ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ: ಉತ್ತರಿಸಲಾಗದೆ ಜಾಗ ಖಾಲಿ ಮಾಡಿದ ಶೆಹಬಾಜ್ ಷರೀಫ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪಾಲ್ಗೊಳ್ಳಲು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಆಗಮಿಸಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಜಾಗತಿಕ ಭಯೋತ್ಪಾದನೆ ಕುರಿತ ನೇರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತೀವ್ರ ಮುಜುಗರಕ್ಕೀಡಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ವಿಶ್ವಸಂಸ್ಥೆಯ ಕೇಂದ್ರ ಕಚೇರಿಯನ್ನು ಪ್ರವೇಶಿಸುತ್ತಿದ್ದ ವೇಳೆ ಮಾಧ್ಯಮದವರು,ಪ್ರಧಾನಿಯವರೇ, ನೀವು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಯಾವಾಗ ನಿಲ್ಲಿಸುತ್ತೀರಿ? ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಒಳನಡೆದ ಷರೀಫ್, ಸಭೆ ಮುಗಿಸಿ ಹೊರಬರುವಾಗ ಮತ್ತೊಮ್ಮೆ ಪತ್ರಕರ್ತರ ಪ್ರಶ್ನೆಗೆ ಸಿಲುಕಿದರು.
ನ್ಯೂಯಾರ್ಕ್, ಸೆಪ್ಟೆಂಬರ್ 25:ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪಾಲ್ಗೊಳ್ಳಲು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಆಗಮಿಸಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಜಾಗತಿಕ ಭಯೋತ್ಪಾದನೆ ಕುರಿತ ನೇರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತೀವ್ರ ಮುಜುಗರಕ್ಕೀಡಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ವಿಶ್ವಸಂಸ್ಥೆಯ ಕೇಂದ್ರ ಕಚೇರಿಯನ್ನು ಪ್ರವೇಶಿಸುತ್ತಿದ್ದ ವೇಳೆ ಮಾಧ್ಯಮದವರು,ಪ್ರಧಾನಿಯವರೇ, ನೀವು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಯಾವಾಗ ನಿಲ್ಲಿಸುತ್ತೀರಿ? ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಒಳನಡೆದ ಷರೀಫ್, ಸಭೆ ಮುಗಿಸಿ ಹೊರಬರುವಾಗ ಮತ್ತೊಮ್ಮೆ ಪತ್ರಕರ್ತರ ಪ್ರಶ್ನೆಗೆ ಸಿಲುಕಿದರು.
ಲಷ್ಕರ್-ಎ-ತೊಯ್ಬಾ (LeT) ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ನೀವು ಯಾವಾಗ ನ್ಯಾಯಾಂಗ ವಿಚಾರಣೆ ನಡೆಸುತ್ತೀರಿ ಎಂದು ವರದಿಗಾರರು ಪದೇಪದೇ ಕೇಳಿದರೂ, ಯಾವುದೇ ಉತ್ತರವನ್ನೂ ನೀಡದೆ ಅಸಹಾಯಕರಾಗಿ ತಲೆತಗ್ಗಿಸಿ ಕಾರು ಹತ್ತಿ ತೆರಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

