ವೀಕೆಂಡ್ ಎಪಿಸೋಡ್ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಸೂಚನೆ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್ ಕನ್ನಡದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆ ಸತತ 3 ಗಂಟೆಗಳ ಕಾಲ ಪ್ರಸಾರವಾಗಲಿದ್ದು, ಪ್ರೇಕ್ಷಕರಿಗೆ ದೊಡ್ಡ ಶಾಕ್ ಕಾಯುತ್ತಿದೆ. ಮಿಡ್-ವೀಕ್ ಎಲಿಮಿನೇಷನ್ ಬೆನ್ನಲ್ಲೇ ಮನೆಗೆ 'ಎಮರ್ಜೆನ್ಸಿ ಎಕ್ಸಿಟ್' ಎದುರಾಗಿದ್ದು, ವೋಟಿಂಗ್ ಆಧಾರದಲ್ಲಿ ಮತ್ತಿಬ್ಬರು ಸ್ಪರ್ಧಿಗಳು ಹೊರಹೋಗುವ ಸೂಚನೆ ಸಿಕ್ಕಿದೆ. ಈ ಎಪಿಸೋಡ್ ರಾತ್ರಿ 8ಕ್ಕೆ ಪ್ರಸಾರವಾಗಲಿದೆ,
ಮತ್ತಿಬ್ಬರು ಹೊರ ಹೋಗ್ತಾರೆ; ಸೂಚನೆ ಕೊಟ್ಟ ಬಿಗ್ ಬಾಸ್ ಕಲರ್ಸ್ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ‘ಬಿಗ್ ಬಾಸ್’ ಶನಿವಾರ ಮತ್ತು ಭಾನುವಾರದ ಸಂಚಿಕೆಯಲ್ಲಿ ಪ್ರೇಕ್ಷಕರಿಗೆ ‘ಡಬಲ್ ಧಮಾಕಾ’ ರಸದೌತಣ ನೀಡಲು ಸಜ್ಜಾಗಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮವು ಈ ಬಾರಿ ಸತತ 3 ಗಂಟೆಗಳ ಕಾಲ ಸುದೀರ್ಘವಾಗಿ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ದೊಡ್ಡ ಶಾಕ್ ಕಾಯುತ್ತಿದ್ದು, ವಾರದ ಮಧ್ಯದಲ್ಲಷ್ಟೇ ಒಬ್ಬರು ಎಲಿಮಿನೇಟ್ ಆಗಿದ್ದರು. ಆದರೆ ಇದೀಗ ಮನೆಗೆ ಮತ್ತೊಂದು ‘ಎಮರ್ಜೆನ್ಸಿ ಎಕ್ಸಿಟ್’ ಎದುರಾಗಿದ್ದು, ಮತ್ತಿಬ್ಬರು ಸ್ಪರ್ಧಿಗಳು ಹೊರಹೋಗುವ ಸೂಚನೆ ಸಿಕ್ಕಿದೆ. ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ರೋಚಕ ಸಂಚಿಕೆಯನ್ನು ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

