AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha and Raj’s Isha Wedding: ಲಿಂಗ ಭೈರವಿ ದೇವಾಲಯದಲ್ಲಿ ಸಮಂತಾ ಸರಳ ವಿವಾಹ; ಇಲ್ಲಿನ ಇಂಟರೆಸ್ಟಿಂಗ್​ ಸಂಗತಿ ಮತ್ತು ವಿವಾಹ ಪ್ರಕ್ರಿಯೆಯ ವಿವರ ಇಲ್ಲಿದೆ

ನಟಿ ಸಮಂತಾ ರುತ್ ಪ್ರಭು ನಿರ್ದೇಶಕ ರಾಜ್ ನಿಡಿಮೋರು ಜೊತೆ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಸ್ಥಾನದಲ್ಲಿ ನಿನ್ನೆ ಸರಳವಾಗಿ ವಿವಾಹವಾಗಿದ್ದಾರೆ. ಕೆಲವೇ ಆಪ್ತರ ಸಮ್ಮುಖದಲ್ಲಿ ನಡೆದ ಈ ವಿವಾಹದ ಚಿತ್ರಗಳನ್ನು ಸಮಂತಾ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಗುರು ಅವರ ಮಾರ್ಗದರ್ಶನದಲ್ಲಿರುವ ಈ ದೇವಸ್ಥಾನದಲ್ಲಿ, ದೇವಿಯ ಶಕ್ತಿ ರೂಪವನ್ನು ಆರಾಧಿಸಲಾಗುತ್ತದೆ. ಈ ಪವಿತ್ರ ಸ್ಥಳದಲ್ಲಿ ವಿವಾಹವಾಗುವುದು ಹೇಗೆ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

Samantha and Raj's Isha Wedding: ಲಿಂಗ ಭೈರವಿ ದೇವಾಲಯದಲ್ಲಿ ಸಮಂತಾ ಸರಳ ವಿವಾಹ; ಇಲ್ಲಿನ ಇಂಟರೆಸ್ಟಿಂಗ್​ ಸಂಗತಿ ಮತ್ತು ವಿವಾಹ ಪ್ರಕ್ರಿಯೆಯ ವಿವರ ಇಲ್ಲಿದೆ
ಲಿಂಗ ಭೈರವಿ ದೇವಾಲಯದಲ್ಲಿ ಸಮಂತಾ ವಿವಾಹ
ಅಕ್ಷತಾ ವರ್ಕಾಡಿ
|

Updated on:Dec 02, 2025 | 12:47 PM

Share

ನಟಿ ಸಮಂತಾ ರುತ್ ಪ್ರಭು ನಿರ್ದೇಶಕ ರಾಜ್ ನಿಡಿಮೋರು ಜೊತೆ ನಿನ್ನೆ (ಡಿಸೆಂಬರ್ 1) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೇ ಕೆಲವು ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದ್ದು, ಒಂದಷ್ಟು ಫೋಟೋಗಳನ್ನು ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್​​ನ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ಸಮಂತಾ, ರಾಜ್ ವಿವಾಹ ಬಹಳ ಸರಳವಾಗಿ ನಡೆದಿದೆ. ಸದ್ಯ ಇದೀಗ ಈ ವಿವಾಹದ ಕುರಿತು ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಲಿಂಗ ಭೈರವಿ ದೇವಿ ದೇವಸ್ಥಾನದ ಕುರಿತು ವಿವರ:

ಲಿಂಗ ಭೈರವಿ ದೇವಿ ದೇವಸ್ಥಾನವು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿದೆ. ಈ ದೇವಸ್ಥಾನವು ಸದ್ಗುರುಗಳ ಮಾರ್ಗದರ್ಶನದಲ್ಲಿ ಸ್ಥಾಪಿಸಲ್ಪಟ್ಟಿದ್ದು, ಇಲ್ಲಿ ದೇವಿಯ ಶಕ್ತಿಯ ರೂಪವನ್ನು ಆರಾಧಿಸಲಾಗುತ್ತದೆ. ಈ ದೇವಾಲಯದಲ್ಲಿ ಮಹಿಳಾ ಅರ್ಚಕರಿರುವುದು ಮತ್ತೊಂದು ವಿಶೇಷ. ಸಾಮಾನ್ಯವಾಗಿ ಲಿಂಗ ಎಂಬುದು ಪುರುಷ ದೇವರನ್ನು ಸೂಚಿಸುತ್ತದೆ, ಆದರೆ ಇಲ್ಲಿ ದೇವಿಯನ್ನು “ಲಿಂಗ” ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯವು  ಪ್ರತಿದಿನ ಬೆಳಗ್ಗೆ 6:30 – 1:20 ಮತ್ತು ಸಂಜೆ 4:20 ರಿಂದ ರಾತ್ರಿ 8:20 ರ ವರೆಗೆ ತೆರೆದಿರುತ್ತದೆ. ಪ್ರತಿದಿನ ಮೂರು ಬಾರಿ ದೇವಿಗೆ ಅಭಿಷೇಕ, ಆರತಿ ಇಲ್ಲಿ ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು.

