AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Donation: ದಾನ ಮಾಡುವುದು ಪುಣ್ಯದ ಕಾರ್ಯವಾಗಿದ್ದರೂ, ಈ ವಸ್ತುಗಳನ್ನು ತಪ್ಪಿಯೂ ನೀಡಬೇಡಿ

ದಾನ ಮಾಡುವುದು ಪುಣ್ಯಕಾರಕವಾದರೂ, ಕೆಲವು ವಸ್ತುಗಳನ್ನು ದಾನವಾಗಿ ನೀಡಬಾರದು ಎಂದು ಧರ್ಮಶಾಸ್ತ್ರ ಹೇಳುತ್ತದೆ. ಪ್ಲಾಸ್ಟಿಕ್ ವಸ್ತುಗಳು, ಬಳಸಿದ ಚಪ್ಪಲಿಗಳು, ಪೊರಕೆಗಳು, ಬಳಸಿದ ಎಣ್ಣೆ, ಹಳಸಿದ ಆಹಾರ, ಅರ್ಧಬಳಸಿದ ಸಾಬೂನು, ಕಾಸ್ಮೆಟಿಕ್ಸ್, ಕೊಳೆತ ಹಣ್ಣುಗಳನ್ನು ದಾನ ಮಾಡುವುದರಿಂದ ದಾರಿದ್ರ್ಯ ಮತ್ತು ಅಶುಭ ಫಲಗಳುಂಟಾಗಬಹುದು. ಇಂತಹ ವಸ್ತುಗಳ ಬದಲು ಹಣ ನೀಡುವುದು ಉತ್ತಮ.

Donation: ದಾನ ಮಾಡುವುದು ಪುಣ್ಯದ ಕಾರ್ಯವಾಗಿದ್ದರೂ, ಈ ವಸ್ತುಗಳನ್ನು ತಪ್ಪಿಯೂ ನೀಡಬೇಡಿ
ದಾನ ನೀಡುವುದು
ಅಕ್ಷತಾ ವರ್ಕಾಡಿ
|

Updated on:Dec 02, 2025 | 10:27 AM

Share

ದಾನವು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ದಾನ ಮಾಡುವುದು ಕರ್ಮಗಳನ್ನು ಕಳೆದುಕೊಳ್ಳುವ ಮತ್ತು ನಮ್ಮಲ್ಲಿರುವ ಸಂಪನ್ಮೂಲಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಒಂದು ಮಹಾನ್ ಕಾರ್ಯ. “ದಾನಂ ದಹತಿ ಪಾಪಂ” ಎಂಬ ಮಾತು ದಾನದ ಶಕ್ತಿಯನ್ನು ಸಾರುತ್ತದೆ, ಅಂದರೆ ದಾನವು ಪಾಪಗಳನ್ನು ನಾಶಪಡಿಸುತ್ತದೆ. ಆದರೆ, ಎಲ್ಲಾ ರೀತಿಯ ದಾನಗಳು ಶುಭವಲ್ಲ. ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಧನಾತ್ಮಕ ಫಲಕ್ಕಿಂತ ನಕಾರಾತ್ಮಕ ಫಲಗಳೇ ಹೆಚ್ಚಾಗಬಹುದು ಎಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ಯಾವ ವಸ್ತುಗಳನ್ನು ದಾನ ಮಾಡಬಾರದು ಮತ್ತು ಅದರ ಹಿಂದಿನ ಕಾರಣಗಳನ್ನು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಮೊದಲನೆಯದಾಗಿ, ದಾನ ಮಾಡುವಾಗ ಪಾತ್ರರನ್ನು ಗುರುತಿಸುವುದು ಅತ್ಯಗತ್ಯ. ನಿಜವಾದ ಕೈ ಇಲ್ಲದವರು, ಕಾಲು ಇಲ್ಲದವರು, ಅಶಕ್ತರು, ಅನಾಥರು – ಇಂತಹವರಿಗೆ ನಾವು ದಾನ ಮಾಡಿದಾಗ, ಆ ವಸ್ತುಗಳು ಸಾರ್ಥಕತೆಯನ್ನು ಪಡೆಯುತ್ತವೆ. ಆದರೆ, ಸಿಕ್ಕಿದ್ದನ್ನೆಲ್ಲಾ ಅಥವಾ ನಮಗೆ ಬೇಡವಾದ ವಸ್ತುಗಳನ್ನು ದಾನ ಮಾಡುವುದು ಸರಿಯಲ್ಲ. ಇಂತಹ ದಾನಗಳು ನ್ಯೂಟನ್‌ನ ಮೂರನೇ ನಿಯಮದಂತೆ, ಕ್ರಿಯೆಗೆ ಪ್ರತಿಕ್ರಿಯೆ ಇದ್ದಂತೆ, ನಮಗೆ ಪಾಪವಾಗಿ ವಾಪಸ್ ಬರಬಹುದು ಎಂದು ಹೇಳಲಾಗಿದೆ.

