AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: RCB ಜೇಕಬ್ ಬೆಥೆಲ್‌ನನ್ನು ಕೈಬಿಡಲು ಇದುವೇ ಅಸಲಿ ಕಾರಣ!

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಒಟ್ಟು 6 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಹಾಗೆಯೇ 20 ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ಆದರೆ, ಈ ಇಪ್ಪತ್ತು ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಇಲ್ಲ ಎಂಬುದು ವಿಶೇಷ.

IPL 2027: RCB ಜೇಕಬ್ ಬೆಥೆಲ್‌ನನ್ನು ಕೈಬಿಡಲು ಇದುವೇ ಅಸಲಿ ಕಾರಣ!
Jacob BethellImage Credit source: IPL
ಝಾಹಿರ್ ಯೂಸುಫ್
|

Updated on: Nov 19, 2026 | 7:48 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ನವೆಂಬರ್ 17, 2026 ರಂದು ನಡೆದ ಆಟಗಾರರ ರಿಟೆನ್ಶನ್ ಪ್ರಕ್ರಿಯೆಯಲ್ಲಿ, ಇಂಗ್ಲೆಂಡ್‌ನ ಯುವ ಸ್ಫೋಟಕ ಆಲ್‌ರೌಂಡರ್ ಜೇಕಬ್ ಬೆಥೆಲ್ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಟ್ಟಿದೆ. ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದ ಬೆಥೆಲ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ, ಈ ಕಠಿಣ ನಿರ್ಧಾರದ ಹಿಂದೆ ಗಂಭೀರವಾದ ಗಾಯದ ಸಮಸ್ಯೆ ಹಾಗೂ ತಂಡದ ಹರಾಜಿನ ಲೆಕ್ಕಾಚಾರಗಳಿವೆ.

ಮೊಣಕಾಲಿನ ಗಾಯ!

2026ರ ಜುಲೈ ತಿಂಗಳಲ್ಲಿ ಭಾರತದ ವಿರುದ್ಧದ ಏಕದಿನ ಸರಣಿಯ ವೇಳೆ ಜೇಕಬ್ ಬೆಥೆಲ್ ಅವರ ಬಲ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಇದಕ್ಕಾಗಿ ಅವರು ಸೆಪ್ಟೆಂಬರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ಅಭ್ಯಾಸದ ವೇಳೆ ಅದೇ ಮೊಣಕಾಲಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ಇದೀಗ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಐಪಿಎಲ್​ಗೆ ಅಲಭ್ಯ:

ಮತ್ತೊಂದು ಶಸ್ತ್ರಚಿಕಿತ್ಸೆಯ ನಂತರ ಜೇಕಬ್ ಬೆಥೆಲ್ ಸಂಪೂರ್ಣವಾಗಿ ಫಿಟ್ ಆಗಿ ಮೈದಾನಕ್ಕೆ ಮರಳಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಜೊತೆ ಸಮಾಲೋಚಿಸಿದ ನಂತರ, 2027ರ ಪ್ರತಿಷ್ಠಿತ ಆ್ಯಶಸ್ ಸರಣಿ ಮತ್ತು ಏಕದಿನ ವಿಶ್ವಕಪ್‌ಗೆ ಸಜ್ಜಾಗುವ ದೃಷ್ಟಿಯಿಂದ ಬೆಥೆಲ್ ಮುಂಬರುವ ಐಪಿಎಲ್ ಸೀಸನ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಆರ್‌ಸಿಬಿ ಸ್ಪಷ್ಟನೆ:

ಜೇಕಬ್ ಬೆಥೆಲ್ ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೋ ಬೊಬಾಟ್, “ಬೆಥೆಲ್ ಅವರ ಗಾಯ ಮರುಕಳಿಸಿರುವುದು ಮತ್ತು ಅವರು ಯಾವಾಗ ಕ್ರಿಕೆಟ್‌ಗೆ ಮರಳುತ್ತಾರೆ ಎಂಬ ಅನಿಶ್ಚಿತತೆ ಇರುವುದರಿಂದ, ಭಾರವಾದ ಮನಸ್ಸಿನಿಂದ ಅವರನ್ನು ಬಿಡುಗಡೆ ಮಾಡುವ ಕಠಿಣ ನಿರ್ಧಾರ ಕೈಗೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಹರಾಜಿನ ಪರ್ಸ್ ಲೆಕ್ಕಾಚಾರ:

