AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2026: ಆರೋಗ್ಯ ಮತ್ತು ಅಧ್ಯಾತ್ಮದ ಸಂಗಮ; ಯುಗಾದಿಯ ಬೇವು-ಬೆಲ್ಲ ಸೇವನೆಯ ಹಿಂದಿನ ರಹಸ್ಯ ಇಲ್ಲಿ ತಿಳಿದುಕೊಳ್ಳಿ

ಯುಗಾದಿ ಹಬ್ಬದಂದು ಸೇವಿಸುವ ಬೇವು ಬೆಲ್ಲವು ಕೇವಲ ಸಂಪ್ರದಾಯವಲ್ಲ. ಇದು ಆಯುರ್ವೇದೀಯವಾಗಿ ಆರೋಗ್ಯ ಮತ್ತು ಶಕ್ತಿವರ್ಧಕ. ಜೀವನದ ಕಷ್ಟ ಸುಖಗಳ ಸಂಕೇತವಾಗಿ, ದೇಹದ ಉಷ್ಣತೆಯನ್ನು ಸಮತೋಲನಗೊಳಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಚೈತ್ರ ಮಾಸದಲ್ಲಿ ಪ್ರಕೃತಿಯ ಹೊಸತನದಂತೆ ಮನಸ್ಸು ದೇಹಗಳಿಗೂ ನವಚೈತನ್ಯ ನೀಡುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಮಾಹಿತಿ ನೀಡಿದ್ದಾರೆ.

Ugadi 2026: ಆರೋಗ್ಯ ಮತ್ತು ಅಧ್ಯಾತ್ಮದ ಸಂಗಮ; ಯುಗಾದಿಯ ಬೇವು-ಬೆಲ್ಲ ಸೇವನೆಯ ಹಿಂದಿನ ರಹಸ್ಯ ಇಲ್ಲಿ ತಿಳಿದುಕೊಳ್ಳಿ
ಯುಗಾದಿಯ ಬೇವು-ಬೆಲ್ಲ
ಅಕ್ಷತಾ ವರ್ಕಾಡಿ
|

Updated on:Mar 19, 2026 | 10:34 AM

Share

ಯುಗಯುಗಾಂತರಗಳಿಂದ ಯುಗಾದಿ ಹಬ್ಬವು ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಪ್ರತಿಯೊಂದು ಹಬ್ಬದಂತೆ ಯುಗಾದಿಯೂ ತನ್ನ ವಿಶಿಷ್ಟತೆಯನ್ನು ಹೊಂದಿದೆ, ವಿಶೇಷವಾಗಿ ಬೇವು ಬೆಲ್ಲದ ಸೇವನೆಯ ಮೂಲಕ. ಈ ಬಗ್ಗೆ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಆಯುರ್ವೇದದ ದೃಷ್ಟಿಯಿಂದ ಬೇವು ಮತ್ತು ಬೆಲ್ಲ ಎರಡೂ ಆರೋಗ್ಯ ಮತ್ತು ಶಕ್ತಿವರ್ಧಕಗಳಾಗಿವೆ. ಬೇವಿನು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಸಹಕಾರಿ. ಬೆಲ್ಲವೂ ಸಹ ಶಕ್ತಿ ಮತ್ತು ಆರೋಗ್ಯವನ್ನು ಒದಗಿಸುತ್ತದೆ.

ಜೀವನದ ಸಾಂಕೇತಿಕ ಅರ್ಥದಲ್ಲಿ ಬೇವು ಕಷ್ಟಗಳು ಮತ್ತು ದುಃಖವನ್ನು ಪ್ರತಿನಿಧಿಸಿದರೆ, ಬೆಲ್ಲವು ಸುಖ, ಸಂತೋಷ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. “ಬೇವು ಬೆಲ್ಲ ಎರಡನ್ನೂ ಸವಿದವ ಕವಿ ಮಲ್ಲ” ಎಂಬ ಮಾತಿದೆ, ಇದು ಜೀವನದ ಕಹಿ-ಸಿಹಿ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ. ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷದ ಆರಂಭದಲ್ಲಿ ಬೇವು ಬೆಲ್ಲವನ್ನು ಸೇವಿಸುವುದು ಆ ವರ್ಷವಿಡೀ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿದೆ.

