- TV9 Kannada Photo gallery Cricket photos Jemimah Rodrigues Out of Asia Cup and Asian Games Due to Injury; Pratika Rawal Named Replacement
ಏಷ್ಯಾಕಪ್ ಜೊತೆಗೆ ಏಷ್ಯನ್ ಗೇಮ್ಸ್ನಿಂದಲೂ ಹೊರಬಿದ್ದ ಜೆಮಿಮಾ ರೊಡ್ರಿಗಸ್
Jemimah Rodrigues injury: ದಿ ಹಂಡ್ರೆಡ್‌ನಲ್ಲಿ ಗಾಯಗೊಂಡ ಜೆಮಿಮಾ ರೊಡ್ರಿಗಸ್ ಮುಂಬರುವ ಮಹಿಳಾ ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ತಂಡವು ಅವರ ಬಲ ಮಂಡಿರಜ್ಜು ಗಾಯ ಗಂಭೀರವೆಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಜೆಮಿಮಾ ಬದಲಿಗೆ ಪ್ರತೀಕಾ ರಾವಲ್ ಅವರನ್ನು ಏಷ್ಯಾಕಪ್‌ಗಾಗಿ ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
Updated on: Aug 14, 2026 | 9:27 PM

2026 ರ ಮಹಿಳಾ ಟಿ20 ಏಷ್ಯಾಕಪ್‌ಗೆ ಬಿಸಿಸಿಐ ಇಂದು 15 ಸದಸ್ಯರ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ನಿರೀಕ್ಷಿತ ಹೆಸರುಗಳೇ ಇದ್ದರೂ ಇಬ್ಬರು ಪ್ರಮುಖ ಆಟಗಾರ್ತಿಯರು ಗಾಯದಿಂದಾಗಿ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರಲ್ಲಿ ಒಬ್ಬರು ಅನುಭವಿ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಹಾಗೂ ಇನ್ನೊಬ್ಬರು ಯುವ ಸ್ಪಿನ್ನ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್(PC-PTI).

ಶ್ರೇಯಾಂಕ ಪಾಟೀಲ್ ಈ ಟೂರ್ನಿಯಲ್ಲಿ ಆಡುತ್ತಿಲ್ಲ ಎಂಬುದು ಈ ಮೊದಲೇ ವರದಿಯಾಗಿತ್ತು. ಆದರೆ ಜೆಮಿಮಾ ರೊಡ್ರಿಗಸ್ ಆಡದಿರುವುದು ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟುಮಾಡಿದೆ. ದಿ ಹಂಡ್ರೆಡ್‌ನಲ್ಲಿ ಗಾಯಗೊಂಡಿದ್ದ ಜೆಮಿಮಾ ಇದೀಗ ಮುಂಬರುವ ಏಷ್ಯಾಕಪ್ ಜೊತೆಗೆ ಏಷ್ಯನ್ ಕ್ರೀಡಾಕೂಟದಿಂದಲೂ ಹೊರಬಿದಿದ್ದಾರೆ(PC-PTI).

ವಾಸ್ತವವಾಗಿ ಆಗಸ್ಟ್ 3 ರಂದು ಇಂಗ್ಲೆಂಡ್‌ನಲ್ಲಿ ನಡೆದ ದಿ ಹಂಡ್ರೆಡ್ ಲೀಗ್ ಪಂದ್ಯದ ಸಮಯದಲ್ಲಿ ಜೆಮಿಮಾ ಅವರ ಬಲ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಜೆಮಿಮಾ ಲೀಗ್ ತೊರೆದು ಭಾರತಕ್ಕೆ ವಾಪಸ್ಸಾಗಿದ್ದರು. ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ತಂಡವು ಜೆಮಿಮಾ ಅವರನ್ನು ಪರೀಕ್ಷಿಸಿದ್ದು, ಅವರ ಗಾಯ ಗಂಭೀರವಾಗಿರುವುದು ಪತ್ತೆಯಾಗಿದೆ(PC-PTI).

ಪರಿಣಾಮವಾಗಿ ಜೆಮಿಮಾ ಮುಂಬರುವ ಎಸಿಸಿ ಮಹಿಳಾ ಏಷ್ಯಾಕಪ್ ಮತ್ತು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ. ಹೀಗಾಗಿ ಮಹಿಳಾ ಆಯ್ಕೆ ಸಮಿತಿಯು ಜೆಮಿಮಾ ಬದಲಿಗೆ ಪ್ರತೀಕಾ ರಾವಲ್ ಅವರನ್ನು ಏಷ್ಯಾಕಪ್‌ಗಾಗಿ ಭಾರತೀಯ ತಂಡಕ್ಕೆ ಆಯ್ಕೆ ಮಾಡಿದೆ(PC-PTI).

ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಭಾರತಿ ಫುಲ್‌ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಜಿ. ಕಮಲಿನಿ (ವಿಕೆಟ್‌ಕೀಪರ್), ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ನಂದನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್(PC-PTI).