ಲಿಂಗ ಭೈರವಿ ಯಾರು?

ಲಿಂಗ ಭೈರವಿ ದೈವಿಕ ಸ್ತ್ರೀತ್ವದ ಉಗ್ರ ಮತ್ತು ಕರುಣಾಳು ರೂಪ. ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳುವಂತೆ , ಈ ಎಂಟು ಅಡಿ ಶಕ್ತಿ ರೂಪವು ಬ್ರಹ್ಮಾಂಡದ ಸೃಜನಶೀಲ ಶಕ್ತಿಯನ್ನು ಸಾಕಾರಗೊಳಿಸುತ್ತದೆ, ದೇಹ, ಮನಸ್ಸು ಮತ್ತು ಶಕ್ತಿಯನ್ನು ಸ್ಥಿರಗೊಳಿಸುವ ಮೂಲಕ ಹುಟ್ಟಿನಿಂದ ಪರಮಾರ್ಥದವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ದೇವಿ ಭಕ್ತರನ್ನು ರಕ್ಷಿಸುತ್ತಾಳೆ.

ಇದನ್ನೂ ಓದಿ: ತುಂಬಾ ಸರಳವಾಗಿ ನಡೆಯಿತು ಸಮಂತಾ ಮದುವೆ: ಫೋಟೋ ಗ್ಯಾಲರಿ ನೋಡಿ..

ಈಶ ಯೋಗ ಕೇಂದ್ರದಲ್ಲಿ ಸರಳವಾಗಿ ಮದುವೆಯಾಗುವುದು ಹೇಗೆ?

  • ಲಿಂಗ ಭೈರವಿ ದೇವಸ್ಥಾನದಲ್ಲಿ ವಿವಾಹ ವಿಧಿವಿಧಾನವನ್ನು ಕಾಯ್ದಿರಿಸುವುದು ಸರಳ ಪ್ರಕ್ರಿಯೆ.
  • ಲಿಂಗ ಭೈರವಿ ತಂಡಕ್ಕೆ ಇಮೇಲ್ ಮಾಡಿ ವಿವಾಹವನ್ನು ನಿಗದಿಪಡಿಸಲು, info@lingabhairavi.org ಗೆ ಭೇಟಿ ನೀಡಬೇಕು.
  • ನಿಮ್ಮ ಇಮೇಲ್ ವಿಳಾಸದಲ್ಲಿ, ನಿಮ್ಮ ಮದುವೆಯಾಗಲು ಬಯಸುವ ದಿನಾಂಕ ಅಥವಾ ಸಮಯದ ಅವಧಿ ಮತ್ತು ನೀವು ನಿರ್ವಹಿಸಲು ಬಯಸುವ ವಿವಾಹ ಆಚರಣೆಯ ಪ್ರಕಾರವನ್ನು ಇಲ್ಲಿ ವಿವರಿಸುವುದು ಅಗತ್ಯ.
  • ನಿಮ್ಮ ಮೇಲ್​ ತಲುಪುತ್ತಿದ್ದಂತೆ ಲಿಂಗ ಭೈರವಿ ತಂಡ ಲಭ್ಯವಿರುವ ದಿನಾಂಕಗಳು, ಅವಶ್ಯಕತೆಗಳು ಮತ್ತು ತಯಾರಿ ಮಾರ್ಗಸೂಚಿಗಳೊಂದಿಗೆ ಪ್ರತಿಕ್ರಿಯಿಸುತ್ತದೆ.
  • ಇದಲ್ಲದೇ ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ವಿವಾಹಕ್ಕೆ, cottage.isha.in ನಲ್ಲಿ ವಸತಿಯನ್ನು ಕಾಯ್ದಿರಿಸಬೇಕು. ಆದ್ದರಿಂದ ಮುಂಗಡ ಬುಕಿಂಗ್ ಅತ್ಯಗತ್ಯ. ಕೇಂದ್ರದಲ್ಲಿ ತಂಗುವ ಅತಿಥಿಗಳಿಗೆ ಪ್ರತಿದಿನ ಆರೋಗ್ಯಕರ ಸಸ್ಯಾಹಾರಿ ಊಟ ದೊರೆಯಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Tue, 2 December 25