ಹೊಸ ವರ್ಷದಂದು ಬೇವು ಬೆಲ್ಲ ಸೇವನೆಯು ವೈಜ್ಞಾನಿಕ ಮಹತ್ವವನ್ನೂ ಹೊಂದಿದೆ. ಚೈತ್ರ ಮಾಸದಲ್ಲಿ ಸೂರ್ಯನು ಭೂಮಿಯ ಸಮೀಪದಲ್ಲಿ ಇರುವುದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಈ ಸಮಯದಲ್ಲಿ ಬೇವು ಬೆಲ್ಲವನ್ನು ಸೇವಿಸುವುದರಿಂದ ದೇಹದ ಉಷ್ಣತೆ ಸಮತೋಲನಗೊಂಡು, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ದೇಹವನ್ನು ನಿಶಕ್ತಿ ಮತ್ತು ಆರೋಗ್ಯದಲ್ಲಿನ ಏರುಪೇರುಗಳಿಂದ ರಕ್ಷಿಸುತ್ತದೆ. ಅಲ್ಲದೆ, ನಮ್ಮಲ್ಲಿರುವ ರಜೋಗುಣ, ತಮೋಗುಣ ಮತ್ತು ಸತ್ವಗುಣಗಳನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ಚೈತ್ರ ಮಾಸದಲ್ಲಿ ಪ್ರಕೃತಿ ಹೊಸ ಚಿಗುರನ್ನು ಪಡೆಯುವಂತೆ, ಬೇವಿನ ಹೊಸ ಚಿಗುರಿನ ಜೊತೆ ಬೆಲ್ಲವನ್ನು ಸೇವಿಸುವುದರಿಂದ ನಮ್ಮ ದೇಹ, ಮನಸ್ಸು ಮತ್ತು ಸಂಕಲ್ಪಗಳು ಹೊಸ ಚೈತನ್ಯವನ್ನು ಪಡೆಯುತ್ತವೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದಾಗ, ಬೇವು ಮತ್ತು ಬೆಲ್ಲದ ಸೇವನೆಯು ಗ್ರಹಗಳ ಅನುಗ್ರಹಕ್ಕೆ ಕಾರಣವಾಗುತ್ತದೆ. ಬೆಲ್ಲವು ಹಳದಿ ಬಣ್ಣವನ್ನು ಮತ್ತು ಬೇವು ಹಸಿರು ಬಣ್ಣವನ್ನು ಪ್ರತಿನಿಧಿಸುವುದರಿಂದ, ಇವು ಗುರು ಮತ್ತು ಬುಧ ಗ್ರಹಗಳ ಅನುಗ್ರಹವನ್ನು ನೀಡುತ್ತವೆ ಎಂದು ನಂಬಲಾಗಿದೆ. ಇದು ಪಾಪ ಗ್ರಹಗಳ ಶಕ್ತಿಯನ್ನು, ಅವುಗಳ ಪ್ರಭಾವವನ್ನು ಮತ್ತು ಕರ್ಮಫಲಗಳನ್ನು ಕಡಿಮೆ ಮಾಡುತ್ತದೆ. ಬೇವಿನು ಮಧುಮೇಹ ರೋಗಿಗಳಿಗೆ ರಾಮಬಾಣವಿದ್ದಂತೆ. ಈ ಬೇವು ಬೆಲ್ಲವನ್ನು ಕೇವಲ ಒಂದು ದಿನವಲ್ಲದೆ, ಯುಗಾದಿ ವಾರವಿಡೀ ಸೇವಿಸುವುದರಿಂದ ಮತ್ತು ಇತರರಿಗೆ ಹಂಚುವುದರಿಂದ ವಿಶೇಷ ಫಲ ಸಿಗುತ್ತದೆ.

ಒಂದು ಶ್ಲೋಕ ಹೀಗೆ ಹೇಳುತ್ತದೆ: “ಶತಾಯುರ್ ವಜ್ರದೇಹಾಯ ಸರ್ವಸಂಪತ್ಕರಾಯಚ ಸರ್ವಾರಿಷ್ಟ ವಿನಾಶನಾಯ ನಿಂಬಕಂದಳ ಭಕ್ಷಣಂ”. ಇದರರ್ಥ, ಬೇವು ಬೆಲ್ಲ ಸೇವನೆಯು ನೂರು ವರ್ಷ ಆಯುಷ್ಯ, ವಜ್ರದಂತಹ ದೇಹ, ಸಕಲ ಸಂಪತ್ತು ಮತ್ತು ಎಲ್ಲಾ ಅರಿಷ್ಟಗಳ ವಿನಾಶಕ್ಕೆ ಕಾರಣವಾಗುತ್ತದೆ. ಇದರಿಂದ ಗ್ರಹ ಶಕ್ತಿಗಳು, ಗ್ರಹ ಕಾಟಗಳು ಕಡಿಮೆಯಾಗಿ, ಮನಸ್ಸಿನ ಆಲೋಚನೆಗಳು ಸುಧಾರಿಸಿ, ರೋಗನಿರೋಧಕ ಶಕ್ತಿ ಬೆಳೆಯುತ್ತದೆ. ರಾಹು, ಕೇತು, ಕುಜ ಮತ್ತು ಶನಿ ಗ್ರಹಗಳ ಕಾಟವೂ ಕಡಿಮೆಯಾಗುತ್ತದೆ.