ಜೇಕಬ್ ಬೆಥೆಲ್ ಮುಂಬರುವ ಟೂರ್ನಿಗೆ ಸಂಪೂರ್ಣವಾಗಿ ಅಲಭ್ಯರಾಗಿರುವುದರಿಂದ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಆರ್‌ಸಿಬಿಗೆ ನಷ್ಟವಾಗುತ್ತಿತ್ತು. ಇದೀಗ ಅವರನ್ನು ಬಿಡುಗಡೆ ಮಾಡಿರುವುದರಿಂದ, ಡಿಸೆಂಬರ್ 16 ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಆರ್‌ಸಿಬಿಗೆ ಒಂದು ವಿದೇಶಿ ಆಟಗಾರನ ಸ್ಥಾನ ಮತ್ತು ಪರ್ಸ್‌ಗೆ ₹2.60 ಕೋಟಿ ಹೆಚ್ಚುವರಿ ಹಣ ಲಭ್ಯವಾದಂತಾಗಿದೆ.

ಕಳೆದ ಎರಡು ಸೀಸನ್‌ಗಳ ಹಿನ್ನೆಲೆ:

ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಬೆಥೆಲ್ ಕೇವಲ 9 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. 2026ರ ಸೀಸನ್‌ನಲ್ಲೂ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಅವರು ಟೂರ್ನಿಯ ಅರ್ಧದಲ್ಲೇ ತವರಿಗೆ ಮರಳಿದ್ದರು. ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದು ಕೂಡ ಫ್ರಾಂಚೈಸಿಯ ಈ ನಿರ್ಧಾರಕ್ಕೆ ಕಾರಣವಾಗಿದೆ.

ಇದೀಗ ಹರಾಜಿಗಾಗಿ ಭರ್ಜರಿ ರಣತಂತ್ರ ರೂಪಿಸುತ್ತಿರುವ ಆರ್‌ಸಿಬಿ, ಡಿಸೆಂಬರ್ 16 ರಂದು ನಡೆಯಲಿರುವ ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಜೇಕಬ್ ಬೆಥೆಲ್ ಸ್ಥಾನಕ್ಕೆ ಸಮರ್ಥ ಬದಲಿ ಆಲ್‌ರೌಂಡರ್‌ನನ್ನು ಖರೀದಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಟಾಸ್ ಗೆದ್ದ ಟೀಮ್ ಇಂಡಿಯಾ: ನ್ಯೂಝಿಲೆಂಡ್​ಗೆ ಆರಂಭಿಕ ಆಘಾತ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಜೋರ್ಡನ್ ಕಾಕ್ಸ್, ಕೃನಾಲ್ ಪಾಂಡ್ಯ, ವೆಂಕಟೇಶ್ ಅಯ್ಯರ್, ರೊಮಾರಿಯೋ ಶೆಫರ್ಡ್, ಕನಿಷ್ಕ್ ಚೌಹಾಣ್, ವಿಕಿ ಓಸ್ಟ್ವಾಲ್, ಭುವನೇಶ್ವರ್ ಕುಮಾರ್, ಜೋಶ್ ಹೇಝಲ್‌ವುಡ್, ನುವಾನ್ ತುಷಾರ, ಜೇಕಬ್ ಡಫಿ, ಯಶ್ ದಯಾಳ್, ರಾಸಿಖ್ ದಾರ್, ಸುಯಶ್ ಶರ್ಮಾ ಮತ್ತು ಅಭಿನಂದನ್ ಸಿಂಗ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್
ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್
ಇಂದು ಯಾವ ರಾಶಿಯವರಿಗೆ ಗುರುಬಲವಿದೆ ನೋಡಿ
ಇಂದು ಯಾವ ರಾಶಿಯವರಿಗೆ ಗುರುಬಲವಿದೆ ನೋಡಿ
ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಕೃಷಿಮೇಳದಲ್ಲಿ ಗಮನಸೆಳೆದ 25 ಲೀಟರ್ ಹಾಲು ಕೊಡುವ ಆನೆಯಂಥಾ ಎಮ್ಮೆ
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: ವಿದೇಶಕ್ಕೆ ರಫ್ತು
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
ಬೆಂಗಳೂರಿಗೆ ನಾನೇ ಲಾಸ್ಟ್ ಅನ್ ಡಿವೈಡೆಡ್ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್
‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರ