ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ: ಜನವರಿ ತಿಂಗಳ ಒಳಗಾಗಿಯೇ ಜಲಕ್ಷಾಮದ ಭೀತಿ
ತಮಿಳುನಾಡಿಗೆ ನಿತ್ಯ 4,000 ಕ್ಯೂಸೆಕ್ ಕಾವೇರಿ ನೀರು ಹರಿಸಲು CWMA ಆದೇಶಿಸಿರುವ ನಡುವೆ ಕೆಆರ್‌ಎಸ್ ಸೇರಿದಂತೆ ಕಾವೇರಿ ಜಲಾನಯನದ ನಾಲ್ಕು ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದ್ದು, ರಾಜ್ಯದಲ್ಲಿ ಜನವರಿ ವೇಳೆಗೆ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಎದುರಾಗುವ ಭೀತಿ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 4,000 ಕ್ಯೂಸೆಕ್ ನೀರು ಬಿಡಲು CWMA ಆದೇಶಿಸುರುವ ಕಾರಣ ಆತಂಕ ಹೆಚ್ಚಿದೆ.
ಮಂಡ್ಯ, ಸೆಪ್ಟೆಂಬರ್ 25: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 4,000 ಕ್ಯೂಸೆಕ್ ನೀರು ಬಿಡಲು CWMA ಆದೇಶದ ಬೆನ್ನಲ್ಲೇ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಹಾಹಾಕಾರದ ಭೀತಿ ಎದುರಾಗಿದೆ. ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ 27 ಟಿಎಂಸಿ ಮಾತ್ರ ನೀರಿದ್ದರೆ, ಕೆಆರ್‌ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿ ಒಟ್ಟು 59 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಇದರಲ್ಲಿ ಇದರಲ್ಲಿ 39 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಾಗಲಿದ್ದು, ಈಗ ಅದರಲ್ಲಿ 15 ದಿನ 4 ಸಾವಿರ ಕ್ಯೂಸೆಕ್ ತಮಿಳುನಾಡಿಗೆ ಹರಿದರೆ 5.5 ಟಿಎಂಸಿ ನೀರು ಖಾಲಿಯಾಗಲಿದೆ. ಹೀಗಾಗಿ ಜನವರಿ ತಿಂಗಳ ಒಳಗಾಗಿಯೇ ಹನಿ ನೀರಿಗೂ ಪರದಾಟ ನಡೆಸಬೇಕಾಗಬಹುದೆಂಬ ಮುನ್ಸೂಚನೆ ಸಿಕ್ಕಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 25, 2026 08:10 AM
Follow Us