ಕೊನೆಯದಾಗಿ, ಬೇವು ಬೆಲ್ಲ ಕೇವಲ ಸಾಂಪ್ರದಾಯಿಕ ಆಚರಣೆಯಲ್ಲ, ಬದಲಿಗೆ ಆರೋಗ್ಯವರ್ಧಕ, ಆಯುಷ್ಯ ವರ್ಧಕ ಮತ್ತು ಹೊಸ ವರ್ಷದ ಆರಂಭದಲ್ಲಿ ಸಕಾರಾತ್ಮಕ ಪ್ರಭಾವ ಬೀರುವ ಮಹತ್ವಪೂರ್ಣ ಅಂಶವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Thu, 19 March 26

Follow Us
ಭವಿಷ್ಯ ಹೇಳ್ತೀನಿ ಅಂತ ಬಂದ ರಮೇಶ್ ಅರವಿಂದ್
ಭವಿಷ್ಯ ಹೇಳ್ತೀನಿ ಅಂತ ಬಂದ ರಮೇಶ್ ಅರವಿಂದ್
ಯುಗಾದಿ ಹಬ್ಬದ ಖರೀದಿಗೆ ಕೆಆರ್​ ಮಾರ್ಕೆಟ್​ಗೆ ಮುಗಿಬಿದ್ದ ಗ್ರಾಹಕರು
ಯುಗಾದಿ ಹಬ್ಬದ ಖರೀದಿಗೆ ಕೆಆರ್​ ಮಾರ್ಕೆಟ್​ಗೆ ಮುಗಿಬಿದ್ದ ಗ್ರಾಹಕರು
ಇವಿ ಚಾರ್ಜಿಂಗ್ ಸ್ಫೋಟ, ಮನೆಗೂ ತಗುಲಿದ ಬೆಂಕಿ, 10 ಸಿಲಿಂಡರ್​ಗಳ ಸ್ಫೋಟ
ಇವಿ ಚಾರ್ಜಿಂಗ್ ಸ್ಫೋಟ, ಮನೆಗೂ ತಗುಲಿದ ಬೆಂಕಿ, 10 ಸಿಲಿಂಡರ್​ಗಳ ಸ್ಫೋಟ
ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಘಾತ
ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಘಾತ
ರೈಲ್ವೆ ಹಳಿ ತಡೆಗೋಡೆಯಲ್ಲಿ ಸಿಲುಕಿ ಒದ್ದಾಡಿದ ಒಂಟಿ ಸಲಗ
ರೈಲ್ವೆ ಹಳಿ ತಡೆಗೋಡೆಯಲ್ಲಿ ಸಿಲುಕಿ ಒದ್ದಾಡಿದ ಒಂಟಿ ಸಲಗ
ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲೊಂದು ಹ್ಯಾಂಡ್ ಪಂಪ್
ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲೊಂದು ಹ್ಯಾಂಡ್ ಪಂಪ್
ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಟ್ರಾಫಿಕ್ ಜಾಮ್, ಮೆಜೆಸ್ಟಿಕ್​ನಲ್ಲಿ ಜನವೋ ಜನ
ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಟ್ರಾಫಿಕ್ ಜಾಮ್, ಮೆಜೆಸ್ಟಿಕ್​ನಲ್ಲಿ ಜನವೋ ಜನ
ಯುಗಾದಿಯಿಂದ ಈ ರಾಶಿಯವರ ಜೀವನ ಬೆಲ್ಲದಂತೆ ಸಿಹಿಯಾಗಿರುತ್ತದೆ
ಯುಗಾದಿಯಿಂದ ಈ ರಾಶಿಯವರ ಜೀವನ ಬೆಲ್ಲದಂತೆ ಸಿಹಿಯಾಗಿರುತ್ತದೆ
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