ಯಾವ ವಸ್ತುಗಳನ್ನು ದಾನ ಮಾಡಬಾರದು?

ಪ್ಲಾಸ್ಟಿಕ್ ವಸ್ತುಗಳು:

ಹೊಸದಾಗಲಿ, ಹಳೆಯದಾಗಲಿ ಯಾವುದೇ ಪ್ಲಾಸ್ಟಿಕ್ ವಸ್ತುವನ್ನು ದಾನವಾಗಿ ನೀಡಬಾರದು. ಮದುವೆಯ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಪ್ಲಾಸ್ಟಿಕ್ ಬಾಕ್ಸ್‌ಗಳು ಅಥವಾ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ನೀಡುವ ಪದ್ಧತಿ ಇದೆ, ಇದು ಅಶುಭವೆಂದು ಪರಿಗಣಿಸಲಾಗುತ್ತದೆ. ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುವುದರಿಂದ ಕೊಡುವವರಿಗೂ, ತೆಗೆದುಕೊಳ್ಳುವವರಿಗೂ ಶುಭವಲ್ಲ. ಮನೆಯಲ್ಲಿ ಬೇಡವಾದ ಪ್ಲಾಸ್ಟಿಕ್ ವಸ್ತುಗಳನ್ನು ಕೆಲಸಗಾರರಿಗೋ ಅಥವಾ ಅಕ್ಕಪಕ್ಕದವರಿಗೋ ನೀಡುವುದನ್ನು ಸಹ ತಪ್ಪಿಸಬೇಕು.

ಬಳಸಿದ ಚಪ್ಪಲಿಗಳು:

ಸಾಮಾನ್ಯವಾಗಿ ಚಪ್ಪಲಿ ದಾನವನ್ನು ಶುಭವೆಂದು ಪರಿಗಣಿಸಲಾಗುತ್ತದೆ, ಆದರೆ ಇದು ಹೊಸ ಚಪ್ಪಲಿಗಳಿಗೆ ಅನ್ವಯಿಸುತ್ತದೆ. ನಾವು ಉಪಯೋಗಿಸಿದ, ಹಳೆಯ ಚಪ್ಪಲಿಗಳನ್ನು ದಾನ ಮಾಡುವುದು ದಾರಿದ್ರ್ಯವನ್ನು ಆಹ್ವಾನಿಸುತ್ತದೆ. ಜೊತೆಗೆ, ರೋಗರುಜಿನೆಗಳು ದಾನ ಮಾಡಿದವರನ್ನು ಬಾಧಿಸುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ.

