- TV9 Kannada Kannada News Photos Here is the list of Kannada movies to watch on this Independence Day
ಸ್ವಾತಂತ್ರ್ಯ ದಿನಾಚರಣೆಯಂದು ನೋಡಬೇಕಾದ ಕನ್ನಡ ಸಿನಿಮಾಗಳಿವು
ಇಂದು ದೇಶ 80ನೇ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ಭಾಷಣ ಮಾಡಿದ್ದಾರೆ. ದೇಶದಾದ್ಯಂತ ಪ್ರತಿ ರಾಜ್ಯ, ಪಟ್ಟಣ, ಹಳ್ಳಿಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಿನಿಮಾಗಳು ಸಹ ಪ್ರಮುಖವಾದ ಪಾತ್ರ ನಿರ್ವಹಿಸಿದ್ದರು. ಸಿನಿಮಾಗಳ ಮೂಲಕ ದೇಶಪ್ರೇಮವನ್ನು ಬಿತ್ತುವ ಕೆಲಸಗಳನ್ನು ಮಾಡಲಾಗಿತ್ತು. ಕನ್ನಡದಲ್ಲಿಯೂ ಸಹ ಸಾಕಷ್ಟು ದೇಶ ಪ್ರೇಮ ಜಾಗೃತಗೊಳಿಸುವ ಸಿನಿಮಾಗಳು ಬಂದಿವೆ. ಸ್ವಾತಂತ್ರ್ಯ ದಿನಾಚರಣೆಯಂದು ನೋಡಬಹುದಾದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...
Updated on: Aug 15, 2026 | 3:07 PM

1999 ರಲ್ಲಿ ಬಿಡುಗಡೆ ಆದ ವಿಷ್ಣುವರ್ಧನ್ ನಟನೆಯ ವೀರಪ್ಪ ನಾಯ್ಕ ಸಿನಿಮಾ, ಅದ್ಭುತವಾದ ಸಿನಿಮಾ. ದೇಶಪ್ರೇಮ ಜಾಗೃತಗೊಳಿಸುವ ಈ ಸಿನಿಮಾನಲ್ಲಿ ವೀರಪ್ಪ ನಾಯಕನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಮೊದಲೆಲ್ಲ ಸ್ವಾತಂತ್ರ್ಯ ದಿನಾಚರಣೆಯಂದು ಈ ಸಿನಿಮಾ ಪ್ರದರ್ಶಿಸುತ್ತಿದ್ದರು.

ಬಿಆರ್ ಪಂತುಲು ನಿರ್ದೇಶನ ಮಾಡಿರುವ 1966ರಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ‘ಕಿತ್ತೂರ ಚೆನ್ನಮ್ಮ’ ಸಹ ದೇಶಪ್ರೇಮ ಜಾಗೃತಗೊಳಿಸುವ ಸಿನಿಮಾ ಆಗಿದೆ. ಡಾ ರಾಜ್ಕುಮಾರ್ ಮತ್ತು ಬಿ ಸರೋಜದೇವಿ ನಟಿಸಿರುವ ಆ ಸಿನಿಮಾನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಕಿತ್ತೂರ ಚೆನ್ನಮ್ಮನ ಜೀವನ ಕತೆ ಇದೆ.

ವಿಷ್ಣುವರ್ಧನ್, ಸುಹಾಸಿನಿ ನಟಿಸಿರುವ ‘ಮುತ್ತಿನಹಾರ’ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಸೈನಿಕ ಮತ್ತು ಅವನ ತ್ಯಾಗಗಳ ಕತೆಯನ್ನು ಒಳಗೊಂಡಿರುವ ಸಿನಿಮಾ ‘ಮುತ್ತಿನ ಹಾರ’ ದೇಶ ಪ್ರೇಮ ಜಾಗೃತಗೊಳಿಸುವ ಸಿನಿಮಾಗಳಲ್ಲಿ ಇದೂ ಒಂದು.

ಶಿವರಾಜ್ ಕುಮಾರ್ ನಟಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಹಗಲುವೇಷ’ ಸಿನಿಮಾ ಸಹ ಇದೇ ಪಟ್ಟಿಗೆ ಸೇರುವ ಸಿನಿಮಾ. ನಾಯಕ, ಬ್ರಿಟೀಷರ ತೆರಿಗೆ ಪದ್ಧತಿಯ ವಿರುದ್ಧ ತಿರುಗಿ ಬೀಳುವ ಕತೆಯನ್ನು ಸಿನಿಮಾ ಒಳಗೊಂಡಿದೆ.

ಕ್ರಾಂತಿಕಾರಿ ಹೋರಾಟಗಾರ ಸಿಂಧೂರ ಲಕ್ಷ್ಮಣನ ಜೀವನ ಕತೆಯನ್ನು ಒಳಗೊಂಡಿರುವ ಸಿನಿಮಾ ‘ವೀರ ಸಿಂಧೂರ ಲಕ್ಷ್ಮಣ’. 1977 ರಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದರು.

ಶಿವರಾಜ್ ಕುಮಾರ್ ನಟಿಸಿರುವ ‘ಎಕೆ-47’ ಸಿನಿಮಾ ಅಪ್ಪಟ ಆಕ್ಷನ್ ಸಿನಿಮಾ ಆದರೂ ಸಹ ಸಿನಿಮಾನಲ್ಲಿ ಸಾಕಷ್ಟು ದೇಶಪ್ರೇಮದ ಅಂಶಗಳು ಇವೆ. ನಾಯಕ, ಭಯೋತ್ಪಾದಕರ ವಿರುದ್ಧ ಹೋರಾಡಿ ದೇಶವನ್ನು ರಕ್ಷಿಸುವ ಕತೆಯನ್ನು ಒಳಗೊಂಡಿದೆ.

ಕನ್ನಡದಲ್ಲಿ ‘ಇಂಡಿಪೆಂಡೆನ್ಸ್ ಡೇ’ ಹೆಸರಿನ ಸಿನಿಮಾ ಇದೆ. ಸಿನಿಮಾನಲ್ಲಿ ಸಾಯಿ ಕುಮಾರ್ ನಾಯಕ. ಅಪ್ಪಟ ಆಕ್ಷನ್ ಸಿನಿಮಾ ಇದಾಗಿದ್ದು, ದೇಶವನ್ನು ಭಯೋತ್ಪಾದಕರಿಂದ ನಾಯಕ ರಕ್ಷಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ನಟ ದರ್ಶನ್ ನಟಿಸಿರುವ ‘ಕ್ರಾಂತಿ ವೀರ ಸಂಗೊಳ್ಳಿ’ ರಾಯಣ್ಣ ಸಿನಿಮಾ ಸಹ ದೇಶಪ್ರೇಮದ ಕತೆಯುಳ್ಳ ಸಿನಿಮಾ ಆಗಿದೆ. ಬ್ರಿಟೀಷರೊಟ್ಟಿಗೆ ಹೋರಾಡಿದ ಸಂಗೊಳ್ಳಿ ರಾಯಣ್ಣನ ಜೀವನದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



