AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ಪ್ರಯಾಣದ ವೇಳೆ ಆದ ಕಹಿ ಅನುಭವ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲ ಮತ್ತು ನಾಗರಿಕ ಪ್ರಜ್ಞೆಯ ಕೊರತೆಯಿಂದ ತಮಗಾದ ಕಹಿ ಅನುಭವವನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾವು ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ನಡವಳಿಕೆಯನ್ನು ಯಾವಾಗ ಸುಧಾರಿಸಿಕೊಳ್ಳುತ್ತೇವೆ? ಎಂದವರು ಪ್ರಶ್ನಿಸಿದ್ದಾರೆ.

ರೈಲು ಪ್ರಯಾಣದ ವೇಳೆ ಆದ ಕಹಿ ಅನುಭವ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್
ಶಿವಶ್ರೀ ಸ್ಕಂದಪ್ರಸಾದ್Image Credit source: Sivasri Tejasvi Surya Instagram Page
ಪ್ರಸನ್ನ ಹೆಗಡೆ
|

Updated on: Sep 25, 2026 | 9:18 AM

Share

ಬೆಂಗಳೂರು, ಸೆಪ್ಟೆಂಬರ್​​ 25: ಕಲಾವಿದೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್​​ ರೈಲು ಪ್ರಯಾಣದ ವೇಳೆ ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರೈಲಿನಲ್ಲಿ ತನಗಾದ ಅನುಭವ ನಿಜಕ್ಕೂ ಆಘಾತಕಾರಿ ಮತ್ತು ಬೇಸರ ಮೂಡಿಸುವಂತಿತ್ತು. ಸಾರ್ವಜನಿಕ ಸ್ಥಳಗಳ ಬಗ್ಗೆ ಜನರು ಎಷ್ಟು ಕಡಿಮೆ ಕಾಳಜಿ ವಹಿಸುತ್ತಾರೆ ಎಂಬುದನ್ನು ನೋಡಿ ತುಂಬಾ ಬೇಸರವಾಯಿತು ಎಂದು ಅವರು ಬರೆದುಕೊಂಡಿದ್ದಾರೆ.

ಶಿವಶ್ರೀ ಸ್ಕಂದಪ್ರಸಾದ್​​ ಪೋಸ್ಟ್​​​ನಲ್ಲಿ ಏನಿದೆ?

|

ನಾವು ಸಾರ್ವಜನಿಕ ಸ್ಥಳದಲ್ಲಿರುವಾಗ ಜೋರಾಗಿ ಮಾತನಾಡಬಾರದು, ಕೂಗಾಡಬಾರದು ಹಾಗೂ ಪ್ರತಿಯೊಬ್ಬರ ವೈಯಕ್ತಿಕ ಸ್ಥಳ ಮತ್ತು ನೆಮ್ಮದಿಗೆ ಗೌರವ ನೀಡಬೇಕು. ಕಲಾವಿದರಾದ ನಮಗೆ ಮನಸ್ಸಿನಲ್ಲಿ ಒಂದೇ ಸಮಯದಲ್ಲಿ ನೂರಾರು ಆಲೋಚನೆಗಳು ಓಡುತ್ತಿರುತ್ತವೆ. ನಾವು ಮೌನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ದೊಡ್ಡ ಗುಂಪಿನೊಂದಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಆರಂಭದಲ್ಲಿ ಉಂಟಾಗುವ ಉತ್ಸಾಹವನ್ನು ಎಲ್ಲರೂ ಅರ್ಥಮಾಡಿಕೊಳ್ಳಬಹುದು. ಆದರೆ 56 ಸೀಟುಗಳ ಕೋಚ್‌ನಲ್ಲಿ ಸುಮಾರು 40 ಮಧ್ಯವಯಸ್ಕರು ಐದು ಗಂಟೆಗಳ ಕಾಲ ನಿರಂತರವಾಗಿ ಎಲ್ಲರೊಂದಿಗೆ ಜೋರಾಗಿ ಮಾತನಾಡುತ್ತಾ, ಗದ್ದಲ ಮಾಡುತ್ತಾ ಇದ್ದರೆ ಹೇಗಿರಬಹುದು ಎಂದು ಊಹಿಸಿ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಏರಿದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್: ಸಂಸದರ ಪತ್ನಿಗೆ ನೆಟ್ಟಿಗರಿಂದ ಬಹುಪರಾಕ್​​