ಪೊರಕೆ:

ಪೊರಕೆ ಐಶ್ವರ್ಯ ಮತ್ತು ಸಂಪತ್ತಿನ ಸಂಕೇತ. ಉಪಯೋಗಿಸಿದ ಪೊರಕೆಯನ್ನು ದಾನ ಮಾಡುವುದರಿಂದ ಮನೆಯ ಐಶ್ವರ್ಯ ನಷ್ಟವಾಗುತ್ತದೆ. ಇದು ಹಣಕಾಸಿನ ತೊಂದರೆಗಳಿಗೆ ಮತ್ತು ಸಾಲ ಹೆಚ್ಚಾಗಲು ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಬಳಸಿದ ತಲೆ ಎಣ್ಣೆ:

ತೆಂಗಿನ ಎಣ್ಣೆ, ಪ್ಯಾರಾಚೂಟ್ ಆಯಿಲ್ ಅಥವಾ ಇತರೆ ಯಾವುದೇ ಬಗೆಯ ತಲೆ ಎಣ್ಣೆಯನ್ನು ಸ್ವಲ್ಪ ಬಳಸಿ ಉಳಿದಿದ್ದನ್ನು ದಾನ ಮಾಡಬಾರದು. ನಾವು ಬಳಸಿದ ಎಣ್ಣೆ ನಮ್ಮ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದನ್ನು ದಾನ ಮಾಡುವುದು ಅಶುಭಕರ.

ಹಳಸಿದ ಆಹಾರ:

ಮನೆಯಲ್ಲಿ ಹಳಸಿದ, ಹಾಳಾದ ಆಹಾರವನ್ನು ಯಾರಿಗೂ ದಾನವಾಗಿ ನೀಡಬಾರದು. ತಾಜಾ ಮತ್ತು ಉತ್ತಮ ಗುಣಮಟ್ಟದ ಆಹಾರವನ್ನು ಮಾತ್ರ ದಾನ ಮಾಡಬೇಕು.

ಇದನ್ನೂ ಓದಿ: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ

ಅರ್ಧಬಳಸಿದ ಸೋಪ್, ಪೌಡರ್, ಕಾಸ್ಮೆಟಿಕ್ಸ್:

ಅರ್ಧ ಬಳಸಿದ ಸೋಪ್, ಮುಖಕ್ಕೆ ಹಾಕುವ ಪೌಡರ್, ಮತ್ತು ಇತರೆ ಯಾವುದೇ ಕಾಸ್ಮೆಟಿಕ್ ವಸ್ತುಗಳನ್ನು ದಾನ ಮಾಡುವುದು ಅಶುಭಕರ. ಆದರೆ, ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಅಥವಾ ಅತ್ತೆ ಮನೆಯವರು ಸೊಸೆಗೆ ಹೊಸ ಸೆಟ್ ಬಾಕ್ಸ್ (ಕಾಸ್ಮೆಟಿಕ್ ಕಿಟ್) ನೀಡುವುದು ಬೇರೆ ವಿಷಯ. ಉಪಯೋಗಿಸಿದ ವೈಯಕ್ತಿಕ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಬೇಕು.

ಕೊಳೆತ ಹಣ್ಣುಗಳು:

ಪಶು-ಪಕ್ಷಿಗಳಿಗೆ ಕೊಳೆತ ಹಣ್ಣುಗಳನ್ನು ಹಾಕುವುದು ಸಹ ಅಷ್ಟು ಶುಭವಲ್ಲ. ಉತ್ತಮ ಗುಣಮಟ್ಟದ ಆಹಾರವನ್ನೇ ಅವುಗಳಿಗೂ ನೀಡಬೇಕು.

ಅರ್ಧಬಳಸಿದ ವಸ್ತುಗಳು:

ಮನೆಯಲ್ಲಿ ಕೆಲಸ ಮಾಡುವವರಿಗೆ ಅಥವಾ ಪುಟ್ಟ ಮಕ್ಕಳಿಗೆ ಅರ್ಧಬಳಸಿದ ಬಿಸ್ಕತ್ತುಗಳು ಅಥವಾ ಇನ್ನಿತರ ಆಹಾರ ವಸ್ತುಗಳನ್ನು ನೀಡುವುದಕ್ಕಿಂತ ಹೊಸದನ್ನೇ ನೀಡುವುದು ಹೆಚ್ಚು ಉತ್ತಮ. ಅರ್ಧಬಳಸಿದ ವಸ್ತುಗಳನ್ನು ನೀಡುವುದು ದಾರಿದ್ರ್ಯಕ್ಕೆ ಕಾರಣವಾಗಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Tue, 2 December 25

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