡಿದರು.
ಇದನ್ನೂ ಓದಿ: ಸಮಂತಾ ಮದುವೆ ಆದ ರಾಜ್ ನಿಡಿಮೋರು ಆಸ್ತಿ ಎಷ್ಟು ಕೋಟಿ?
ಸಿನಿಮಾ ಮತ್ತು ವೆಬ್ ಸೀರಿಸ್ ಕ್ಷೇತ್ರದಲ್ಲಿ ರಾಜ್ ನಿಡಿಮೋರು ಅವರಿಗೆ ಬಹಳ ಡಿಮ್ಯಾಂಡ್ ಇದೆ. ಅದೇ ರೀತಿ, ಸಮಂತಾ ಅವರು ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಆ್ಯಕ್ಟೀವ್ ಆಗಿದ್ದಾರೆ. ಸಮಂತಾ ನಿರ್ಮಾಣ ಮಾಡಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