ಭಾರತದಲ್ಲಿ ಸಮಸ್ಯೆ ಏನೆಂದರೆ, ಇಂತಹವರನ್ನು ಯಾರೂ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಒಂದು ರೀತಿಯಲ್ಲಿ, ಆ ಗುಂಪಿನ ಭಾಗವಾಗಿರದ ನಮ್ಮಂತಹ ಉಳಿದ 16 ಜನರು ಅದನ್ನೆಲ್ಲ ಸಹಿಸಿಕೊಂಡು ಸುಮ್ಮನಿರಬೇಕು ಎಂಬ ಅಲಿಖಿತ ನಿಯಮವಿದೆ. ಹೀಗಾಗಿ ಬೇರೆ ಕೋಚ್‌ನಲ್ಲಿ ಯಾವುದಾದರೂ ಸೀಟ್ ಸಿಗಬಹುದೇ ಎಂದು ನಾನು ಟಿಟಿಇಯವರನ್ನು ಕೇಳಿದೆ. ಅವರು ಪ್ರಯತ್ನಿಸಿದರು. ಆದರೆ ರೈಲು ಸಂಪೂರ್ಣ ಭರ್ತಿಯಾಗಿದ್ದರಿಂದ, ಅದೇ ಕೋಚ್‌ನಲ್ಲಿ ಬೇರೆ ಸೀಟ್‌ನಲ್ಲಿ ಕುಳಿತುಕೊಳ್ಳಬೇಕಾಯಿತು.

ಅಷ್ಟರಲ್ಲಿ, ಈಗಾಗಲೇ ನಿರಂತರವಾಗಿ ಮಾತನಾಡುತ್ತಾ, ನಗುತ್ತಾ ಗದ್ದಲ ಮಾಡುತ್ತಿದ್ದ 8 ಜನರ ಗುಂಪು UNO ಆಟ ಆಡಲು ಆರಂಭಿಸಿತು. ಆಗ ಮತ್ತೊಮ್ಮೆ ಟಿಟಿಇಯವರ ಬಳಿ ಹೋಗಿ ಏನಾದರೂ ಮಾಡಬಹುದೇ ಎಂದು ಕೇಳಿದೆ. ಅವರು ಆ ಗುಂಪಿನವರಿಗೆ ಆಟ ನಿಲ್ಲಿಸುವಂತೆ ಹೇಳಿದರು. ಅವರು ತಕ್ಷಣ ಆಟ ನಿಲ್ಲಿಸಿದರು. ಆದರೆ ಒಂದೆರಡು ನಿಮಿಷಗಳ ನಂತರ ಟಿಟಿಇ ವಾಪಸ್ ಬಂದು ವ್ಯಂಗ್ಯವಾಗಿ, “ಯಾಕೆ ಸರ್ ಗಲಾಟೆ ಮಾಡ್ತಾ ಇದ್ದೀರಾ?” ಎಂದು ಅವರನ್ನು ಕೇಳಿದರು. ಆಗ ಅವರೆಲ್ಲರೂ ಟಿಟಿಇ ಜೊತೆ ನಕ್ಕು, “ಸರ್, ನೀವೂ ಬನ್ನಿ, ಆಡೋಣ” ಎಂದು ಹೇಳಿದರು. ಹೀಗಾಗಿ ಇಲ್ಲಿ ಯಾರು ಗೆದ್ದರು ಎಂಬುದು ವಿಷಯವಲ್ಲ. ಅವರ ಜೊತೆಯಲ್ಲಿ ನಾನೂ ಒಬ್ಬ ಭಾರತೀಯನಾಗಿ ನಾಗರಿಕ ಪ್ರಜ್ಞೆಯ ಆಟದಲ್ಲಿ ಸೋತಿದ್ದೇವೆ. ನಾವು ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ನಡವಳಿಕೆಯನ್ನು ಯಾವಾಗ ಸುಧಾರಿಸಿಕೊಳ್ಳುತ್ತೇವೆ? ಎಂದವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಸಿದ್ದರಾಮಯ್ಯ ಒಪ್ಪಿದ್ದು ಹೇಗೆ?
ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಸಿದ್ದರಾಮಯ್ಯ ಒಪ್ಪಿದ್ದು ಹೇಗೆ?